ಯೋಗಸನವು ಭಾರತದ ಪ್ರಾಚೀನ ಅಭ್ಯಾಸ. ನಿತ್ಯ ಕಾಡುವ ದೈಹಿಕ ಮಾನಸಿಕ ಹಿಂಸೆಯನ್ನು ಕಡಿಮೆ ಮಾಡುತ್ತದೆ. ಒತ್ತಡದ ಬದುಕಿಗೆ ಬ್ರೇಕ್ ಕೊಡುತ್ತದೆ. ನಿತ್ಯ ದೀರ್ಘ ಕಾಲ ಕೂತು ಕೆಲಸ ಮಾಡುವುದರಿಂದ ಬೆನ್ನು ನೋವಿನ ಸಮಸ್ಯೆ ಕಾಡೋದು ಸಾಮಾನ್ಯ. ಇದರಿಂದ ಮುಕ್ತಿ ಪಡೆಯಲು ಈ ಯೋಗ ಅಭ್ಯಾಸ ಮಾಡಿ.
ಕುಳಿತು ಬೆನ್ನು ತಿರುಗಿಸುವುದು
ಈ ಪಟದಲ್ಲಿರುವಂತೆ ಸಾವಧಾನವಾಗಿ ಕುಳಿತು ಬೆನ್ನು ತಿರುಚುವುದರಿಂದ ಬೆನ್ನಿನಲ್ಲಿರುವ ಒತ್ತಡವನ್ನು ನಿವಾರಿಸಲು ಈ ಭಂಗಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಕೆಲಸದ ಸಮಯದಲ್ಲಿ ಯಾವುದೇ ತೊಂದರೆ ಕಾಡದಂತೆ ನೋಡಿಕೊಳ್ಳುತ್ತದೆ.
ನೆಲಕ್ಕೆ ಮಂಡಿಯೂರಿ ಕೈ ಮೇಲೆತ್ತಿ
ಮೇಲಿನ ಚಿತ್ರದಲ್ಲಿರುವಂತೆ ನೆಲಕ್ಕೆ ಮಂಡಿಯೂರಿ ಮತ್ತೊಂದು ಕಾಲು ಮುಂದೆ ಇಟ್ಟು ಕೈ ಮೇಲಕ್ಕೆಎತ್ತುವುದಿರಂದ ಇದು ಬೆನ್ನು ಮೂಳೆ ಸೆಳೆತವನ್ನು ಕಡಿಮೆ ಮಾಡುತ್ತದೆ. ಸೊಂಟದ ನೋವನ್ನು ನಿವಾರಿಸುತ್ತದೆ. ಕುಳಿತಲ್ಲೇ ಕುಳಿತುಕೊಳ್ಳುವುದರಿಂದ ಕಾಡುವ ಸಮಸ್ಯೆಗೆ ಪರಿಹಾರ ನೀಡುತ್ತದೆ.
ಕೈ ಕಟ್ಟಿ ಮೇಲಕ್ಕೇರುವುದು
ಮೇಲ್ಕಂಡ ಪಟದಂತೆ ನಿಮ್ಮ ಕೈ ಮಡಚಿ ಕಾಲನ್ನು ನೆಲದಿಂದ ಕೊಂಚ ಎತ್ತುವಂತೆ ಮಾಡುವುದರಿಂದ ಇದು ಬಿಗಿಯಾದ ಸ್ನಾಯು ಹಾಗೂ ಭುಜ ಸಡಿಲಗೊಳ್ಳುವಂತೆ ಮಾಡುತ್ತದೆ. ಕೈ ಅಗಲಿಸುವುದರಿಂದ ಭುಜದ ನೋವು ಮುಕ್ತವಾಗುತ್ತದೆ
ಕೂತ ಹಸು ಅಥವಾ ಬೆಕ್ಕಿನ ಭಂಗಿ
ಮೇಲ್ಕಂಡ ಚಿತ್ರದಂತೆ ಬೆಕ್ಕು ಅಥವಾ ಹಸುವಿನಂತೆ ಕೊಂಚ ಕಾಲ ಕೂರುವುದರಿಂದ ಇದು ಬೆನ್ನು ನೋವು, ಸುಗಮವಾದ ಉಸಿರಾಟಕ್ಕೆ ನಾಂದಿ ಹಾಡುತ್ತದೆ. ಕೂತಲ್ಲೇ ಕುಳಿತು ಕೆಲಸ ಮಾಡುವುದರಿಂದ ಬೆನ್ನಿನಲ್ಲಿ ಕಾಡುವ ಒತ್ತಡವನ್ನು ಇದು ರಿಲೀಸ್ ಮಾಡುತ್ತದೆ.
ಗ್ಲುಡ್ಜ್ ಬ್ರಿಡ್ಜ್ ರೀಸೆಟ್
ಕೈ ಮತ್ತು ಕಾಲು ನೆಲಕ್ಕೆ ಆನಿಸಿ,ನಿಮ್ಮ ಸೊಂಟವನ್ನು ಮೇಲಕ್ಕೆ ಎತ್ತುವುದರಿಂದ ನಿಮ್ಮ ಬೆನ್ನು ಸಮಸ್ಯೆ ಹಾಗೂ ಹ್ಯಾಮ್ ಸ್ಟ್ರಿಂಗ್ ಸಮಸ್ಯೆಯನ್ನು ಸರಿಪಡಿಸುತ್ತದೆ.