ಈ 4 ಹಣಕಾಸು ತಪ್ಪುಗಳಿಂದ ನಿಮ್ಮ ಸಂಪತ್ತು ಬೇಗ ಕುಸಿಯುತ್ತದೆ! ಇದನ್ನು ತಪ್ಪದೇ ತಿಳಿದುಕೊಳ್ಳಿ

ಬಾಬುಪ್ರಸಾದ್​ ಮೋಡಿಸ್​

ಈ 4 ಹಣಕಾಸು ತಪ್ಪುಗಳಿಂದ ನಿಮ್ಮ ಸಂಪತ್ತು ಬೇಗ ಕುಸಿಯುತ್ತದೆ! ಇದನ್ನು ತಪ್ಪದೇ ತಿಳಿದುಕೊಳ್ಳಿ

ಬೆಂಗಳೂರು: ಹಣದ ನಿರ್ವಹಣೆಯಲ್ಲಿ ಸಾಮಾನ್ಯವಾಗಿ ಮಾಡುವ ತಪ್ಪುಗಳು ನಮ್ಮ ಆದಾಯವನ್ನು ನಿಧಾನವಾಗಿ ಕಸಿಯುತ್ತದೆ. ಕೆಲವರಿಗೆ ಒಂದೇ ಸಂಬಳದಲ್ಲಿ ಮನೆಯ ವೆಚ್ಚಗಳನ್ನು ನಿರ್ವಹಿಸುವುದು ಅನಿಶ್ಚಿತವಾಗಿರುವುದರಿಂದ, ತಮ್ಮ ಕುಟುಂಬಗಳಲ್ಲಿ ಏಕೈಕ ಆದಾಯ ಗಳಿಸುವವರಿಗೆ ಈ ಪರಿಸ್ಥಿತಿಯು ವಿಶೇಷವಾಗಿ ಕಳವಳಕಾರಿಯಾಗಿದೆ.

1.ವಿಮೆ ಹೂಡಿಕೆ ಅಲ್ಲ

ಸಾಮಾನ್ಯವಾಗಿ ಭಾರತದಲ್ಲಿ ಹಲವರು ವಿಮೆಯನ್ನು ಹೂಡಿಕೆ ಎಂದು ಭಾವಿಸುತ್ತಾರೆ. ಏಕೆಂದರೆ ಇದರಲ್ಲಿ ಲಾಭ ಮತ್ತು ರಕ್ಷಣೆ ಎರಡನ್ನೂ ನಿರೀಕ್ಷೆ ಮಾಡುತ್ತಾರೆ. ಲಾಂಗ್​ ಟರ್ಮ್ ಯೋಜನೆ ಅಥವಾ ಸಂಪೂರ್ಣ ಜೀವ ವಿಮೆ ಪಾಲಿಸಿಗಳನ್ನು ಖರೀದಿಸುತ್ತಾರೆ. ಆದರೆ, ಈ ಆಯ್ಕೆಗಳು ಸಾಕಷ್ಟು ರಕ್ಷಣೆ ಮತ್ತು ಲಾಭ ಒದಗಿಸುವುದಿಲ್ಲ.

ಇತರರ ಲೋನ್‌ಗೆ ಕೋ-ಸೈನರ್ ಆಗುವುದು

ಸ್ನೇಹಿತ ಅಥವಾ ರಿಸ್ತೇದಾರರ ಲೋನ್‌ಗೆ ಗ್ಯಾರಂಟರ್ ಆಗಿ ಸಹಿ ಮಾಡುವುದರಿಂದ ಕ್ರೆಡಿಟ್ ಸ್ಕೋರ್ ಹಾನಿಯಾಗಬಹುದು. ಲೋನ್ ತೆಗೆದುಕೊಳ್ಳುವವರ ಸಾಮರ್ಥ್ಯವನ್ನು ಆಳವಾಗಿ ಪರಿಶೀಲಿಸಿ. ಸಾಧ್ಯವಾದರೆ ತಪ್ಪಿಸಿ.

ಜ್ಞಾನವಿಲ್ಲದೆ ಹೂಡಿಕೆ

ಕ್ರಿಪ್ಟೋ, NFT ಅಥವಾ ಟಿಪ್ಸ್‌ನ ಆಧಾರದಲ್ಲಿ ಅಪರಿಚಿತ ಹೂಡಿಕೆಗಳು ಮಾಡೋದು ಅಪಾಯಕಾರಿ. ಹೀಗಾಗಿ, ಹೂಡಿಕೆಯನ್ನು ಒಂದು ವಾಕ್ಯದಲ್ಲಿ ವಿವರಿಸಲು ಸಾಧ್ಯವಲ್ಲದಿದ್ದರೆ ತಪ್ಪಿಸಿ. FOMOಗೆ ಬಲಿಯಾಗಬೇಡಿ.

ಒಂದೇ ಹೂಡಿಕೆಯಲ್ಲಿ ಎಲ್ಲ ಹಣವನ್ನು ಹಾಕುವುದು

ಒಂದು ಆಸ್ತಿಯಲ್ಲಿ ಎಲ್ಲ ಹಣ ಹೂಡಿದರೆ ಅಪಾಯ ಹೆಚ್ಚು. ಹೂಡಿಕೆಗಳನ್ನು ಶೇರ್‌ಗಳು, ಮ್ಯೂಚುಯಲ್ ಫಂಡ್‌ಗಳು, ಗೋಲ್ಡ್ ಬಾಂಡ್‌ಗಳಲ್ಲಿ ಇರಿಸಿ.