ಅಡುಗೆ ಮನೆಯ ಈ ಆಹಾರ ಪದಾರ್ಥಗಳು ಎಂದಿಗೂ ಕೆಡುವುದಿಲ್ಲ!

ಮಮತಾ

ಅಡುಗೆ ಮನೆಯ ಈ ಆಹಾರ ಪದಾರ್ಥಗಳು ಎಂದಿಗೂ ಕೆಡುವುದಿಲ್ಲ!

ಸಾಮಾನ್ಯವಾಗಿ ನಾವು ಯಾವುದೇ ಆಹಾರ ಖರೀದಿ ಮಾಡುವಾಗ ಹಾಗೂ ಅದನ್ನು ಕೆಲವು ವಾರಗಳ ನಂತರ ಬಳಕೆ ಮಾಡುವಾಗ ಅದರ 'ಎಕ್ಸ್‌ಪೈರಿ ಡೇಟ್' ಪರಿಶೀಲನೆ ಮಾಡಿಯೇ ತೀರುತ್ತೇವೆ. ಆದರೆ, ನಿಮಗೆ ಗೊತ್ತೇ ನಮ್ಮ ಅಡುಗೆ ಮನೆಯಲ್ಲಿರುವ ಕೆಲವು ಪದರ್ಥಾಗಳಿಗೆ ಕೊನೆಯ ದಿನಾಂಕವೇ ಇಲ್ಲ. ಸರಿಯಾದ ರೀತಿಯಲ್ಲಿ ಸಂಗ್ರಹ ಮಾಡಿದರೆ ಕೆಲವು ಪದಾರ್ಥಗಳನ್ನು ಎಕ್ಸಪೈರಿ ಡೇಟ್​ ಇಲ್ಲದೆ ಬಳಕೆ ಮಾಡಿಕೊಳ್ಳಬಹುದು.

ಜೇನುತುಪ್ಪ

ಯಾವುದೇ ರಾಸಾಯನಿಕವಿಲ್ಲದೆ, ಬೆಲ್ಲ ಬೆರೆಸಿ ಕಲಬೆರಕೆ ಮಾಡದೆ ಶೇಖರಿಸಿಟ್ಟ ಜೇನುತುಪ್ಪಕ್ಕೆ ಸಾವಿಲ್ಲ. ಇದನ್ನು ತಂಪಾದ ಮತ್ತು ಕತ್ತಲೆಯ ಜಾಗದಲ್ಲಿ ಇಟ್ಟರೆ ಸಾಕು. ಇದನ್ನು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿನೊಂದಿಗೆ ಬೆರಸಿ ಕುಡಿಯುವುದರಿಂದ ದೇಹದ ತೂಕ ಇಳಿಕೆಗೆ ಸಹಾಯ ಮಾಡುತ್ತದೆ.

ಬಿಳಿ ಅಕ್ಕಿ

ತೇವಾಂಶ ಮತ್ತು ಕೀಟಗಳಿಂದ ರಕ್ಷಿಸಿ ಗಾಳಿಯಾಡದ ಡಬ್ಬದಲ್ಲಿ ಅಕ್ಕಿಯನ್ನು ಶೇಖರಣೆ ಮಾಡಿ ಇಟ್ಟರೆ, ದಶಕಗಳ ಕಾಲ ಕೆಡುವುದಿಲ್ಲ. ಅದಕ್ಕೆ ಎಕ್ಸ್​ಪೈರಿಯ ಅವಶ್ಯಕತೆಯೇ ಇಲ್ಲ.

ಉಪ್ಪು

ಉಪ್ಪು ಸ್ವತಃ ಒಂದು ಸಂರಕ್ಷಕ. ಆದ್ದರಿಂದ ಇದು ಕೆಡುವುದಿಲ್ಲ. ಆದರೆ ಅಯೋಡಿನ್ ಬೆರೆಸಿದ ಉಪ್ಪಿಗೆ ಮಿತಿ ಇರಬಹುದು. ಹಲವು ವಿಭಾಗವಿದೆ, ಕಲ್ಲುಪ್ಪು, ಸಮುದ್ರದ ಉಪ್ಪುಗಳು ಇವೆ. ಮನುಷ್ಯನ ಆಹಾರ ತಯಾರಿಕೆಯಲ್ಲಿ ಬಹುಮುಖ್ಯ ಪಾತ್ರವನ್ನುವಹಿಸುತ್ತದೆ

