ಬೇಸಿಗೆಯಲ್ಲಿ ಲಸ್ಸಿ ಕುಡಿಯುವುದರ 5 ಪ್ರಯೋಜನಗಳು

ವಿನಾಯಕ ನಾಯಕ

ಬೇಸಿಗೆಯಲ್ಲಿ ಲಸ್ಸಿ ಕುಡಿಯುವುದರ 5 ಪ್ರಯೋಜನಗಳು

ಬೇಸಿಗೆಯ ಕಡು ಬಿಸಿಲಿಗೆ ತಂಪಾದ ಲಸ್ಸಿಗಿಂತ ಅತ್ಯುತ್ತಮ ಪಾನೀಯ ಮತ್ತೊಂದಿಲ್ಲ. ಮೊಸರಿನಿಂದ ತಯಾರಾಗುವ ಈ ಸಾಂಪ್ರದಾಯಿಕ ಪಾನೀಯವು ದೇಹದ ಉಷ್ಣತೆಯನ್ನು ತಗ್ಗಿಸುವುದರ ಜೊತೆಗೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ದೇಹವನ್ನು ತಂಪಾಗಿಡುತ್ತದೆ

ಲಸ್ಸಿಯನ್ನು ಮೊಸರಿನಿಂದ ತಯಾರಿಸುವುದರಿಂದ ಇದು ಪ್ರಕೃತಿಯಲ್ಲೇ ಅತ್ಯಂತ ತಂಪಾದ ಗುಣವನ್ನು ಹೊಂದಿದೆ. ಬೇಸಿಗೆಯ ಕಡು ಬಿಸಿಲಿನಿಂದಾಗಿ ದೇಹದಲ್ಲಿ ಉಂಟಾಗುವ ಉಷ್ಣತೆಯನ್ನು ಕಡಿಮೆ ಮಾಡುತ್ತದೆ

ಜೀರ್ಣಕ್ರಿಯೆಗೆ ಉತ್ತಮ

ಮೊಸರಿನಲ್ಲಿ ಪ್ರೋಬಯಾಟಿಕ್ಸ್ ಅಂದರೆ ಉತ್ತಮ ಬ್ಯಾಕ್ಟೀರಿಯಾಗಳು ಸಮೃದ್ಧವಾಗಿವೆ. ಇದು ಬೇಸಿಗೆಯಲ್ಲಿ ಕಾಡುವ ಗ್ಯಾಸ್ಟ್ರಿಕ್, ಅಜೀರ್ಣ, ಹೊಟ್ಟೆ ಉಬ್ಬರ ಮತ್ತು ಮಲಬದ್ಧತೆಯಂತಹ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ.

ನಿರ್ಜಲೀಕರಣವನ್ನು ತಡೆಯುತ್ತದೆ

ಬಿಸಿಲಿನ ಬೇಗೆಗೆ ದೇಹದಿಂದ ಬೆವರಿನ ರೂಪದಲ್ಲಿ ನೀರು ಮತ್ತು ಅಗತ್ಯ ಲವಣಗಳು ಹೊರಹೋಗುತ್ತವೆ. ಲಸ್ಸಿಯಲ್ಲಿ ಎಲೆಕ್ಟ್ರೋಲೈಟ್‌ಗಳು ಮತ್ತು ನೀರಿನಂಶ ಹೆಚ್ಚಿರುವುದರಿಂದ, ಇದು ದೇಹದಲ್ಲಿ ನೀರಿನ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ ಮತ್ತು ನಿರ್ಜಲೀಕರಣ ಆಗದಂತೆ ತಡೆಯುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಳ

ಲಸ್ಸಿಯಲ್ಲಿ ಲ್ಯಾಕ್ಟಿಕ್ ಆಸಿಡ್ ಮತ್ತು ವಿಟಮಿನ್ ಡಿ ಹೇರಳವಾಗಿರುತ್ತದೆ. ಬೇಸಿಗೆಯಲ್ಲಿ ಹರಡುವ ಸಾಂಕ್ರಾಮಿಕ ರೋಗಗಳು ಮತ್ತು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಇದು ದೇಹಕ್ಕೆ ಶಕ್ತಿ ನೀಡುತ್ತದೆ.

ಮೂಳೆಗಳ ಆರೋಗ್ಯ ವೃದ್ಧಿ

ಮೊಸರಿನಲ್ಲಿ ಕ್ಯಾಲ್ಸಿಯಂ ಅಂಶ ಅಧಿಕವಾಗಿರುವುದರಿಂದ ಇದು ಮೂಳೆಗಳು ಮತ್ತು ಹಲ್ಲುಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಷ್ಟೇ ಅಲ್ಲದೆ, ಬೇಸಿಗೆಯ ಸುಸ್ತನ್ನು ನೀಗಿಸಿ ದೇಹಕ್ಕೆ ತಕ್ಷಣದ ಶಕ್ತಿಯನ್ನು ನೀಡುತ್ತದೆ.