ಸ್ಟೈಲಿಶ್​ ಅವತಾರದಲ್ಲಿ ಅಭಿ!

ರಮೇಶ್​ ಕುಮಾರ್​​ ಬಿ ಎಡಮೋಳೆ

ಸ್ಟೈಲಿಶ್​ ಅವತಾರದಲ್ಲಿ ಅಭಿ!

ಟಿ20 ಕ್ರಿಕೆಟ್​ ಅಂತಾ ಬಂದಾಗ ಪ್ರಸ್ತುತ ಟೀಮ್​ ಇಂಡಿಯಾದ ಯುವ ಆರಂಭಿಕ ಆಟಗಾರ ಅಭಿಷೇಕ್​ ಶರ್ಮಾ ಸಖತ್​ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಅಭಿ ಸಖತ್​ ಫಾರ್ಮ್​ನಲ್ಲಿರುವುದು.

ಕಿವೀಸ್​ ವಿರುದ್ಧ ಅಬ್ಬರ

ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯಲ್ಲಿ ಅಭಿಷೇಕ್​ ಅಬ್ಬರಿಸುತ್ತಿದ್ದಾರೆ. ಎರಡನೇ ಹಾಗೂ ಮೂರನೇ ಟಿ20 ಪಂದ್ಯದಲ್ಲಿ ಅಬ್ಬರದ ಅರ್ಧ ಶತಕ ಸಿಡಿಸಿ ಮಿಂಚಿದ್ದಾರೆ.

ಎರಡನೇ ವೇಗದ ಅರ್ಧಶತಕ

ಕಿವೀಸ್​ ವಿರುದ್ಧದ 3ನೇ T20 ಪಂದ್ಯದಲ್ಲಿ ಅಭಿ ಕೇವಲ 20 ಎಸೆತಗಳಲ್ಲಿ ಅಜೇಯ 68 ರನ್ ಗಳಿಸಿದರು. ಇದರಲ್ಲಿ 14 ಎಸೆತಗಳಲ್ಲಿ 50 ರನ್ ಮಾಡಿ ಭಾರತದ ಎರಡನೇ ಅತಿ ವೇಗದ T20 ಅರ್ಧಶತಕ ಸಾಧಿಸಿದರು.

ಟಿ20ಐ ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ

ಇತ್ತೀಚಿನ ಅಬ್ಬರದ ಪ್ರದರ್ಶನದ ಬಳಿಕ ಅಂತಾರಾಷ್ಟ್ರೀಯ T20 ಬ್ಯಾಟಿಂಗ್ ರ್ಯಾಂಕಿಂಗ್‌ನಲ್ಲಿ 929 ಅಂಕಗಳೊಂದಿಗೆ ಅಭಿಷೇಕ್ ಶರ್ಮಾ ನಂ.1 ಸ್ಥಾನಕ್ಕೇರಿದ್ದಾರೆ.

ಆಲ್‌ರೌಂಡರ್ ಅಭಿ

ಎಡಗೈ ಬ್ಯಾಟ್ಸ್‌ಮನ್ ಮತ್ತು ಎಡಗೈ ಆರ್ಥಡಾಕ್ಸ್ ಸ್ಪಿನ್ನರ್ ಆಗಿ ಭಾರತದ T20 ತಂಡದಲ್ಲಿ ಮುಖ್ಯ ಆಲ್‌ರೌಂಡರ್ ಆಗಿದ್ದಾರೆ. T20ಯಲ್ಲಿ ಅಭಿ ಸ್ಟ್ರೈಕ್ ರೇಟ್ 190ಕ್ಕಿಂತ ಹೆಚ್ಚು ಇದೆ.

ಪದಾರ್ಪಣೆ

2024ರಲ್ಲಿ ಜಿಂಬಾಬ್ವೆ ವಿರುದ್ಧ T20 ಪಂದ್ಯಕ್ಕೆ ಡೆಬ್ಯೂ ಮಾಡಿದರು. ಈಗಾಗಲೇ ಎರಡು ಟಿ20 ಶತಕಗಳನ್ನು ಗಳಿಸಿದ್ದಾರೆ. ಅಲ್ಲದೆ, ವೇಗವಾಗಿ 1000 ರನ್‌ಗಳನ್ನು ಗಳಿಸಿದ 2ನೇ ಭಾರತೀಯರಾಗಿದ್ದಾರೆ. ಮೊದಲ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಇದಾರೆ.

ಐಪಿಎಲ್‌ನಲ್ಲಿ ಪ್ರಭಾವ

ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಮುಖ್ಯ ಓಪನರ್. 2025 ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 40 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಹಿಂದಿನ ಸೀಸನ್‌ಗಳಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು (42) ಹೊಡೆದು ಪ್ರಶಸ್ತಿ ಗೆದ್ದಿದ್ದರು.

ಸ್ಟೈಲಿಶ್​ ಲುಕ್​ ವೈರಲ್​

ಅಭಿಷೇಕ್​ ಅವರು ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯರಾಗಿರುತ್ತಾರೆ. ಇನ್​ಸ್ಟಾಗ್ರಾಂನಲ್ಲಿ 8 ಮಿಲಿಯನ್​ಗೂ ಅಧಿಕ ಫಾಲೋವರ್ಸ್​ ಹೊಂದಿರುವ ಅಭಿ, ಇದೀಗ ಸ್ಟೈಲಿಶ್​ ಫೋಟೋಗಳನ್ನು ಹರಿಬಿಟ್ಟಿದ್ದಾರೆ.

ಕಪ್ಪು ದಿರಿಸಿನಲ್ಲಿ ಅಭಿ ಮಿಂಚು

ಕಪ್ಪು ಬಣ್ಣದ ಶರ್ಟ್​ ಮತ್ತು ಪ್ಯಾಂಟ್​ ಧರಿಸಿ ಕ್ಯಾಮೆರಾಗೆ ಸ್ಟೈಲಿಶ್​ ಆಗಿ ಪೋಸ್​ ನೀಡಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೋಗಳಿಗೆ "ಜಸ್ಟ್​ ಮೀ" ಶೀರ್ಷಿಕೆ ನೀಡಿದ್ದಾರೆ. ಸದ್ಯ ಫೋಟೋಗಳು ವೈರಲ್​ ಆಗಿವೆ.