ಅಸ್ತಮಾ ಕಾಯಿಲೆಯ 5 ಲಕ್ಷಣಗಳು

ವಿನಾಯಕ ನಾಯಕ

ಅಸ್ತಮಾ ಕಾಯಿಲೆಯ 5 ಲಕ್ಷಣಗಳು

ಅಸ್ತಮಾ ಶ್ವಾಸಕೋಶದ ನಾಳಗಳಲ್ಲಿ ಊತ ಉಂಟುಮಾಡಿ ಉಸಿರಾಟಕ್ಕೆ ಅಡ್ಡಿಪಡಿಸುವ ದೀರ್ಘಕಾಲದ ಸಮಸ್ಯೆಯಾಗಿದೆ. ಆರಂಭಿಕ ಹಂತದಲ್ಲಿ ಇದರ ಲಕ್ಷಣಗಳನ್ನು ಗುರುತಿಸುವುದು ಚಿಕಿತ್ಸೆಗೆ ಬಹಳ ಮುಖ್ಯ. ಅತಿಯಾದ ಕೆಮ್ಮು, ಉಸಿರಾಟದ ತೊಂದರೆ ಮತ್ತು ಎದೆಯಲ್ಲಿ ಬಿಗಿತದಂತಹ ಲಕ್ಷಣಗಳು ಅಸ್ತಮಾದ ಮುನ್ಸೂಚನೆಯಾಗಿರಬಹುದು.

ಉಸಿರಾಟದ ತೊಂದರೆ

ಇದು ಅಸ್ತಮಾದ ಅತಿ ದೊಡ್ಡ ಲಕ್ಷಣ. ಉಸಿರಾಟದ ನಾಳಗಳು ಕಿರಿದಾಗುವುದರಿಂದ ಉಸಿರು ಬಿಡಲು ಅಥವಾ ಎಳೆದುಕೊಳ್ಳಲು ತುಂಬಾ ಕಷ್ಟವಾಗುತ್ತದೆ. ಸ್ವಲ್ಪ ನಡೆದರೂ ಸಾಕು ಉಸಿರು ಕಟ್ಟಿದಂತಾಗುತ್ತದೆ.

ಎದೆ ಬಿಗಿತ

ಎದೆಯ ಭಾಗದಲ್ಲಿ ಯಾರೋ ಒತ್ತಿ ಹಿಡಿದಂತೆ ಅಥವಾ ಭಾರವಾದ ಅನುಭವವಾಗುವುದು. ಇದು ಉಸಿರಾಟದ ಹಾದಿಯಲ್ಲಿ ಗಾಳಿಯ ಸಂಚಾರಕ್ಕೆ ಅಡ್ಡಿಯಾದಾಗ ಉಂಟಾಗುತ್ತದೆ.

ಉಸಿರಾಡುವಾಗ ಶಬ್ದ ಬರುವುದು

ಉಸಿರು ಬಿಡುವಾಗ ಶಿಳ್ಳೆ ಹೊಡೆದಂತೆ ಅಥವಾ ಸಣ್ಣಗೆ 'ಈಯ್' ಎಂದು ಶಬ್ದ ಬರುವುದು. ಇದು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಮತ್ತು ಅಸ್ತಮಾ ಪತ್ತೆಹಚ್ಚಲು ಪ್ರಮುಖ ಸೂಚನೆಯಾಗಿದೆ.

ನಿರಂತರ ಕೆಮ್ಮು

ವಿಶೇಷವಾಗಿ ರಾತ್ರಿಯ ವೇಳೆ ಅಥವಾ ಮುಂಜಾನೆ ಕೆಮ್ಮು ಹೆಚ್ಚಾಗುತ್ತದೆ. ಒಣ ಕೆಮ್ಮು ಅಥವಾ ನೆಗಡಿಯೊಂದಿಗೆ ಬರುವ ಕೆಮ್ಮು ಅಸ್ತಮಾ ರೋಗಿಗಳನ್ನು ಹೆಚ್ಚು ಕಾಡುತ್ತದೆ

ನಿದ್ದೆಯ ಸಮಸ್ಯೆ

ಕೆಮ್ಮು, ಉಸಿರಾಟದ ತೊಂದರೆ ಅಥವಾ ಎದೆ ಬಿಗಿತದ ಕಾರಣದಿಂದ ರಾತ್ರಿಯ ವೇಳೆ ನಿದ್ದೆ ಸರಿಯಾಗಿ ಬರುವುದಿಲ್ಲ. ಪದೇ ಪದೇ ಎಚ್ಚರವಾಗುವುದು ಅಸ್ತಮಾದ ತೀವ್ರತೆಯನ್ನು ತೋರಿಸುತ್ತದೆ.