ನೇಹಾ-ಶುಭ್ರ ಹಾಟ್​ ಫೋಸ್​

ರಮೇಶ್​ ಕುಮಾರ್​​ ಬಿ ಎಡಮೋಳೆ

ನೇಹಾ-ಶುಭ್ರ ಹಾಟ್​ ಫೋಸ್​

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ನಟಿ ನೇಹಾ ಶೆಟ್ಟಿ, ಇದೀಗ ಮತ್ತೊಬ್ಬ ನಟಿ ಹಾಗೂ ಸ್ನೇಹಿತೆ ಶುಭ್ರ ಅಯ್ಯಪ್ಪ ಜತೆ ಆ್ಯಕ್ಟೀವ್​ವೇರ್ ಧರಿಸಿ, ತುಂಬಾ ಬೋಲ್ಡ್​ ಆಗಿ ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ.

ಆ್ಯಕ್ಟಿವ್‌ವೇರ್ ಬ್ರ್ಯಾಂಡ್​

ಶುಭ್ರ ಅಯ್ಯಪ್ಪ ಶುರು ಮಾಡಿರುವ ಆ್ಯಕ್ಟಿವ್‌ವೇರ್ ಬ್ರ್ಯಾಂಡ್​ ಪ್ರಮೋಷನ್​ಗಾಗಿ ನೇಹಾ ಬೋಲ್ಡ್​ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಜಾಲತಾಣದಲ್ಲಿ​​​ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ.

ನನ್ನಷ್ಟು ಉತ್ಸುಕಳಾದ ವ್ಯಕ್ತಿ ಇಲ್ಲ

ನನ್ನ ಆತ್ಮೀಯ ಗೆಳತಿ ಇದೀಗ ತಾನೇ ತನ್ನದೇ ಆದ ಆ್ಯಕ್ಟಿವ್‌ವೇರ್ ಬ್ರ್ಯಾಂಡ್ ಅನ್ನು ಪ್ರಾರಂಭಿಸಿದ್ದಾಳೆ. ಇದನ್ನು ನೋಡಿದಾಗ ಈಗ ನನ್ನಷ್ಟು ಉತ್ಸುಕಳಾದ ವ್ಯಕ್ತಿ ಇಲ್ಲ ಎಂದು ನಾನು ಭಾವಿಸುತ್ತೇನೆ ಎಂದು ನೇಹಾ ಶೆಟ್ಟಿ ಬರೆದುಕೊಂಡಿದ್ದಾರೆ.

ಫಿಟ್‌ನೆಸ್ ಪ್ರಯಾಣದಿಂದ ಸೃಷ್ಟಿ

ಈ ಒಂದು ಬ್ರ್ಯಾಂಡ್ ಅವಳ ಫಿಟ್‌ನೆಸ್ ಪ್ರಯಾಣದಿಂದ ಹುಟ್ಟಿಕೊಂಡಿದೆ. ಆಕೆಯ ಉತ್ಸಾಹ, ಶಿಸ್ತು, ಪ್ರೀತಿ ಮತ್ತು ಈ ಜಗತ್ತಿಗೆ ಅರ್ಥಪೂರ್ಣವಾದದ್ದನ್ನು ಸೇರಿಸುವ ಆಳವಾದ ಬಯಕೆಯಿಂದ ಇದು ಹುಟ್ಟಿಕೊಂಡಿದೆ ಎಂದಿದ್ದಾರೆ.

ನನ್ನ ಮುದ್ದುಗೊಂಬೆ

ನೀನು ಬೆಳೆಯುವುದನ್ನು ಮತ್ತು ನಾನು ಸೇರಿದಂತೆ ಅನೇಕರಿಗೆ ಸ್ಫೂರ್ತಿ ನೀಡುವುದನ್ನು ನೋಡಲು ತುಂಬಾ ಹೆಮ್ಮೆಯಾಗುತ್ತದೆ. ನೀನು ಯಾವಾಗಲೂ ನನ್ನ ಮುದ್ದುಗೊಂಬೆಯಾಗಿರುತ್ತೀಯಾ ಎಂದು ನೇಹಾ ಹೇಳಿದ್ದಾರೆ.

ನೇಹಾ ಶುಭ ಹಾರೈಕೆ

ಇದು ಕೇವಲ ಆರಂಭವಷ್ಟೇ. ನಾನು ಯಾವಾಗಲೂ ನಿನ್ನನ್ನು ಹುರಿದುಂಬಿಸುತ್ತೇನೆ ಎನ್ನುವ ಮೂಲಕ ಶುಭ್ರ ಅಯ್ಯಪ್ಪರ ಹೊಸ ಪ್ರಯಾಣಕ್ಕೆ ನೇಹಾ ಶೆಟ್ಟಿ ಶುಭ ಹಾರೈಸಿದ್ದಾರೆ.