ಈ ಬೇಸಿಗೆಯಲ್ಲಿ ತಂಪಾದ ಅನುಭವ ನೀಡುವ ಟಾಪ್ ಪ್ರವಾಸಿ ತಾಣಗಳಿವು!
ಭಾನುಪ್ರಿಯ ಡಿ.ಕೆ
ಈ ಬೇಸಿಗೆಯಲ್ಲಿ ತಂಪಾದ ಅನುಭವ ನೀಡುವ ಟಾಪ್ ಪ್ರವಾಸಿ ತಾಣಗಳಿವು!
ಬೇಸಿಗೆಯ ಸುಡುವ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಮತ್ತು ತಂಪಾದ ವಾತಾವರಣದಲ್ಲಿ ಸಮಯ ಕಳೆಯಲು ಭಾರತದಲ್ಲಿ ಹಲವು ಅದ್ಭುತ ತಾಣಗಳಿವೆ.
ಕೊಡಗು
ಕರ್ನಾಟಕದ 'ಸ್ಕಾಟ್ಲೆಂಡ್' ಎಂದೇ ಖ್ಯಾತಿಯಾಗಿರುವ ಕೊಡಗು, ಪಶ್ಚಿಮ ಘಟ್ಟಗಳ ಮಡಲಲ್ಲಿದೆ. ಇಲ್ಲಿನ ಹಚ್ಚ ಹಸಿರಿನ ಕಾಫಿ ತೋಟಗಳು, ತಂಪಾದ ಗಾಳಿ ಮತ್ತು ಮಂಜಿನಿಂದ ಆವೃತವಾದ ಬೆಟ್ಟಗಳು ಪ್ರವಾಸಿಗರಿಗೆ ಮುದ ನೀಡುತ್ತವೆ. ಅಬ್ಬಿ ಜಲಪಾತ, ರಾಜಾ ಸೀಟ್ ಮತ್ತು ತಲಕಾವೇರಿ ಇಲ್ಲಿನ ಪ್ರಮುಖ ಆಕರ್ಷಣೆಗಳು.
ಮುನ್ನಾರ್
ದಕ್ಷಿಣ ಭಾರತದ ಅತ್ಯಂತ ಸುಂದರ ಗಿರಿಧಾಮಗಳಲ್ಲಿ ಮುನ್ನಾರ್ ಅಗ್ರಸ್ಥಾನದಲ್ಲಿದೆ. ಸಮುದ್ರ ಮಟ್ಟದಿಂದ ಸುಮಾರು 1600 ಮೀಟರ್ ಎತ್ತರದಲ್ಲಿರುವ ಈ ಪ್ರದೇಶವು ಮೈಲಿಗಟ್ಟಲೆ ಹರಡಿರುವ ಚಹಾ ತೋಟಗಳಿಗೆ ಪ್ರಸಿದ್ಧವಾಗಿದೆ.
ಸಿಕ್ಕಿಂ
ನಿಮಗೆ ಹಿಮಾಲಯದ ಸೌಂದರ್ಯವನ್ನು ಆಸ್ವಾದಿಸಬೇಕೆಂದಿದ್ದರೆ ಸಿಕ್ಕಿಂ ಅತ್ಯುತ್ತಮ ಆಯ್ಕೆ. ಇಲ್ಲಿನ ಗ್ಯಾಂಗ್ಟಾಕ್, ಲಾಚುಂಗ್ ಮತ್ತು ನಾಥುಲಾ ಪಾಸ್ ನಿಮ್ಮನ್ನು ಬೆರಗುಗೊಳಿಸುತ್ತವೆ. ಸ್ವಚ್ಛವಾದ ಸರೋವರಗಳು ಮತ್ತು ಬೌದ್ಧ ಮಂದಿರಗಳು ಮನಸ್ಸಿಗೆ ಶಾಂತಿ ನೀಡುತ್ತವೆ.
ಮನಾಲಿ
ಬಿಸಿಲ ಬೇಗೆಯ ನಡುವೆ ಹಿಮದ ಅನುಭವ ಪಡೆಯಲು ಮನಾಲಿಗಿಂತ ಬೇರೆ ಸ್ಥಳವಿಲ್ಲ. ಸೋಲಾಂಗ್ ವ್ಯಾಲಿ ಮತ್ತು ರೋಹ್ಟಾಂಗ್ ಪಾಸ್‌ನಲ್ಲಿ ಜೂನ್ ತಿಂಗಳವರೆಗೂ ಹಿಮವನ್ನು ಕಾಣಬಹುದು.
ಕೊಡೈಕೆನಾಲ್
'ಗಿರಿಧಾಮಗಳ ರಾಜಕುಮಾರಿ' ಎಂದು ಕರೆಯಲ್ಪಡುವ ಕೊಡೈಕೆನಾಲ್ ತನ್ನ ರಮಣೀಯ ಸರೋವರಗಳು ಮತ್ತು ಪೈನ್ ಕಾಡುಗಳಿಗೆ ಹೆಸರುವಾಸಿ. ಇಲ್ಲಿನ ನಕ್ಷತ್ರಾಕಾರದ ಕೊಡೈ ಸರೋವರದಲ್ಲಿ ಬೋಟಿಂಗ್ ಮಾಡುವುದು ಒಂದು ವಿಶೇಷ ಅನುಭವ.