ಕಾಲಿವುಡ್ನ ಕ್ಯೂಟ್ ಹಾಗೂ ದಿ ಬೆಸ್ಟ್ ಜೋಡಿ ನಟ ಸೂರ್ಯ ಮತ್ತು ಜ್ಯೋತಿಕಾ ಅವರ ಪ್ರೀತಿಗೆ ಆರಂಭದಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಿರಲಿಲ್ಲ. ಈ ಸಂಬಂಧಕ್ಕೆ ಸೂರ್ಯ ಅವರ ತಂದೆ ಒಪ್ಪಿಗೆ ಕೊಟ್ಟಿರಲಿಲ್ಲ.
ಸೂರ್ಯ-ಜ್ಯೋತಿಕಾ ಪ್ರೀತಿಗೆ ವಿರೋಧ
ಸೂರ್ಯ ಮತ್ತು ಅವರ ಪತ್ನಿ ಜ್ಯೋತಿಕಾ ಲವ್ಸ್ಟೋರಿ ತುಂಬ ಜನಕ್ಕೆ ಗೊತ್ತೇ ಇದೆ. ಕಾಲಿವುಡ್ನಲ್ಲಿ ದಿ ಬೆಸ್ಟ್ ಕಪಲ್ ಎಂದು ಕರೆಸಿಕೊಳ್ಳುವ ಈ ಜೋಡಿಯ ಪ್ರೀತಿಗೆ ಆರಂಭದಲ್ಲಿ ಭಾರೀ ಸಂಕಷ್ಟ ಎದುರಾಗಿತ್ತು. ಅದು ನಟನ ತಂದೆಯಿಂದ ಎಂಬ ಸಂಗತಿ ನಟನ ಅಭಿಮಾನಿಗಳಿಗೆ ಪ್ರಾಯಶಃ ತಿಳಿದಿರಲಿಕ್ಕಿಲ್ಲ.
ಸ್ಟಾರ್ ದಂಪತಿ
ಇಬ್ಬರೂ ಸ್ಟಾರ್ ನಟ-ನಟಿಯಾಗಿ ತಮಿಳು ಚಿತ್ರರಂಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿರುವ ಸೂರ್ಯ-ಜ್ಯೋತಿಕಾ, ಹಲವು ಬ್ಲಾಕ್ಬಸ್ಟರ್ ಸಿನಿಮಾಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ. ಆದರೆ, ಇವರಿಬ್ಬರ ಪ್ರೇಮಕ್ಕೆ ಹೆತ್ತವರಿಂದ ಒಪ್ಪಿಗೆ ಸಿಕ್ಕಿರಲಿಲ್ಲ. ಇದು ಸೂರ್ಯ ಅವರಿಗೆ ಭಾರೀ ಬೇಸರ ತಂದಿತ್ತು.
ಮಗನ ಬಗ್ಗೆ ಅಪ್ಪನ ಮನದಾಳ
ಆರಂಭದಲ್ಲಿ ನಾನು ಸೂರ್ಯನ ಪ್ರೀತಿ ಒಪ್ಪಿಕೊಳ್ಳಲಿಲ್ಲ. ಆಗ ನನಗೆ ತುಂಬ ನೋವಾಯಿತು. ಹೀಗಾಗಿ, ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಆದರೆ, ಮಗನ ಆ ಮಾತು ನಿಜಕ್ಕೂ ನನ್ನ ನಿರ್ಧಾರವನ್ನೇ ಬದಲಿಸುವಂತೆ ಮಾಡಿತು ಎಂದು ಹೇಳಿದರು.
ಅವನ ಮಾತೇ...
ನಾನು ಬದುಕಿದರೆ ಜ್ಯೋತಿಕಾ ಜತೆಗೆ ಮಾತ್ರ. ಇಲ್ಲವಾದರೆ, ಏಕಾಂಗಿಯಾಗಿ ಇರುತ್ತೇನೆ ಎಂದುಬಿಟ್ಟ. ಆಗ ನನಗೆ ಅನಿಸಿದ್ದು, ನನ್ನ ಇಡೀ ವೃತ್ತಿಯ ಬದುಕಿನಲ್ಲಿ 150 ಚಿತ್ರಗಳಲ್ಲಿ ನಟಿಸಿದ್ದೇನೆ. ಅದರಲ್ಲಿ ಬಹುತೇಕ ಕಥೆಗಳು ಪ್ರೀತಿಗೆ ಸಂಬಂಧಿಸಿದ್ದೆ. ಹೀಗಾಗಿ, ಕಡೆಗೆ ಒಪ್ಪಿಗೆ ಸೂಚಿಸಿದೆ ಎಂದರು.