ಆರೋಗ್ಯಕರ ಅಡುಗೆಗಾಗಿ ಕಿಚನ್​ನಲ್ಲಿರಲಿ ಈ ಮಣ್ಣಿನ ಪಾತ್ರೆಗಳು

ಮಮತಾ

ಆರೋಗ್ಯಕರ ಅಡುಗೆಗಾಗಿ ಕಿಚನ್​ನಲ್ಲಿರಲಿ ಈ ಮಣ್ಣಿನ ಪಾತ್ರೆಗಳು

ಇದು ಆಧುನಿಕ ಯುಗ ಹಲವರು, ಮಡಿಕೆ ಮತ್ತು ತಾಮ್ರ, ಅಲ್ಯೂಮಿನಿಯಂ ಬದಲಾಗಿ ಸ್ಟೇನ್​ಲೆಸ್​ ಪಾತ್ರೆಗಳನ್ನು ಕೊಂಡುಕೊಳ್ಳಲು ಹೆಚ್ಚು ಇಷ್ಟ ಪಡುತ್ತಾರೆ. ಆದ್ರೆ ಆರೋಗ್ಯಕ್ಕೆ ಹಿತವಾದದ್ದು ಜೇಡಿ ಮಣ್ಣಿನಿಂದ ತಯಾರಾದ ಪಾತ್ರೆಗಳು. ಹೆಚ್ಚು ಪಾತ್ರೆಗಳು ಬೇಡ. ಆದರೆ, ನಿಮ್ಮ ಅಡುಗೆ ಮನೆಯಲ್ಲಿ ಇರಲೇ ಬೇಕಾದ ಏಳು ಮಣ್ಣಿನ ಪಾತ್ರೆಗಳು ಯಾವುದು ಎಂದು ತಿಳಿದುಕೊಳ್ಳೋಣ ಬನ್ನಿ..

ಮೊಸರು ಮಡಿಕೆ

ಮೊಸರು ಮಾಡುವವರು ಈ ಮಡಿಕೆ ಬಳಕೆ ಮಾಡಿದರೆ ತುಂಬಾ ಉತ್ತಮ. ಇದು ಹಾಲಿನಲ್ಲಿರುವ ನೀರನ್ನು ಹೆಚ್ಚು ಹೀರಿಕೊಂಡು, ಮೊಸರನ್ನು ಕೆನೆಯುಕ್ತ ಹಾಗೂ ಗಟ್ಟಿಯನ್ನಾಗಿ ಮಾಡುತ್ತದೆ. ಮೊಸರು ಕರುಳಿನಲ್ಲಿ ಒಳ್ಳೆ ಬ್ಯಾಕ್ಟೀರಿಯಾ ಹೆಚ್ಚು ಮಾಡಲು ಸಹಕಾರಿ.

ಮಣ್ಣಿನ ತವಾ

ನಯವಾದ ದೋಸೆ ಬೇಕು ಎಂದು ಹಲವರು ಸ್ಟೇನ್​ ಲೆಸ್ ತವಾದತ್ತ ಮನಸು ಹೊರಳಿಸುತ್ತಿದ್ದಾರೆ. ಆದರೆ ಇದರ ಕಣಗಳು ದೇಹಕ್ಕೆ ಬಹಳ ಅಪಾಯಕಾರಿ. ಹೀಗಾಗಿ ಮಣ್ಣಿನ ತವಾ ಬಳಿಸಿ, ಇದು ರೊಟ್ಟಿ ಸೀದು ಹೋಗದಂತೆ ತಡೆದು, ಎಲ್ಲ ಭಾಗಕ್ಕೂ ಸಮಾನವಾದ ಶಾಖವನ್ನು ಹರಿಸುತ್ತದೆ.

ಮಣ್ಣಿನ ಕಡಾಯಿ

ಮಣ್ಣಿನ ಕಡಾಯಿಯಲ್ಲಿ ಪಲ್ಯ ಅಥವಾ ಡ್ರೈ ಪದಾರ್ಥಗಳನ್ನು ಮಾಡಿದರೆ ಇದು ಎಣ್ಣೆಯನ್ನೇ ಕೇಳುವುದಿಲ್ಲ. ಸಮಾನವಾದ ಹುರಿಯಲ್ಲಿ ಗ್ರೇವಿ, ಪಲ್ಯ ಬೇಯಿಸಲು ಈ ಪಾತ್ರೆ ವೆರಿ ಬೆಸ್ಟ್.

