ಇಟಲಿಯ ಬೀದಿಗಳಲ್ಲಿ ಕನ್ನಡತಿಯ ಪಯಣ!

ರಮೇಶ್​ ಕುಮಾರ್​​ ಬಿ ಎಡಮೋಳೆ

ಇಟಲಿಯ ಬೀದಿಗಳಲ್ಲಿ ಕನ್ನಡತಿಯ ಪಯಣ!

ರಂಜನಿ ರಾಘವನ್ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಪ್ರಮುಖ ನಟಿ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಇವರು, ನಟನೆಯ ಮೇಲಿನ ಆಸಕ್ತಿಯಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ಇಟಲಿ ಪ್ರವಾಸ

ಇಟಲಿಯ ಬೇರೆ ಬೇರೆ ಊರುಗಳಿಗೆ ಒಬ್ಬಳೇ ಪ್ರವಾಸ ಹೋಗಿ ಬರಬೇಕೆಂದು ಹೊರಟಾಗ... ಕೇವಲ ಹೊಸ ಸ್ಥಳಗಳನ್ನು ನೋಡುವುದು ನನ್ನ ಉದ್ದೇಶವಾಗಿತ್ತು. ಆದರೆ ಈಗ ಅನಿಸುತ್ತಿದೆ, ಪ್ರವಾಸಗಳು ನಮಗೆ ಹೊಸ ಸ್ಥಳಗಳನ್ನು ತೋರಿಸುವುದಕ್ಕಿಂತ ಹೆಚ್ಚಾಗಿ... ನಮ್ಮೊಳಗೇ ಅಡಗಿರುವ ಒಬ್ಬ ಹೊಸ ವ್ಯಕ್ತಿಯನ್ನು ನಮಗೆ ಪರಿಚಯಿಸುತ್ತವೆ!

ಪುಟ್ಟಗೌರಿ ಮದುವೆ ಖ್ಯಾತಿ

ಇವರಿಗೆ ಇಡೀ ಕರ್ನಾಟಕದಾದ್ಯಂತ ಅಪಾರ ಜನಪ್ರಿಯತೆ ತಂದುಕೊಟ್ಟಿದ್ದು ಮೆಗಾ ಧಾರಾವಾಹಿ ಪುಟ್ಟಗೌರಿ ಮದುವೆ. ಇದರಲ್ಲಿನ ಗೌರಿ ಎಂಬ ಸೌಮ್ಯ ಸ್ವಭಾವದ ಸೊಸೆಯ ಪಾತ್ರ ಇವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿತು.

ಚಿತ್ರರಂಗ ಹಾಗೂ ಇತರೆ ಪ್ರಾಜೆಕ್ಟ್‌ಗಳು

ಕೇವಲ ಕಿರುತೆರೆಗೆ ಸೀಮಿತವಾಗದ ರಂಜನಿ, ರಾಜ ಹಂಸ, ಟಕ್ಕರ್, ಸತ್ಯಂ ಸೇರಿದಂತೆ ಕೆಲವು ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ಜೊತೆಗೆ ವೆಬ್ ಸೀರೀಸ್ ಹಾಗೂ ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿದ್ದಾರೆ.

ಪ್ರಶಸ್ತಿಗಳು

ರಂಜನಿ ರಾಘವನ್ 2015, 2016 ಮತ್ತು 2017ರ ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ಸ್‌ನಲ್ಲಿ ಸತತವಾಗಿ 'ಮನೆ ಮೆಚ್ಚಿದ ಸೊಸೆ' ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಜೊತೆಗೆ 2016ರಲ್ಲಿ 'ಜನ ಮೆಚ್ಚಿದ ನಾಯಕಿ' ಗೌರವಕ್ಕೂ ಪಾತ್ರರಾಗಿದ್ದಾರೆ. 2017ರಲ್ಲಿ 'ಮಿಸ್ ಸೂಪರ್ ಮಾಡೆಲ್ ಬೆಂಗಳೂರು' ಕಿರೀಟ ಹಾಗೂ 'ರಾಜಹಂಸ' ಚಿತ್ರಕ್ಕಾಗಿ 'ಭರವಸೆಯ ನಾಯಕಿ' ಹೆಗ್ಗಳಿಕೆಯನ್ನೂ ಇವರು ಪಡೆದಿದ್ದಾರೆ

ಸಾಹಿತ್ಯ ಮತ್ತು ಸೃಜನಶೀಲತೆ

ನಟನೆಯ ಹೊರತಾಗಿ ರಂಜನಿ ಅವರಿಗೆ ಬರವಣಿಗೆಯಲ್ಲಿ ತೀವ್ರ ಆಸಕ್ತಿಯಿದೆ. ಇವರು ಪುಸ್ತಕಗಳನ್ನು ಬರೆಯುವುದರಲ್ಲಿ ಮತ್ತು ಕಥೆಗಳನ್ನು ಹೆಣೆಯುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.