ರೈಲ್ವೆ ಟ್ರ್ಯಾಕ್ ಮೇಲೆ ನಿಂತು ಬೋಲ್ಡ್ ಪೋಸ್ ನೀಡಿದ ನಟಿ ಅನನ್ಯಾ
ನಿರುಪಾದಿ ಬ್ಯಾಡಗಿ
ರೈಲ್ವೆ ಟ್ರ್ಯಾಕ್ ಮೇಲೆ ನಿಂತು ಬೋಲ್ಡ್ ಪೋಸ್ ನೀಡಿದ ನಟಿ ಅನನ್ಯಾ
ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆ್ಯಕ್ಟಿವ್ ಆಗಿರುವ ತೆಲುಗು ಸಿನಿಮಾ ರಂಗದ ಖ್ಯಾತ ನಟಿ ಅನನ್ಯಾ ನಾಗಲ್ಲ, ಆಗಾಗ ತಮ್ ಇನ್ಸ್ಟಾಗ್ರಾಂನಲ್ಲಿ ಹೆಚ್ಚು ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ತಾರೆ.
ರೈಲ್ವೆ ಟ್ರ್ಯಾಕ್ ಮೇಲೆ ನಿಂತು ಪೋಸ್
ಅನನ್ಯ ನಾಗಲ್ಲ ಅವರ ಇತ್ತೀಚಿನ ಫೋಟೋಶೂಟ್ ಬಹಳ ಟ್ರೆಂಡ್ ಆಗಿದ್ದು, ವೈಟ್ ಸ್ಲೀವ್ಲೆಸ್ ಟಾಪ್, ಬ್ಲಾಕ್ ಡೆನಿಮಾ ಶಾರ್ಟ್ಸ್ ಹಾಕಿ ಪೋಸ್ ನೀಡಿ ಮಾದಕವಾಗಿ ಕಾಣಿಸಿಕೊಂಡಿದ್ದಾರೆ.
ಗ್ಲ್ಯಾಮ್ ಲುಕ್ ಎಂದು ಹೊಗಳಿಕೆ
ಅನನ್ಯ ನಾಗಲ್ಲ ರೈಲ್ವೆ ಟ್ರ್ಯಾಕ್, ಸ್ಟೇಷನ್ ಥೀಮ್ ಫೋಟೋಶೂಟ್ಗೆ ಅಭಿಮಾನಿಗಳು ಫಿದಾ ಆಗಿದ್ದು, ಇದು ಬಹಳ ಕ್ಯಾಸುವಲ್ ಗ್ಲ್ಯಾಮರ್ ಲುಕ್ ಎಂದು ಹೊಗಳುತ್ತಿದ್ದಾರೆ.
ಮಲ್ಲೇಶಮ್ ಚಿತ್ರದ ಮೂಲಕ ಸಿನಿಮಾಗೆ ಎಂಟ್ರಿ
ನಟಿ ಅನನ್ಯ ನಾಗಲ್ಲ ಮೂಲತಃ ತೆಲಂಗಾಣದವರಾಗಿದ್ದು, 2019ರಲ್ಲಿ ಬಿಡುಗಡೆಯಾದ ಮಲ್ಲೇಶಮ್ ಚಿತ್ರದ ಮೂಲಕ ಸಿನಿಮಾ ರಂಗ ಪ್ರವೇಶಿಸಿದ್ದಾರೆ.
ಹಿಟ್ ಚಿತ್ರಗಳಲ್ಲಿ ನಟನೆ
ಮಲ್ಲೇಶಮ್ ಸಿನಿಮಾ ಮೂಲಕ ನಟಿಯಾಗಿ ಎಂಟ್ರಿ ಬಳಿಕ ಅನನ್ಯಾ, 2021ರಲ್ಲಿ ಬಂದ ಪವನ್ ಕಲ್ಯಾಣ್ ಅಭಿನಯದ ವಕೀಲ್ ಸಾಬ್, ಪ್ಲೇ ಬ್ಯಾಕ್, ಪೊಟ್ಟಲ್ ಸೇರಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.
ಅಭಿಮಾನಿ ಕಮೆಂಟ್ಗೆ ಕರಗಿ ಹೋಗಿದ್ದ ಅನನ್ಯಾ
ಅನನ್ಯಾ ಶೋ ರೂಂ ಒಂದರ ಉದ್ಘಾಟನೆಗೆ ಹೋಗಿದ್ದಾಗ, ಅಲ್ಲಿದ್ದ ಅಭಿಮಾನಿಯೊಬ್ಬ ನಿಮ್ಮ ಸೊಂಟ ಸೂಪರ್ ಮೇಡಂ ಎಂದಿದ್ದನಂತೆ, ಆ ಮಾತಿಗೆ ನನಗೆ ಸಿಟ್ಟು ಬರಲಿಲ್ಲ, ಆ ಹೊಗಳಿಕೆ ನನಗೆ ಇಷ್ಟವಾಯಿತು ಎಂದು ಸಂದರ್ಶನದಲ್ಲಿ ಹೇಳಿದ್ದರು.