ಕಿಡ್ನಿ ರಕ್ಷಣೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳೇನು?

ಭಾನುಪ್ರಿಯ ಡಿ.ಕೆ

ಕಿಡ್ನಿ ರಕ್ಷಣೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳೇನು?

ಮೂತ್ರಪಿಂಡಗಳು ನಮ್ಮ ದೇಹದ ಸೋಸುವ ಯಂತ್ರಗಳಿದ್ದಂತೆ. ರಕ್ತದಲ್ಲಿನ ಕಸವನ್ನು ಹೊರಹಾಕಿ ದೇಹವನ್ನು ಶುದ್ಧವಾಗಿಡಲು ಇವುಗಳ ಪಾತ್ರ ಬಹಳ ದೊಡ್ಡದು.

ಸಾಕಷ್ಟು ನೀರು ಕುಡಿಯಿರಿ

ಮೂತ್ರಪಿಂಡಗಳು ಸರಿಯಾಗಿ ಕೆಲಸ ಮಾಡಲು ನೀರು ಅತ್ಯಗತ್ಯ. ದಿನಕ್ಕೆ ಕನಿಷ್ಠ 2.5 ರಿಂದ 3 ಲೀಟರ್ ನೀರು ಕುಡಿಯುವುದು ಒಳ್ಳೆಯದು. ನೀರು ಕುಡಿಯುವುದರಿಂದ ಮೂತ್ರಪಿಂಡದಲ್ಲಿ ಕಲ್ಲುಗಳು ಉಂಟಾಗುವುದನ್ನು ತಡೆಯಬಹುದು.

ಉಪ್ಪು ಸೇವನೆ ಕಡಿಮೆ ಮಾಡಿ

ಅತಿಯಾದ ಉಪ್ಪು ಸೇವನೆಯು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಅಧಿಕ ರಕ್ತದೊತ್ತಡವು ಮೂತ್ರಪಿಂಡದ ವೈಫಲ್ಯಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಆದ್ದರಿಂದ, ದಿನಕ್ಕೆ 5 ಗ್ರಾಮ್‌ಗಿಂತ ಹೆಚ್ಚು ಉಪ್ಪು ಸೇವಿಸಬೇಡಿ.

ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಿ

ಮಧುಮೇಹ ಇರುವವರಲ್ಲಿ ಮೂತ್ರಪಿಂಡದ ಕಾಯಿಲೆ ಬರುವ ಸಾಧ್ಯತೆ ಹೆಚ್ಚು. ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಾದಾಗ, ಅದು ಮೂತ್ರಪಿಂಡದ ರಕ್ತನಾಳಗಳನ್ನು ಹಾನಿಗೊಳಿಸುತ್ತದೆ.

ನೋವು ನಿವಾರಕ ಮಾತ್ರೆಗಳ ಬಗ್ಗೆ ಎಚ್ಚರ

ಸಣ್ಣಪುಟ್ಟ ನೋವುಗಳಿಗೂ ವೈದ್ಯರ ಸಲಹೆ ಇಲ್ಲದೆ 'ಐಬುಪ್ರೊಫೇನ್' ಅಥವಾ 'ಡಿಕ್ಲೋಫೆನಾಕ್' ನಂತಹ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳಬೇಡಿ. .

ನಿಯಮಿತ ವ್ಯಾಯಾಮ

ಬೊಜ್ಜು ಅಥವಾ ಅತಿಯಾದ ತೂಕವು ಮೂತ್ರಪಿಂಡಗಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ ನಡಿಗೆ, ಯೋಗ ಅಥವಾ ಸೈಕ್ಲಿಂಗ್ ಮಾಡುವ ಮೂಲಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ.