ಬೋಲ್ಡ್​ ಅವತಾರದಲ್ಲಿ ಧನ್ಯಾ ರಾಮ್​ಕುಮಾರ್!​

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೋಲ್ಡ್​ ಅವತಾರದಲ್ಲಿ ಧನ್ಯಾ ರಾಮ್​ಕುಮಾರ್!​

ವರನಟ ಡಾ. ರಾಜ್​ಕುಮಾರ್​ ಅವರ ಮೊಮ್ಮಗಳು ಹಾಗೂ ನಟ ರಾಮ್​ಕುಮಾರ್​ ಅವರ ಮಗಳು ಧನ್ಯಾ ರಾಮ್​ಕುಮಾರ್​ ಅವರ ಹಾಟ್​ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ.

ರಾಜ್‌ ಕುಟುಂಬದ ಹಿನ್ನೆಲೆ

ಧನ್ಯಾ ಅವರು ಕನ್ನಡ ಚಿತ್ರರಂಗದ ದಂತಕಥೆ ಡಾ. ರಾಜ್‌ಕುಮಾರ್ ಅವರ ಮೊಮ್ಮಗಳು. ನಟ ರಾಮ್‌ಕುಮಾರ್ ಹಾಗೂ ಪೂರ್ಣಿಮಾ ದಂಪತಿಯ ಪುತ್ರಿಯಾಗಿರುವ ಧನ್ಯಾ, ರಾಜ್‌ ಕುಟುಂಬದಿಂದ ಚಿತ್ರರಂಗಕ್ಕೆ ನಾಯಕಿಯಾಗಿ ಪದಾರ್ಪಣೆ ಮಾಡಿದ ಮೊದಲ ಮಹಿಳೆಯಾಗಿದ್ದಾರೆ.

ಚಿತ್ರರಂಗಕ್ಕೆ ಪದಾರ್ಪಣೆ

ಇವರು 2021 ರಲ್ಲಿ ಬಿಡುಗಡೆಯಾದ 'ನಿನ್ನ ಸನಿಹಕೆ' ಎಂಬ ರೋಮ್ಯಾಂಟಿಕ್ ಚಿತ್ರದ ಮೂಲಕ ಕನ್ನಡ ಸಿನೆಮಾ ಇಂಡಸ್ಟ್ರಿಗೆ ನಾಯಕಿಯಾಗಿ ಎಂಟ್ರಿ ಕೊಟ್ಟರು.

ಫಿಲ್ಮ್‌ಫೇರ್ ಪ್ರಶಸ್ತಿ

ತಮ್ಮ ಚೊಚ್ಚಲ ಚಿತ್ರ 'ನಿನ್ನ ಸನಿಹಕೆ' ಸಿನಿಮಾದ ಅತ್ಯುತ್ತಮ ನಟನೆಗಾಗಿ ಸೌತ್ ಇಂಡಸ್ಟ್ರಿಯ ಪ್ರತಿಷ್ಠಿತ 'ಅತ್ಯುತ್ತಮ ಪದಾರ್ಪಣೆ ನಟಿ' ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಶಿಕ್ಷಣದ ವಿವರ

ಬೆಂಗಳೂರಿನಲ್ಲಿಯೇ ಬೆಳೆದ ಇವರು, ಜೈನ್ ವಿಶ್ವವಿದ್ಯಾಲಯದಿಂದ ಮಾಸ್ ಕಮ್ಯುನಿಕೇಶನ್ ಮತ್ತು ಜರ್ನಲಿಸಂ ವಿಷಯದಲ್ಲಿ ಬಿ.ಎ. ಪದವಿ ಪಡೆದಿದ್ದಾರೆ.

ಉದ್ಯೋಗದ ಹಿನ್ನೆಲೆ

ನಟಿಯಾಗುವ ಮೊದಲು ಇವರು ಬೆಂಗಳೂರಿನ ಪ್ರಸಿದ್ಧ ಪಿಆರ್ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿ ಕೆಲಸ ನಿರ್ವಹಿಸುತ್ತಿದ್ದರು ಮತ್ತು ಫ್ಯಾಷನ್ ಮಾಡೆಲಿಂಗ್ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದರು.

ಇತರ ಸಿನಿಮಾಗಳು

'ನಿನ್ನ ಸನಿಹಕೆ' ಚಿತ್ರದ ಯಶಸ್ಸಿನ ನಂತರ ಇವರು ಹೈಡ್ ಆಂಡ್ ಸೀಕ್, ದ ಜಡ್ಜ್‌ಮೆಂಟ್, ಪೌಡರ್ ಮತ್ತು ಕಾಲಾಪತ್ಥರ್​ ನಂತಹ ಪ್ರಮುಖ ಕನ್ನಡ ಚಿತ್ರಗಳಲ್ಲಿ ನಟಿಸಿ ಗುರುತಿಸಿಕೊಂಡಿದ್ದಾರೆ.

ಹಾಟ್​ ಫೋಟೋಸ್​

ಜಾಲತಾಣದಲ್ಲಿ ಸಕ್ರಿಯರಾಗಿರುವ ಧನ್ಯಾ ಆಗಾಗ ಹಾಟ್​ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ತಮ್ಮ ಇನ್‌ಸ್ಟಾದಲ್ಲಿ ಸಮುದ್ರದ ಸುಂದರವಾದ ಹಿನ್ನೆಲೆಯಲ್ಲಿ, ನೀಲಿ ಆಕಾಶ ಮತ್ತು ತಿಳಿ ನೀಲಿ ಬಣ್ಣದ ನೀರಿನ ಸೌಂದರ್ಯ ಆಸ್ವಾದಿಸುತ್ತಾ ಗ್ಲಾಮರಸ್ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಸ್ವಿಮ್​ ಸೂಟ್​ನಲ್ಲಿ ಧನ್ಯಾ

ವೈರಲ್​ ಫೋಟೋದಲ್ಲಿ ಧನ್ಯಾ ಅವರು ಕಪ್ಪು ಮತ್ತು ಕೇಸರಿ ಬಣ್ಣದ ಕಾಂಬಿನೇಷನ್ ಇರುವ ಸ್ವಿಮ್​ಶೂಟ್​ ಧರಿಸಿ, ಅದಕ್ಕೆ ಮ್ಯಾಚ್ ಆಗುವಂತಹ ಮಲ್ಟಿಕಲರ್ ಲಂಗ ಮಾದರಿಯನ್ನು ಧರಿಸಿದ್ದಾರೆ. ತುಂಬಾ ಮಾದಕವಾಗಿ ಪೋಸ್​ ನೀಡಿದ್ದು, ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.