ಟಾಲಿವುಡ್ ಬ್ಯೂಟಿ ಕೃತಿ ಶೆಟ್ಟಿ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಉಪ್ಪೇನ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿ, ಮೊದಲ ಸಿನಿಮಾದಲ್ಲೇ ಭರ್ಜರಿ ಯಶಸ್ಸು ಗಳಿಸಿದರು.
ಯಶಸ್ಸಿನ ಬೆನ್ನೇರಿ
ಉಪ್ಪೇನ ಸಿನಿಮಾದ ಯಶಸ್ಸಿನ ಬಳಿಕ ಕೃತಿ ಶೆಟ್ಟಿ, ಯುವಜನರ ಮನಗೆದ್ದರು. ಇದಾದ ನಂತರ, ಆಕೆ ಅನೇಕ ಚಿತ್ರಗಳಲ್ಲಿ ನಟಿಸಿದಳು. ಆದರೆ, ಬೆರಳಣಿಕೆ ಸಿನಿಮಾಗಳು ಮಾತ್ರ ಗೆಲುವು ತಂದುಕೊಟ್ಟವು.
ಬಾಲಿವುಡ್ಗೂ ಹೆಜ್ಜೆ
ಕೃತಿ ಶೆಟ್ಟಿ ಇಂದಿಗೂ ಸ್ಟಾರ್ ಇಮೇಜ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಪ್ರಸ್ತುತ ಅವರು ತೆಲುಗು ಹೊರತುಪಡಿಸಿ ಬೇರೆ ಭಾಷೆಗಳ ಚಿತ್ರಗಳಲ್ಲಿ ನಟಿಸಲು ಸಿದ್ಧರಾಗುತ್ತಿದ್ದಾರೆ. ಬಾಲಿವುಡ್ಗೂ ಹೆಜ್ಜೆ ಹಾಕುವ ಸಾಧ್ಯತೆ ಇದೆಯಂತೆ.
ಕಪ್ಪು ದಿರಿಸಿನಲ್ಲಿ ಮಿಂಚು
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಕೃತಿ, ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ಕಪ್ಪು ಬಣ್ಣದ ಉಡುಪಿನಲ್ಲಿ ಹಾಸಿಗೆಯ ಮೇಲೆ ಮಲಗಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ.
ಅಭಿಮಾನಿಗಳು ಫಿದಾ
ಪ್ರಸ್ತುತ ಆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಆ ಫೋಟೋಗಳನ್ನು ನೋಡಿ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಕೃತಿ ತುಂಬಾ ಹಾಟ್ ಆಗಿ ಕಾಣುತ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.