ಫ್ಯಾಟಿ ಲಿವರ್​​ನ 5 ಲಕ್ಷಣಗಳು

ವಿನಾಯಕ ನಾಯಕ

ಫ್ಯಾಟಿ ಲಿವರ್​​ನ 5 ಲಕ್ಷಣಗಳು

ಫ್ಯಾಟಿ ಲಿವರ್ ಆರಂಭದಲ್ಲಿ ಯಾವುದೇ ಲಕ್ಷಣ ತೋರಿಸದಿದ್ದರೂ, ಲಿವರ್‌ನಲ್ಲಿ ಕೊಬ್ಬು ಹೆಚ್ಚಾದಾಗ ದೇಹವು ಕೆಲವು ಮುನ್ಸೂಚನೆಗಳನ್ನು ನೀಡುತ್ತದೆ. ಅತಿಯಾದ ಆಯಾಸ, ಹೊಟ್ಟೆಯ ಬಲಭಾಗದಲ್ಲಿ ನೋವು, ಹಸಿವಾಗದಿರುವುದು, ಕಾಲುಗಳಲ್ಲಿ ಊತ ಮತ್ತು ಕಣ್ಣು-ಚರ್ಮ ಹಳದಿಯಾಗುವುದು ಇದರ ಪ್ರಮುಖ 5 ಲಕ್ಷಣಗಳಾಗಿವೆ.

ಅತಿಯಾದ ಆಯಾಸ

ಯಾವುದೇ ಕೆಲಸ ಮಾಡದಿದ್ದರೂ ದೇಹಕ್ಕೆ ವಿಪರೀತ ಸುಸ್ತು ಮತ್ತು ನಿಶ್ಯಕ್ತಿ ಅನಿಸುವುದು ಇದರ ಮೊದಲನೇ ಮುಖ್ಯ ಲಕ್ಷಣ. ಲಿವರ್ ಸರಿಯಾಗಿ ಕೆಲಸ ಮಾಡದಿದ್ದಾಗ ದೇಹದಲ್ಲಿ ಶಕ್ತಿ ಉತ್ಪಾದನೆ ಕಡಿಮೆಯಾಗುತ್ತದೆ.

ಹೊಟ್ಟೆಯ ಬಲಭಾಗದಲ್ಲಿ ನೋವು

ಹೊಟ್ಟೆಯ ಮೇಲ್ಭಾಗದ ಬಲಗಡೆಯಲ್ಲಿ ಲಘು ನೋವು, ಒತ್ತಡ ಅಥವಾ ಏನೋ ಒಂದು ತರಹದ ಭಾರವಾದ ಭಾವನೆ ಉಂಟಾಗಬಹುದು.

ಹಸಿವಾಗದಿರುವುದು ಮತ್ತು ತೂಕ ಇಳಿಕೆ

ಊಟ ಮಾಡಲು ಮನಸ್ಸಾಗದಿರುವುದು, ನಿರಂತರವಾಗಿ ವಾಕರಿಕೆ ಬಂದಂತಾಗುವುದು ಮತ್ತು ಯಾವುದೇ ಕಾರಣವಿಲ್ಲದೆ ಇದ್ದಕ್ಕಿದ್ದಂತೆ ದೇಹದ ತೂಕ ಕಡಿಮೆಯಾಗುವುದು ಇದರ ಮತ್ತೊಂದು ಲಕ್ಷಣವಾಗಿದೆ.

ಕಾಲು ಮತ್ತು ಹೊಟ್ಟೆಯಲ್ಲಿ ಊತ

ಸಮಸ್ಯೆ ಕೊಂಚ ಗಂಭೀರವಾದಾಗ ದೇಹದಲ್ಲಿ ದ್ರವದ ಶೇಖರಣೆಯಾಗಿ ಕಾಲುಗಳು, ಪಾದಗಳು ಮತ್ತು ಹೊಟ್ಟೆಯ ಭಾಗ ಊದಿಕೊಳ್ಳಲು ಪ್ರಾರಂಭಿಸಬಹುದು.

ಕಣ್ಣುಗಳು ಹಳದಿಯಾಗುವುದು

ಲಿವರ್ ಬಲಹೀನಗೊಂಡಾಗ ರಕ್ತದಲ್ಲಿ ಬಿಲಿರುಬಿನ್ ಎಂಬ ಅಂಶ ಹೆಚ್ಚಾಗಿ, ಕಾಮಾಲೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಕಣ್ಣಿನ ಬಿಳಿ ಭಾಗ ಮತ್ತು ಚರ್ಮ ಹಳದಿ ಬಣ್ಣಕ್ಕೆ ತಿರುಗಬಹುದು ಹಾಗೂ ಮೂತ್ರದ ಬಣ್ಣ ಗಾಢವಾಗಬಹುದು.