ಮಣ್ಣಿನ ಮಟ್ಕಾ

ಇದು ನೀರನ್ನು ತಪಾರಿಸುತ್ತದೆ. ನೀರನ್ನು ಆವಿಯಾಗುವಂತೆ ಮಾಡಿ, ಸಿಹಿಯಾಗಿರುವಂತೆ ನೋಡಿಕೊಳ್ಳುತ್ತದೆ. ಮಣ್ಣಿನ ಸುವಾಸನೆಯನ್ನು ನೀಡುತ್ತದೆ. ಫ್ರಿಡ್ಜ್​ ಬದಲಿಗೆ ಇದು ನೈಸರ್ಗಿಕವಾಗಿ ತಂಪು ಮಾಡಲು ಸಹಕಾರಿ.

ಮಣ್ಣಿನ ಕುಲ್ಕಡ್

ಮಣ್ಣಿನ ಕುಲ್ಕಡ್​​ನ್ನು ಟೀ ಮತ್ತು ಕಾಫಿ ಕುಡಿಯಲು ಬಳಸಿ. ವಿಷಕಾರಿ ಅನಿಲ ದೇಹಕ್ಕೆ ಸೇರೋದನ್ನ ಇದು ವಿರೋಧಿಸುತ್ತದೆ. ಜೊತೆಗೆ ಮಣ್ಣಿನ ಸುವಾಸನೆಯೊಂದಿಗೆ ಟೀ ಮತ್ತು ಕಾಫಿಯ ಸ್ವಾದವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದು ಆರೋಗ್ಯಕ್ಕು ಉತ್ತಮ.

ಮಣ್ಣಿನ ಬಾಟಲಿ

ಪ್ಲಾಸ್ಟಿಕ್​ ಬಾಟಲಿಗಳು ಒಂದು ದಿನಕ್ಕಿಂತ ಹೆಚ್ಚು ಕಾಲ ಬಳಕೆ ಮಾಡಬಾರದು ಎನ್ನುವುದು ವೈದ್ಯರ ಸಲಹೆ. ಹೀಗಾಗಿ ನೈಸರ್ಗಿಕವಾಗಿ ಜೇಡಿ ಮಣ್ಣಿನಿಂದ ತಯಾರಿಸಲಾದ ಬಾಟಲ್​ ಬಳಕೆ ಮಾಡಿ. ಜೊತೆಗೆ ಮಗ್​ಗಳನ್ನು ಇಟ್ಟುಕೊಳ್ಳಿ ಇದು, ಮನೆಯಲ್ಲಿ ಬಂದವರಿಗೆ ನೀರು ಕೊಡಲು ಮತ್ತು ಆಗಾಗ ಫ್ರಿಡ್ಜ್​ನಲ್ಲಿಟ್ಟು ನೀರು ಕುಡಿಯುವ ಬದಲು ಸದಾ ನೀರನ್ನು ತಂಪಾಗಿರಿಸುತ್ತದೆ.

ಮಣ್ಣಿನ ಸರ್ವಿಂಗ್​ ಬೌಲ್​

ಆಹಾರವನ್ನು ಅತಿಥಿಗಳಿಗೆ ಅಥವಾ ಮನೆಯ ಸದಸ್ಯರಿಗೆ ಬಡಿಸಲು ಮಣ್ಣಿನ ಬೌಲ್​ ಅನ್ನೇ ಬಳಕೆ ಮಾಡಿ. ಇದು ಆಹಾರ ದೀರ್ಘಕಾಲದವರೆಗೂ ಬಿಸಿಯಾಗಿರುವಂತೆ ನೋಡಿಕೊಳ್ಳುತ್ತದೆ. ಅಷ್ಟೇ ಅಲ್ಲದೆ, ಇದು ಆಹಾರಕ್ಕೆ ಖನಿಜಾಂಶಗಳನ್ನು ಸೇರಿಸುತ್ತದೆ ಮತ್ತು ಊಟದ ಮೇಜಿನ ಅಂದವನ್ನು ಹೆಚ್ಚಿಸುತ್ತದೆ.