ಸತತ ಕುಳಿತು ಕೆಲಸ ಮಾಡಿದರೆ ಕಾಯಿಲೆ ಗ್ಯಾರಂಟಿ: ತಪ್ಪಿಸಲು ಹೀಗೆ ಮಾಡಿ

ಭಾನುಪ್ರಿಯ ಡಿ.ಕೆ

ಸತತ ಕುಳಿತು ಕೆಲಸ ಮಾಡಿದರೆ ಕಾಯಿಲೆ ಗ್ಯಾರಂಟಿ: ತಪ್ಪಿಸಲು ಹೀಗೆ ಮಾಡಿ

ದಿನವಿಡೀ ಒಂದೇ ಕಡೆ ಕುಳಿತು ಕೆಲಸ ಮಾಡುವುದರಿಂದ ಮಿದುಳಿನ ಆರೋಗ್ಯ ಕುಂಠಿತಗೊಳ್ಳುತ್ತದೆ ಮತ್ತು ಬುದ್ಧಿಮಾಂದ್ಯತೆಯ ಅಪಾಯ ಹೆಚ್ಚುತ್ತದೆ ಎಂದು ಇತ್ತೀಚಿನ ಸಂಶೋಧನೆಗಳು ಎಚ್ಚರಿಸಿವೆ.

ಪ್ರತಿ 45 ನಿಮಿಷಕ್ಕೊಮ್ಮೆ ಸಣ್ಣ ವಿರಾಮ

ಒಂದೇ ಸಮನೆ ಗಂಟೆಗಟ್ಟಲೆ ಕುಳಿತುಕೊಳ್ಳುವ ಬದಲು, ಪ್ರತಿ 45 ರಿಂದ 60 ನಿಮಿಷಗಳಿಗೊಮ್ಮೆ ಕನಿಷ್ಠ 5 ನಿಮಿಷಗಳ ಕಾಲ ಎದ್ದು ನಿಲ್ಲುವ ಅಥವಾ ನಡೆಯುವ ಹವ್ಯಾಸ ರೂಢಿಸಿಕೊಳ್ಳಿ.

'20-20-20' ನಿಯಮ ಪಾಲಿಸಿ

ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಮುಂದೆ ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವಾಗ ಕಣ್ಣು ಮತ್ತು ಮಿದುಳಿನ ಆಯಾಸವನ್ನು ತಡೆಯಲು ಇದು ಉತ್ತಮ ಸೂತ್ರ. ಪ್ರತಿ 20 ನಿಮಿಷಗಳಿಗೊಮ್ಮೆ, ನಿಮ್ಮ ಪರದೆಯಿಂದ ಕಣ್ಣು ಸರಿಸಿ, 20 ಅಡಿ ದೂರದಲ್ಲಿರುವ ಯಾವುದಾದರೂ ವಸ್ತುವನ್ನು ಕನಿಷ್ಠ 20 ಸೆಕೆಂಡುಗಳ ಕಾಲ ವೀಕ್ಷಿಸಿ.

ಫೋನ್ ಕರೆಗಳ ಸಮಯದಲ್ಲಿ ನಡೆಯಿರಿ

ನಿಮಗೆ ಕಚೇರಿಯಲ್ಲಾಗಲಿ ಅಥವಾ ಮನೆಯಲ್ಲಾಗಲಿ ಸುದೀರ್ಘವಾದ ಫೋನ್ ಕರೆಗಳು ಅಥವಾ ಮೀಟಿಂಗ್‌ಗಳಿದ್ದರೆ, ಕುಳಿತುಕೊಳ್ಳುವ ಬದಲು ಎದ್ದು ನಿಂತು ಅತ್ತಿತ್ತ ನಡೆದಾಡುತ್ತಾ ಮಾತನಾಡುವ ಅಭ್ಯಾಸ ಮಾಡಿಕೊಳ್ಳಿ.

ನಿಯಮಿತ ದೈಹಿಕ ವ್ಯಾಯಾಮ ಮತ್ತು ಯೋಗ

ದಿನದ ಜಡತ್ವವನ್ನು ಹೋಗಲಾಡಿಸಲು ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ವೇಗದ ನಡಿಗೆ, ಸೈಕ್ಲಿಂಗ್ ಅಥವಾ ಯೋಗಾಸನಗಳನ್ನು ಮಾಡಿ. ದೈಹಿಕ ಚಟುವಟಿಕೆಗಳು ಮಿದುಳಿಗೆ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸುವುದಲ್ಲದೆ, ವೃದ್ಧಾಪ್ಯದಲ್ಲಿ ಕಾಡುವ ಮರೆಗುಳಿತನದಂತಹ ಗಂಭೀರ ಕಾಯಿಲೆಗಳಿಂದ ನಿಮ್ಮನ್ನು ದೂರ ಇಡುತ್ತವೆ.

ಕುಳಿತುಕೊಳ್ಳುವ ಅಭ್ಯಾಸವನ್ನು 'ಸಕ್ರಿಯ'ವಾಗಿಸಿ

ನೀವು ಕಚೇರಿ ಕೆಲಸ ಅಥವಾ ಇನ್ನಿತರ ಕಾರಣಗಳಿಗಾಗಿ ದೀರ್ಘಕಾಲ ಕುಳಿತುಕೊಳ್ಳಬೇಕಾಗುತ್ತದೆ. ಹಾಗಾಗಿ ಬಿಡುವಿನ ವೇಳೆಯಲ್ಲಿ ಸುಮ್ಮನೆ ಟಿವಿ ನೋಡುವುದು ಅಥವಾ ಮೊಬೈಲ್ ಸ್ಕ್ರಾಲ್ ಮಾಡುವಂತಹ ನಿಷ್ಕ್ರಿಯ ಹವ್ಯಾಸಗಳ ಬದಲಿಗೆ, ಪುಸ್ತಕ ಓದುವುದು, ಓಡಾಡುವುದನ್ನು ಮಾಡಿ