126th Mann Ki Baat | ಕರೂರ್​ ದುರಂತದಲ್ಲಿ ಮೃತಪಟ್ಟವರಿಗೆ ಎರಡು ಲಕ್ಷ ಪರಿಹಾರ; ಖಾದಿ ಖರೀದಿಸುವಂತೆ ಮನವಿ ಮಾಡಿದ ಪ್ರಧಾನಿ ಮೋದಿ

Vijayavan

126th Mann Ki Baat | ಕರೂರ್​ ದುರಂತದಲ್ಲಿ ಮೃತಪಟ್ಟವರಿಗೆ ಎರಡು ಲಕ್ಷ ಪರಿಹಾರ; ಖಾದಿ ಖರೀದಿಸುವಂತೆ ಮನವಿ ಮಾಡಿದ ಪ್ರಧಾನಿ ಮೋದಿ

126th Mann Ki Baat: ಪ್ರಧಾನಿ ನರೇಂದ್ರ ಮೋದಿ ಭಾನುವಾರ (ಸೆ 28) ತಮ್ಮ ಮನ್ ಕಿ ಬಾತ್‌ನ 126 ನೇ ಸಂಚಿಕೆಯ ಭಾಷಣದಲ್ಲಿ ಅವರು ಸಾಮಾಜಿಕ ಉಪಕ್ರಮಗಳು, ಕರೂರ್​​ನಲ್ಲಿ ನಡೆದ ಕಾಲ್ತುಳಿತ ಪ್ರಕರಣದ ಸಂತ್ರಸ್ತರಿಗೆ ಪರಿಹಾರ ಕ್ರಮಗಳು ಮತ್ತು ಅನೇಕ ಗಣ್ಯರಿಗೆ ಗೌರವ ಸಲ್ಲಿಸಿದರು.

ಛಠ್ ಪೂಜೆ ಮತ್ತು ಯುನೆಸ್ಕೋ ಮನ್ನಣೆ

ಬಿಹಾರದ ಛಠ್ ಪೂಜೆಯ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಛಠ್ ಪೂಜೆ ಸೂರ್ಯ ದೇವ್ ಅರ್ಪಣೆಗಳೊಂದಿಗೆ ಗೌರವಿಸುತ್ತದೆ. ಮೊದಲು ಸ್ಥಳೀಯವಾಗಿದ್ದ ಹಬ್ಬ ಇಂದು ಈಗ ಜಾಗತಿಕ ಹಬ್ಬವಾಗುತ್ತಿದೆ. ಈ ಉತ್ಸವವನ್ನು ಯುನೆಸ್ಕೋ ಅಮೂರ್ತ ಸಾಂಸ್ಕೃತಿಕ ಪರಂಪರೆಯಾಗಿ ಪಟ್ಟಿ ಮಾಡಲು ಸರ್ಕಾರದ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು.

ಸ್ಥಳೀಯ ಮತ್ತು ಖಾದಿ ಪ್ರಚಾರಕ್ಕಾಗಿ ಧ್ವನಿ

ಮಹಾತ್ಮಾ ಗಾಂಧಿಯವರು ಸ್ವದೇಶಿ ಮತ್ತು ಖಾದಿಗೆ ಬಲವಾದ ಒತ್ತು ನೀಡುತ್ತಿದ್ದರು, ಈಗ ಅವರ ಜಯಂತಿಗೂ ಮುನ್ನ ಸ್ವದೇಶಿ ಉತ್ಪನ್ನಗಳನ್ನು ಖರೀದಿಸುವಂತೆ ದೇಶದ ನಾಗರಿಕರಿಗೆ ಮನವಿ ಮಾಡಿದ ಪ್ರಧಾನಿ, ಪ್ರತಿಯೊಬ್ಬರೂ ಖಾದಿ ಖರೀದಿಸಲು ವಿನಂತಿಸುತ್ತೇನೆ, ಇದು ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು ಸಂರಕ್ಷಿಸುತ್ತದೆ ಮತ್ತು ಭಾರತದ ಆರ್ಥಿಕತೆಯನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದರು.(ಏಜೆನ್ಸೀಸ್​)

3. ಲತಾ ಮಂಗೇಶ್ಕರ್ ಅವರಿಗೆ ಗೌರವ

ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಜನ್ಮ ದಿನದ ನಿಮಿತ್ತ ಅವರನ್ನೂ ನೆನಪಿಸಿಕೊಂಡ ಪ್ರಧಾನಿ, ಭಾರತೀಯ ಸಂಸ್ಕೃತಿ ಮತ್ತು ಸಂಗೀತದಲ್ಲಿ ಆಸಕ್ತಿ ಹೊಂದಿರುವ ಯಾರಾದರೂ ಮಂಗೇಶ್ಕರ್​​ ಹಾಡುಗಳಿಗೆ ತಲೆದೂಗಲೇ ಬೇಕು, ಅವರು ದೇಶಭಕ್ತಿ ಗೀತೆಗಳು ಅಸಂಖ್ಯಾತ ಜನರನ್ನು ಪ್ರೇರೇಪಿಸಿವೆ ಎಂದರು. ಇದೇ ವೇಳೆ ತಮ್ಮ ಜೊತೆಗಿನ ವೈಯಕ್ತಿಕ ಬಾಂಧವ್ಯ ಮತ್ತು ರಕ್ಷಾ ಬಂಧನವನ್ನು ಸಹ ನೆನಪಿಸಿಕೊಂಡರು.

4. ಭಗತ್ ಸಿಂಗ್ ಅವರಿಗೆ ಗೌರವ

ಕ್ರಾಂತಿಕಾರಿ ಭಗತ್ ಸಿಂಗ್ ಅವರ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಭಗತ್​​​ ಸಿಂಗ್​​​​ ಪ್ರತಿಯೊಬ್ಬ ಭಾರತೀಯರಿಗೆ, ವಿಶೇಷವಾಗಿ ಯುವಕರಿಗೆ ಸ್ಫೂರ್ತಿಯ ಮೂಲ ಎಂದು ಕರೆದರು. ನಿರ್ಭಯತೆಯು ಅವರ ಸ್ವಭಾವದಲ್ಲಿ ಬೇರೂರಿತ್ತು. ಅವರನ್ನು ಗಲ್ಲಿಗೇರಿಸುವ ಮೊದಲು, ತಮ್ಮನ್ನು ಮತ್ತು ತಮ್ಮ ಸ್ನೇಹಿತರನ್ನು ಯುದ್ಧ ಕೈದಿಗಳಂತೆ ಪರಿಗಣಿಸಬೇಕೆಂದು ಬಯಸಿದ್ದರು ಎಂದು ಹೇಳಿದರು. ಇದು ಅವರ ಅದಮ್ಯ ಧೈರ್ಯಕ್ಕೆ ಪುರಾವೆಯಾಗಿದೆ ಎಂದರು.