ಸೌತ್ ಬ್ಯೂಟಿ ಅನುಪಮಾ ಪರಮೇಶ್ವರನ್ ಕಳೆದ ವರ್ಷ ಸುಮಾರು 5-6 ಚಿತ್ರಗಳ ಮೂಲಕ ಜನರನ್ನು ರಂಜಿಸಿದ್ದರು. ಈ ವರ್ಷವೂ ಬಿಡುಗಡೆಯಾಗುವ ಹಲವು ಚಿತ್ರಗಳ ನಟಿಸಿದ್ದಾರೆ.
ಅನುಪಮಾ ಫೋಟೋ ವೈರಲ್
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ನಟಿ ಅನುಪಮಾ, ಇತ್ತೀಚೆಗೆ ಕೆಂಪು ಸೀರೆ ತೊಟ್ಟು ಫೋಟೋಶೂಟ್ ಮಾಡಿದ್ದು, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಇಂಟರ್ನೆಟ್ನಲ್ಲಿ ವೈರಲ್ ಆಗಿವೆ.
ಕೆಂಪು ಸೀರೆಗೆ ಫಿದಾ ಆದ ಅಭಿಮಾನಿಗಳು
ನಟಿ ಅನುಪಮಾ ಕೆಂಪು ಸೀರೆ ತೊಟ್ಟು ಗೋಡೆ ಬಳಿ ನಿಂತು, ಕುಳಿತು ತೆಗೆದುಕೊಂಡ ಪೋಟೋಗಳು ವೈರಲ್ ಆಗಿವೆ. ಅವರ ಸೌಂದರ್ಯಕ್ಕೆ ಬೆರಗಾದ ಅಭಿಮಾನಿಗಳು, ಕಾಮೆಂಟ್‌ಗಳ ಸುರಿಮಳೆಗೈಯುತ್ತಿದ್ದಾರೆ.
ತ್ರಿಸ್ಸೂರ್ನಲ್ಲಿ ಜನನ
ಅನುಪಮಾ ಪರಮೇಶ್ವರನ್ ಕೇರಳದ ತ್ರಿಸ್ಸೂರ್ ಜಿಲ್ಲೆಯ ಇರಿಂಜಲಕುಡದಲ್ಲಿ 1996, ಫೆ. 18ರಂದು ಮಲಯಾಳಿ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಪರಮೇಶ್ವರನ್ ಎರೆಕ್ಕತ್ ಮತ್ತು ತಾಯಿ ಸುನಿತಾ ಪರಮೇಶ್ವರನ್.
ಕನ್ನಡಿಗರಿಗೂ ಪರಿಚಯ
ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಮಿಂಚಿರುವ ಅನುಪಮಾ, ಪುನೀತ್ ರಾಜ್ಕುಮಾರ್ ಅಭಿನಯದ ನಟಸಾರ್ವಭೌಮ ಸಿನಿಮಾದಲ್ಲೂ ನಟಿಸುವ ಮೂಲಕ ಅನುಪಮಾ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ.
ಮೊದಲ ಚಿತ್ರದಲ್ಲೇ ಯಶಸ್ಸು
2015ರಲ್ಲಿ ಮಲಯಾಳ ಚಿತ್ರ 'ಪ್ರೇಮಂ'ನಲ್ಲಿ ಮೇರಿ ಜಾರ್ಜ್ ಪಾತ್ರದ ಮೂಲಕ ಅಭಿನಯ ಜಗತ್ತಿಗೆ ಪರಿಚಯಿಸಿಕೊಂಡ ಅನುಪಮಾ, ನಿವಿನ್ ಪೌಲಿಯೊಂದಿಗೆ ನಟಿಸಿ ದೊಡ್ಡ ಯಶಸ್ಸು ಗಳಿಸಿದರು.