ಒಣಗಿದ ಕಾಳುಗಳು

ದ್ವಿದಳ ಧಾನ್ಯಗಳು ಅಥವಾ ಒಣಗಿದ ಕಾಳುಗಳು ಕನಿಷ್ಠ 2 ವರ್ಷಗಳವರೆಗೆ ಕೆಡುವುದಿಲ್ಲ. ಇವು ದೇಹಕ್ಕೆ ಹೆಚ್ಚು ಪೌಷ್ಠಿಕಾಂಶವನ್ನು ನೀಡುತ್ತದೆ. ಪದೇ ಪದೇ ಕಾಳುಗಳನ್ನು ಅಂಗಡಿಯಲ್ಲಿ ಕೊಳ್ಳುವ ಅವಶ್ಯಕತೆ ಇರೋದಿಲ್ಲ. ನೆನೆಸಿದ ಮೊಳಕೆಕಾಳುಗಳು ಹಸಿಯಾಗಿ ಅಥವಾ ಬೇಯಿಸಿ ತಿನ್ನುವುದು ದೇಹಕ್ಕೆ ಆರೋಗ್ಯಕರ.

ಸೋಯಾ ಸಾಸ್

ಸೋಯಾ ಸೀಡ್ಸ್​, ಗೋದಿ, ಉಪ್ಪು, ನೀರಿನಿಂದ ತಯಾರಿಸಲಾದ ಸಾಸ್​ ಅನ್ನು ತೆರೆಯದೇ ಮೂರು ವರ್ಷ ಬಳಕೆ ಮಾಡಬಹುದು. ಅಕಸ್ಮಾತ್​ ಅದರ ಮುಚ್ಚಳ ತೆರೆದು ಬಳಕೆ ಮಾಡಿದರೆ, ಫ್ರಿಡ್ಜ್‌ನಲ್ಲಿ ಇಡುವುದು ಉತ್ತಮ. ನೂಡಲ್​, ಫ್ರೈಡ್​ರೈಸ್​ಗೆ ಇದನ್ನು ಬಳಕೆ ಮಾಡಲಾಗುತ್ತದೆ.

ಡ್ರೈ ಫ್ರೂಟ್ಸ್

ದೇಹಕ್ಕೆ, ಮುಖದ ಕಾಂತಿಯನ್ನು ಉತ್ತೇಜಿಸುವಂತೆ ಮಾಡುವ ಒಣ ಹಣ್ಣುಗಳು ತಾಜಾ ಹಣ್ಣುಗಳಿಗಿಂತ ದೀರ್ಘಕಾಲ ಬಾಳಿಕೆ ಬರುತ್ತವೆ, ಅದರಲ್ಲೂ ಡೀಪ್ ಫ್ರೀಜ್‌ನಲ್ಲಿಟ್ಟರೆ ಇನ್ನೂ ಹೆಚ್ಚು ದಿನ ಇರುತ್ತವೆ. ರಾತ್ರಿ ದ್ರಾಕ್ಷಿ. ಖರ್ಜೂರ, ಗೋಡಂಬಿ, ಬಾದಾಮಿ ನೆನೆಸಿಟ್ಟು ಮುಂಜಾನೆ ಹಾಲಿನ ಜೊತೆ ಮಿಕ್ಸ್​ ಮಾಡಿ ಕುಡಿಯೋದರಿಂದ ದೇಹಕ್ಕೆ ಒಳ್ಳೆಯ ಪೌಷ್ಠಿಕಾಂಶವನ್ನು ನೀಡುತ್ತದೆ.

ಚಿಯಾ ಬೀಜಗಳು

ತುಳಸಿ ಬೀಜ ಎಂದು ಕರೆಯು ಚಿಯಾ ಸೀಡ್ಸ್​ ಅನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿ ಫ್ರಿಡ್ಜ್‌ನಲ್ಲಿಟ್ಟರೆ ಬಹಳ ಸಮಯದವರೆಗೆ ಬಳಸಬಹುದು. ಇದು ದೇಹದ ತೂಕ ಇಳಿಕೆ ಮಾಡಲು, ಉಷ್ಣತೆ ಕಡಿಮೆ ಮಾಡಲು ಸಹಕಾರಿ.