ಬಹುಭಾಷಾ ನಟಿ ಅನುಪಮಾ ಪರಮೇಶ್ವರ್ ಅವರು ಜಾಹೀರಾತೊಂದಕ್ಕೆ ಧರಿಸಿರುವ ಬಟ್ಟೆ, ಹೊಸ ಲುಕ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ. ನೆಟ್ಟಿಗರು ಅವರ ಹೇರ್ಸ್ಟೈಲ್ ಹಾಗೂ ಸೌಂದರ್ಯಕ್ಕೆ ಫಿದಾ ಆಗಿದ್ದಾರೆ.
ಅಪ್ರತಿಮ ಸುಂದರಿ
ಕ್ರೀಮಿ ಬಣ್ಣದ ಲೆಂಹಂಗಾ, ಹರಿಬಿಟ್ಟ ಗುಂಗುರು ಕೂದಲು, ಸಿಂಪಲ್ ಮೇಕಪ್ ಕಂಡ ನೆಟ್ಟಿಗರು ಅಪ್ರತಿಮ ಸುಂದರಿ ಇವರು. ನ್ಯಾಚುರಲ್ ಬ್ಯೂಟಿಯಂತೆ ಕಾಣುತ್ತಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ.
ಸಂಗಾತಿ ಬಗ್ಗೆ ಅನುಪಮಾ ಮಾತು
ಇತ್ತೀಚೆಗೆ ಅನುಪಮಾ ಪರಮೇಶ್ವರನ್ ಅವರು ತಮ್ಮ ಮಾಜಿ ಸಂಗಾತಿ ಬಗ್ಗೆ ಮಾತನಾಡಿದ್ದರು. ವಿಕ್ರಂ ಸಿನಿಮಾದ ಅನ್ನಿಯನ್ ಪಾತ್ರಕ್ಕೆ ಹೋಲಿಕೆ ಮಾಡಿದ್ದರು. ನೇರವಾಗಿ ಧ್ರುವ್ ವಿಕ್ರಂ ಅವರ ಹೆಸರನ್ನು ಹೇಳಿಲ್ಲವಾದರೂ ನೆಟ್ಟಿಗರು ಬೊಟ್ಟು ಮಾಡಿದ್ದು ನಟನತ್ತಲೇ.
ಇನ್ನೂ ಎಲ್ಲವೂ ನನ್ನಿಷ್ಟ
ಹೀಲಿಂಗ್, ಸ್ವಾತಂತ್ರ್ಯ, ಯಾರ ಅನುಮತಿಯ ಅವಶ್ಯಕತೆ ಇಲ್ಲ ಎನ್ನುವಂತೆ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಇದು ಧ್ರುವ್ ವಿಕ್ರಂ ಜೊತೆಗೆ ಅವರು ಬ್ರೇಕಪ್ ಮಾಡಿಕೊಂಡಿದ್ದರು ಎನ್ನುವ ಬಗ್ಗೆ ಉಲ್ಲೇಖಿಸಿತ್ತು.
ನನ್ನ ಬಗ್ಗೆ ಏನು ಗೊತ್ತು?
ಇನ್ಸ್ಟಾಗ್ರಾಮ್ ವೈಯಕ್ತಿಕ ವೇದಿಕೆ ನಮಗೆ ಇಷ್ಟವಾದದ್ದನ್ನು ಪೋಸ್ಟ್ ಮಾಡಬಹುದು. ನನ್ನ ವೈಯಕ್ತಿಕ ಜೀವನ ಮತ್ತು ಭಾವನೆಗಳ ಬಗ್ಗೆ ಹೊರಗಿನ ಮಂದಿಗೇನು ಗೊತ್ತು ಎಂದು ಅನುಪಮಾ ಅವರು ಪೋಸ್ಟ್ ಮಾಡಿಕೊಂಡಿದ್ದರು,
ನನ್ನನ್ನು ಪ್ರೀತಿಸುವವರನ್ನು ಉಳಿಸಿಕೊಳ್ಳುತ್ತೇನೆ ಎಂದಿದ್ದ ಧ್ರುವ್
ಅನುಪಮಾ ಪರಮೇಶ್ವರನ್ ಅವರ ಮಾಜಿ ಸಂಗಾತಿ ಹೇಳಿಕೆಗಳು ಭಾರಿ ಚರ್ಚೆಗೆ ಕಾರಣವಾದ ಹೊತ್ತಲ್ಲೇ ಧ್ರುವ್ ವಿಕ್ರಂ ಮಾತನಾಡಿದ್ದರು. ನನಗೆ ಯಾವುದೇ ವಿಚಾರಗಳಿಂದ ಬೇಸರವಾಗಿಲ್ಲ ಅಥವಾ ಎಫೆಕ್ಟ್ ಆಗಿಲ್ಲ ಎಂದು ಹೇಳೋದಿಲ್ಲ. ನಾನು ನನನ್ನು ಪ್ರೀತಿಸುವವರನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ್ದರು.