ಮಾಜಿ ಬಿಗ್ಬಾಸ್ ಸ್ಪರ್ಧಿ ಹಾಗೂ ನಟಿ ಜಯಶ್ರೀ ಆರಾಧ್ಯ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಇಂದು ಹಂಚಿಕೊಂಡಿರುವ ಹಾಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯ
ಜಯಶ್ರೀ ಆರಾಧ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುತ್ತಾರೆ. ಯಾವಾಗಲೂ ಬೋಲ್ಡ್ ಫೋಟೋಗಳನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿಯೇರಿಸುತ್ತಿರುತ್ತಾರೆ.
ವೈರಲ್ ಫೋಟೋ
ಇತ್ತೀಚೆಗೆ ಆಕೆ ಗೋವಾ ಪ್ರವಾಸ ಮಾಡಿದ್ದು, ಶೇರ್ ಮಾಡಿಕೊಂಡಿರುವ ಫೋಟೋಗಳಲ್ಲಿ ಬಿಳಿ ಬಣ್ಣದ ಶಾರ್ಟ್ ಡ್ರೆಸ್ ಧರಿಸಿ, ಸನ್ ಗ್ಲಾಸ್ ಹಾಕಿ, ಕೂದಲು ಹಿಂದಕ್ಕೆ ಕಟ್ಟಿ ತುಂಬಾ ಮಾದಕ ಭಂಗಿಗಳಲ್ಲಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ.
ಕ್ಯಾಚಿ ಅಡಿಬರಹ
ಶೇರ್ ಮಾಡಿಕೊಂಡಿರುವ ಫೋಟೋಗಳಿಗೆ "ನಾನೇ ಇಲ್ಲಿ ಎಲ್ಲರಿಗಿಂತ ಹೈಲೈಟ್, ಆದರೆ ನನ್ನ ಹೇರ್ ಸ್ಟೈಲ್, ಈ ಡ್ರೆಸ್ ಅಥವಾ ಹೈ ಹೀಲ್ಸ್ ಪಾದರಕ್ಷೆಗಳಲ್ಲಿ ಯಾವುದು ಹೆಚ್ಚು ಲುಕ್ ಕೊಡುತ್ತಿದೆ?" ಎಂದು ಅಡಿಬರಹ ಬರೆದುಕೊಂಡಿದ್ದಾರೆ.
ರಿಯಾಲಿಟಿ ಶೋ
ಅಂದಹಾಗೆ, ಜಯಶ್ರೀ ಅವರು ಒಟಿಟಿಯಲ್ಲಿ ಪ್ರಸಾರವಾದ 'ಬಿಗ್ ಬಾಸ್ ಕನ್ನಡ'ದ ಮೊದಲ ಸೀಸನ್‌ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು.
ಸಿನಿಮಾಗಳು
ಜಯಶ್ರೀ ಅವರು ಪುಟ್ಟರಾಜು ಲವರ್ ಆಫ್ ಶಶಿಕಲಾ, ಧರಣಿ ಮಂಡಲ ಮಧ್ಯದೊಳಗೆ ಮತ್ತು ಬೆಂಗಳೂರು ಬಾಯ್ಸ್ ಸಿನಿಮಾದಲ್ಲಿ ನಟಿಸಿದ್ದಾರೆ.
ಮಾರಿಮುತ್ತು ಮೊಮ್ಮಗಳು
ಸೂಪರ್ ಹಿಟ್ ಸಿನಿಮಾ 'ಉಪೇಂದ್ರ'ದಲ್ಲಿ 'ಮಾರಿಮುತ್ತು' ಎಂಬ ವಿಲಕ್ಷಣ ಹಾಗೂ ವಿಭಿನ್ನ ಪಾತ್ರದ ಮೂಲಕ ಇಡೀ ಕರ್ನಾಟಕಕ್ಕೆ ಪರಿಚಿತರಾದ ನಟಿ ಜಯಮ್ಮ ಅವರ ಮೊಮ್ಮಗಳು ಈ ಜಯಶ್ರೀ.
ಉದ್ಯಮದತ್ತ ಮುಖ
ಸಿನಿಮಾಗಳಲ್ಲಿ ನಟಿಸಿ ಅದೃಷ್ಟಪರೀಕ್ಷೆಗೆ ಇಳಿದಿದ್ದ ಜಯಶ್ರೀ ಆರಾಧ್ಯ ಅವರು ಸದ್ಯ ಉದ್ಯಮದ ಕಡೆಗೆ ಮುಖ ಮಾಡಿದ್ದಾರೆ. ಐಷಾರಾಮಿ ಸಲೂನ್ ಅನ್ನು ನಡೆಸುತ್ತಿದ್ದಾರೆ.