ಈ 5 ಲಕ್ಷಣಗಳು ಕಾಣಿಸಿಕೊಂಡ್ರೆ ನಿಮ್ಮ ಕಿಡ್ನಿ ಅಪಾಯದಲ್ಲಿದೆ ಎಂದರ್ಥ
ಮೋಹನ್ ಶೆಟ್ಟಿ
ಈ 5 ಲಕ್ಷಣಗಳು ಕಾಣಿಸಿಕೊಂಡ್ರೆ ನಿಮ್ಮ ಕಿಡ್ನಿ ಅಪಾಯದಲ್ಲಿದೆ ಎಂದರ್ಥ
ಆರಂಭಿಕ ಹಂತದಲ್ಲಿಯೇ ಕಿಡ್ನಿ ಸಮಸ್ಯೆಗಳನ್ನು ಪತ್ತೆಹಚ್ಚಿದರೆ, ಸೂಕ್ತ ಚಿಕಿತ್ಸೆ ಮೂಲಕ ಉಲ್ಬಣಗೊಳ್ಳುವ ಮೊದಲೇ ಗುಣಪಡಿಸಿಕೊಳ್ಳಬಹುದು.
ಮೂತ್ರದಲ್ಲಿನ ಬದಲಾವಣೆಗಳು
ಆರೋಗ್ಯದ ಮೇಲೆ ಪರಿಣಾಮ ಬೀರುವ ಮೂತ್ರಪಿಂಡದ ಸಮಸ್ಯೆಗಳ ಮೊದಲ ಸೂಚನೆಯೇ ಮೂತ್ರ. ಮೂತ್ರದ ಬಣ್ಣದಲ್ಲಿನ ಬದಲಾವಣೆಗಳು
ಕಾಲು, ತೋಳು ಮತ್ತು ಮುಖದ ಊತ
ಮೂತ್ರಪಿಂಡಗಳು ದೇಹದಿಂದ ಹೆಚ್ಚುವರಿ ದ್ರವವನ್ನು ತೆಗೆದುಹಾಕುತ್ತವೆ. ಅವು ಸರಿಯಾಗಿ ಕೆಲಸ ಮಾಡದಿದ್ದಾಗ, ದೇಹದಲ್ಲಿ ದ್ರವವು ಸಂಗ್ರಹವಾಗುತ್ತದೆ. ಪರಿಣಾಮವಾಗಿ, ಕಾಲು, ಮೊಣಕಾಲು, ಪಾದ, ಕೈ ಮತ್ತು ಕಣ್ಣುಗಳ ಸುತ್ತಲೂ ಊದಿಕೊಳ್ಳುತ್ತವೆ.
ಅತಿಯಾದ ಆಯಾಸ, ನಿಶಕ್ತಿ
ಕಿಡ್ನಿ ಕೆಂಪು ರಕ್ತ ಕಣಗಳ ಉತ್ಪಾದನೆಗೆ ಅಗತ್ಯವಾದ ಹಾರ್ಮೋನ್ ಎರಿಥ್ರೋಪೊಯೆಟಿನ್ ಉತ್ಪಾದಿಸುತ್ತದೆ. ಅವು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ರಕ್ತಹೀನತೆ ಉಂಟಾಗುತ್ತದೆ.
ಒಣ ಚರ್ಮ (ಡ್ರೈ ಸ್ಕಿನ್)
ಮೂತ್ರಪಿಂಡಗಳು ದೇಹದಿಂದ ತ್ಯಾಜ್ಯವನ್ನು ತೆಗೆದುಹಾಕದಿದ್ದರೆ, ಅವು ರಕ್ತದಲ್ಲಿ ಶೇಕರಣೆಯಾಗುತ್ತದೆ. ಇದು ಚರ್ಮದ ಮೇಲೆ ಪರಿಣಾಮ ಬೀರುತ್ತದೆ.
ಉಸಿರಾಟದ ತೊಂದರೆ, ಎದೆಯಲ್ಲಿ ಭಾರ
ಮೂತ್ರಪಿಂಡಗಳು ವಿಫಲವಾದರೆ, ಶ್ವಾಸಕೋಶಕ್ಕೆ ದ್ರವ ಪ್ರವೇಶಿಸುವ ಅಪಾಯವಿದೆ. ಪರಿಣಾಮವಾಗಿ, ಮೆಟ್ಟಿಲುಗಳನ್ನು ಹತ್ತುವಾಗ ಎದೆಯಲ್ಲಿ ಏನೋ ಒತ್ತಡ, ಉಸಿರಾಟದ ತೊಂದರೆ ಮತ್ತು ಆಯಾಸ ಕಾಡಬಹುದು.
ಕಿಡ್ನಿ ಆರೋಗ್ಯಕ್ಕೆ ಈ ಸಲಹೆಗಳನ್ನು ಪಾಲಿಸಿ
ದಿನಕ್ಕೆ 2-3 ಲೀಟರ್ ನೀರು ಕುಡಿಯಿರಿ, ಉಪ್ಪು ಮತ್ತು ಸಂಸ್ಕರಿಸಿದ ಆಹಾರವನ್ನು ಕಡಿತಗೊಳಿಸಿ. ಮಧ್ಯಪಾನ, ಧೂಮಪಾನಕ್ಕೆ ಗುಡ್ಬೈ ಹೇಳಿ. ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಮರೆಯದಿರಿ