ರಾಕಿಂಗ್ ಸ್ಟಾರ್ ಯಶ್, ಇಂದು (ಜ.08) 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇಂದು ಬಿಡುಗಡೆಯಾದ 'ಟಾಕ್ಸಿಕ್' ಚಿತ್ರದ ಹೊಸ ಟೀಸರ್ ಸಂಚಲನ ಮೂಡಿಸಿದ್ದು, ಟೀಸರ್‌ನಲ್ಲಿ ಕಂಡುಬಂದ 10 ವಿಶೇಷತೆಗಳನ್ನು ತಿಳಿದುಕೊಳ್ಳೋಣ.
ರಾಯ ಅವತಾರ
ಟೀಸರ್ ಮೂಲಕ ಯಶ್ ಅವರ ಪಾತ್ರದ ಹೆಸರನ್ನು 'ರಾಯ' ಎಂದು ಪರಿಚಯಿಸಲಾಗಿದೆ. ಈ ಮೊದಲಿನ ಪೋಸ್ಟರ್‌ಗಳಲ್ಲಿ ಕೇವಲ ಬೆನ್ನಿನ ಭಾಗ ಮಾತ್ರ ತೋರಿಸಲಾಗಿತ್ತು. ಈಗ ಯಶ್ ಅವರ ಪೂರ್ಣ ಖದರ್ ರಿವೀಲ್ ಆಗಿದೆ.
ಹಾಲಿವುಡ್ ಶೈಲಿಯ ಮೇಕಿಂಗ್
ಟೀಸರ್‌ನ ವಿಶುವಲ್ಸ್ ಮತ್ತು ಆಕ್ಷನ್ ಸನ್ನಿವೇಶಗಳು ಪಕ್ಕಾ ಹಾಲಿವುಡ್ ಗುಣಮಟ್ಟದಲ್ಲಿವೆ. ಸಿನಿಮಾದ ಕಲರ್ ಗ್ರೇಡಿಂಗ್ ಮತ್ತು ಕ್ಯಾಮೆರಾ ವರ್ಕ್ ಅಂತಾರಾಷ್ಟ್ರೀಯ ಮಟ್ಟದ ಚಿತ್ರಗಳನ್ನು ನೆನಪಿಸುತ್ತದೆ.
ಸ್ಮಶಾನದಲ್ಲಿ ಮಾಸ್ ಎಂಟ್ರಿ
ಟೀಸರ್ ಆರಂಭವಾಗುವುದೇ ಒಂದು ಸ್ಮಶಾನದ ದೃಶ್ಯದೊಂದಿಗೆ. ಅಲ್ಲಿ ನಡೆಯುತ್ತಿರುವ ಅಂತ್ಯಕ್ರಿಯೆಯ ನಡುವೆ ಯಶ್ ಅವರು ಕಾರಿನಲ್ಲಿ ಎಂಟ್ರಿ ಕೊಟ್ಟು, ಗುಂಡಿನ ಮಳೆ ಸುರಿಸುವುದೇ ಟೀಸರ್‌ನ ಹೈಲೈಟ್.
ಟಾಮಿ ಗನ್ ಹಿಡಿದ ರಾಯ
ಯಶ್ ಅವರು ವಿಂಟೇಜ್ ಶೈಲಿಯ ಟಾಮಿ ಗನ್ ಹಿಡಿದು ವಿಲನ್‌ಗಳನ್ನು ಸದೆಬಡಿಯುವ ದೃಶ್ಯ ಫ್ಯಾನ್ಸ್‌ಗೆ ಭರ್ಜರಿ ಕಿಕ್ ನೀಡಿದೆ. ಅವರ ಸ್ಟೈಲ್ ಮತ್ತು ಗನ್ ಹಿಡಿದ ರೀತಿ ತುಂಬಾ ರಗಡ್ ಆಗಿದೆ.
ಡ್ಯಾಡಿ ಈಸ್ ಹೋಮ್ ಡೈಲಾಗ್
ಟೀಸರ್ ಕೊನೆಯಲ್ಲಿ ಯಶ್ ಅವರು ಸಿಗಾರ್ ಹಚ್ಚುತ್ತಾ ಹೇಳುವ "Daddy's Home" ಎಂಬ ಸಂಭಾಷಣೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ.
ಬಲವಾದ ತಾರಾಗಣದ ಸುಳಿವು
ಈಗಾಗಲೇ ಘೋಷಣೆಯಾಗಿರುವಂತೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ , ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಅವರ ಪಾತ್ರಗಳು ಈ ಡಾರ್ಕ್ ಜಗತ್ತಿನಲ್ಲಿ ಎಷ್ಟು ಮುಖ್ಯ ಎಂಬುದನ್ನು ಟೀಸರ್ ಬಿಂಬಿಸುತ್ತದೆ.
ಹಸಿ-ಬಿಸಿ ಮತ್ತು ಬೋಲ್ಡ್ ದೃಶ್ಯಗಳು
ಟೀಸರ್‌ನಲ್ಲಿ ಯಶ್ ಅವರು ಕಾರಿನ ಒಳಗೆ ಯುವತಿಯೊಟ್ಟಿಗೆ ಇರುವ ಒಂದು ಬೋಲ್ಡ್ ದೃಶ್ಯವಿದ್ದು, ಇದು ಸಿನೆಮಾ ಎಷ್ಟು 'ರಾ' (Raw) ಆಗಿರಲಿದೆ ಎಂಬುದನ್ನು ತೋರಿಸುತ್ತದೆ.
ಗೀತು ಮೋಹನ್ ದಾಸ್ ಮ್ಯಾಜಿಕ್
ನಿರ್ದೇಶಕಿ ಗೀತು ಮೋಹನ್ ದಾಸ್ ಅವರು ಯಶ್ ಅವರನ್ನು ಹಿಂದೆಂದೂ ಕಾಣದ ರೀತಿಯಲ್ಲಿ ತೋರಿಸಿದ್ದಾರೆ. ಕೇವಲ ಆಕ್ಷನ್ ಮಾತ್ರವಲ್ಲದೆ, ಒಂದು ಗಂಭೀರ ಮತ್ತು ತೀವ್ರವಾದ ಕಥೆ ಇದರಲ್ಲಿ ಅಡಗಿದೆ.
ರವಿ ಬಸ್ರೂರ್ ಸಂಗೀತ
ಟೀಸರ್‌ನ ಮ್ಯೂಸಿಕ್ ಸಖತ್ ಪವರ್‌ಫುಲ್ ಆಗಿದೆ. ಪ್ರತಿ ಶಬ್ದ ಮತ್ತು ಬಿಜಿಎಂ ದೃಶ್ಯದ ತೀವ್ರತೆಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ.
ಬಿಡುಗಡೆಯ ದಿನಾಂಕ
ಕೊನೆಯಲ್ಲಿ ಚಿತ್ರತಂಡ ಸಿನಿಮಾ ಬಿಡುಗಡೆಯ ದಿನಾಂಕವನ್ನು ಖಚಿತಪಡಿಸಿದೆ. ಮಾರ್ಚ್ 19, 2026 ರಂದು 'ಟಾಕ್ಸಿಕ್' ವಿಶ್ವದಾದ್ಯಂತ ತೆರೆಕಾಣಲಿದೆ.