ಸದೃಢ ಹೃದಯಕ್ಕಾಗಿ ವಿಜ್ಞಾನವೇ ಒಪ್ಪಿದ 5 ಅಭ್ಯಾಸಗಳು

ಮಣಿಕಂಠ ಪಾ ಹಿರೇಮಠ

ಸದೃಢ ಹೃದಯಕ್ಕಾಗಿ ವಿಜ್ಞಾನವೇ ಒಪ್ಪಿದ 5 ಅಭ್ಯಾಸಗಳು

ಆರೋಗ್ಯಕರ ಹೃದಯಕ್ಕಾಗಿ ನಾರಿನಂಶದ ಆಹಾರ, ನಿರಂತರ ವ್ಯಾಯಾಮ ಮತ್ತು ಸಮರ್ಪಕ ನಿದ್ದೆ ಅತ್ಯಗತ್ಯ. ಒತ್ತಡ ಕಡಿಮೆ ಮಾಡಿ, ಧೂಮಪಾನ ತ್ಯಜಿಸಿ ಹಾಗೂ ಉಪ್ಪಿನ ಬಳಕೆ ಮಿತಿಗೊಳಿಸುವುದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬಂದು ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ ಎಂದು ವಿಜ್ಞಾನವು ದೃಢಪಡಿಸಿದೆ.

ಧೂಮಪಾನ ತ್ಯಜಿಸಿ

ನಿರಂತರ ವ್ಯಾಯಾಮ

ವಾರಕ್ಕೆ ಕನಿಷ್ಠ 150 ನಿಮಿಷಗಳ ಕಾಲ ಓಟ ಅಥವಾ ನಡಿಗೆಯಂತಹ ವ್ಯಾಯಾಮ ಮಾಡುವುದರಿಂದ ಹೃದಯದ ಸ್ನಾಯುಗಳು ಬಲಗೊಂಡು ರಕ್ತ ಪರಿಚಲನೆಯು ಸುಗಮವಾಗಿ ಸಾಗುತ್ತದೆ.

ಒತ್ತಡ ನಿರ್ವಹಣೆ

ಅತಿಯಾದ ಮಾನಸಿಕ ಒತ್ತಡ ಹೃದಯಾಘಾತಕ್ಕೆ ಮುಖ್ಯ ಕಾರಣ. ಧ್ಯಾನ ಮಾಡುವುದರಿಂದ ಕಾರ್ಟಿಸೋಲ್ ಹಾರ್ಮೋನ್ ಮಟ್ಟ ಕಡಿಮೆಯಾಗಿ ಹೃದಯದ ಬಡಿತ ನಾರ್ಮಲ್ ಆಗಿ ಇರುತ್ತದೆ.

ನಿದ್ದೆ

ದಿನಕ್ಕೆ 7 ರಿಂದ 9 ಗಂಟೆಗಳ ಕಾಲ ಚೆನ್ನಾಗಿ ನಿದ್ದೆ ಮಾಡುವುದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ ಮತ್ತು ಹೃದಯದ ಕಾರ್ಯಕ್ಷಮತೆ ಹೆಚ್ಚಾಗುತ್ತದೆ.

ನಾರಿನಂಶದ ಆಹಾರ

ಧಾನ್ಯಗಳು ಮತ್ತು ತರಕಾರಿಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ, ರಕ್ತನಾಳಗಳು ಬ್ಲಾಕ್ ಆಗದಂತೆ ತಡೆಯಲು ವಿಜ್ಞಾನದ ಪ್ರಕಾರ ಇದು ಅತ್ಯಂತ ಅವಶ್ಯಕವಾಗಿದೆ.