ನಟಿ ಹಾಗೂ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ದಿಶಾ ಮದನ್ ಅವರ ಹೊಸ ಹಾಟ್ ಅವತಾರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಸೋಷಿಯಲ್ ಮೀಡಿಯಾ ಸ್ಟಾರ್
ದಿಶಾ ಅವರು ಟಿಕ್‌ಟಾಕ್ ಆ್ಯಪ್ ಜನಪ್ರಿಯವಾಗಿದ್ದ ಸಮಯದಲ್ಲಿ ಅದ್ಭುತ ಡ್ಯಾನ್ಸ್ ಮತ್ತು ಲಿಪ್-ಸಿಂಕ್ ವಿಡಿಯೋಗಳ ಮೂಲಕ ಜನಪ್ರಿಯತೆ ಗಳಿಸಿದರು. ಸದ್ಯ ಇನ್‌ಸ್ಟಾಗ್ರಾಂ ಸೇರಿದಂತೆ ವಿವಿಧ ಡಿಜಿಟಲ್ ವೇದಿಕೆಗಳಲ್ಲಿ ಮಿಲಿಯನ್‌ಗಟ್ಟಲೆ ಫಾಲೋವರ್ಸ್ ಹೊಂದಿದ್ದಾರೆ.
ಕಿರುತೆರೆ ಪ್ರವೇಶ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ಹಿಟ್ ಧಾರಾವಾಹಿ 'ಕುಲವಧು' ಮೂಲಕ ದಿಶಾ ಅವರು ನಟನಾ ರಂಗಕ್ಕೆ ಪಾದಾರ್ಪಣೆ ಮಾಡಿದರು. 'ವಚನಾ' ಎಂಬ ನೆಗೆಟಿವ್ ಪಾತ್ರ ಇಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದಿದೆ.
ಬೆಳ್ಳಿಪರದೆಗೆ ಎಂಟ್ರಿ
ಕಿರುತೆರೆ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ ನಂತರ, ದಿಶಾ ಅವರು ಹಾಸ್ಯನಟ ದಾನಿಶ್ ಸೇಠ್ ಮುಖ್ಯ ಭೂಮಿಕೆಯಲ್ಲಿದ್ದ ಫ್ರೆಂಚ್ ಬಿರಿಯಾನಿ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಪರಿಚಯವಾದರು.
ನೃತ್ಯಗಾರ್ತಿ ಹಾಗೂ ಉದ್ಯಮಿ
ದಿಶಾ ಅವರು ಮೂಲತಃ ಉತ್ತಮ ಭರತನಾಟ್ಯ ಪ್ರವೀಣೆ. ನಟನೆ ಜೊತೆಗೆ ಉದ್ಯಮಗಳಲ್ಲೂ ಆಸಕ್ತಿ ಹೊಂದಿರುವ ಇವರು, 'ಡ್ಯಾನ್ಸ್ ಕಾರ್ಪೊರೇಷನ್' ಎಂಬ ನೃತ್ಯ ಶಾಲೆ ಆರಂಭಿಸಿ ಇತರರಿಗೂ ತರಬೇತಿ ನೀಡುತ್ತಿದ್ದಾರೆ.
ರಿಯಾಲಿಟಿ ಶೋ
ನೃತ್ಯದ ಮೇಲಿನ ಇವರ ಆಸಕ್ತಿಯಿಂದಾಗಿ ಕನ್ನಡದ ಪ್ರಮುಖ ಡ್ಯಾನ್ಸ್ ರಿಯಾಲಿಟಿ ಶೋಗಳಾದ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ನಂತಹ ವೇದಿಕೆಗಳಲ್ಲಿ ಸ್ಪರ್ಧಿಯಾಗಿ ಹಾಗೂ ತೀರ್ಪುಗಾರರಾಗಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ.
ವೈಯಕ್ತಿಕ ಜೀವನ
ಶಶಾಂಕ್ ವಾಸುಕಿ ಗೋಪಾಲ್ ಅವರನ್ನು ವಿವಾಹವಾಗಿರುವ ದಿಶಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ (ಮಗ ವಿಹಾನ್ ಮತ್ತು ಮಗಳಾದ ಅವಿರಾ). ವೃತ್ತಿಜೀವನದ ನಡುವೆಯೂ ಫ್ಯಾಮಿಲಿ ವ್ಲಾಗ್‌ಗಳು ಮಾಡುತ್ತಿರುತ್ತಾರೆ.
ಫೋಟೋಸ್ ವೈರಲ್
ಪ್ರಸ್ತುತ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೋಗಳಲ್ಲಿ ನಟಿ ದಿಶಾ, ತಿಳಿ ನೀಲಿ ಬಣ್ಣದ ಹಾಲ್ಟರ್ ನೆಕ್ ಲೇಸ್ ವಿನ್ಯಾಸದ ಬಾಡಿಸ್‌ನೊಂದಿಗೆ ಟೈಯರ್ಡ್ ರಫಲ್ಸ್ ಸ್ಕರ್ಟ್ ಹೊಂದಿರುವ ಕಿರು ಡ್ರೆಸ್ ಧರಿಸಿದ್ದು, ಫೋಟೋಸ್ ವೈರಲ್ ಆಗಿವೆ.
ಫ್ಯಾನ್ಸ್
ವೈರಲ್ ಆಗಿರುವ ಫೋಟೋಗಳಲ್ಲಿ ದಿಶಾ ಅವರ ಹಾಟ್ ಅವತಾರವನ್ನು ನೋಡಿದ ಅಭಿಮಾನಿಗಳು ದಿಶಾ ಮೈಮಾಟಕ್ಕೆ ಮನಸೋತಿದ್ದು, ತರಹೇವಾರಿ ಕಾಮೆಂಟ್ಗಳ ಮೂಲಕ ಸೌಂದರ್ಯವನ್ನು ಹೊಗಳುತ್ತಿದ್ದಾರೆ.