ಪ್ರೇಮುಲು ನಂತರ ಹಿಟ್ ಸಿನಿಮಾಗಳನ್ನು ಕೊಟ್ಟು ವೈರಲ್ ಆಗ್ತಿರುವ ಮಮಿತಾ ಬೈಜು ಹಲವರ ಮನ ಗೆದ್ದಿದ್ದಾರೆ. ಸಹಜ ನಟನೆ, ಸಿಂಪಲ್ ಮೇಕಪ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇತ್ತೀಚೆಗೆ ಅವರ ಹೊಸ ಫೋಟೋ ಶೂಟ್ ಪೋಸ್ಟ್ ಮಾಡಿದ್ದು ಸಾಕಷ್ಟು ವ್ಯೂವ್ಸ್ ಪಡೆದುಕೊಂಡಿದೆ.
ವಿಶ್ವನಾಥ್ ಆಂಡ್ ಸನ್ಸ್ಗೆ ಮೆಚ್ಚುಗೆ
ಕಾಲಿವುಡ್ ನಟ ಸೂರ್ಯ ಅವರ ನಟನೆಯ ವಿಶ್ವನಾಥ್ ಅಂಡ್ ಸನ್ಸ್ ಸಿನಿಮಾ ಬೆಳ್ಳಿ ತೆರೆಮೇಲೆ ಮತ್ತು ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಭಾರಿ ಮೆಚ್ಚುಗೆ ಪಡೆದಿದೆ. ಮಮಿತಾರ ಮ್ಯಾಡಿ ಪಾತ್ರವು ಟೀನೇಜ್ ಗರ್ಲ್ ವರ್ತನೆಯು ಹಲವರ ಮನ ಕದಿಯುವಂತೆ ಮಾಡಿದೆ.
ಬ್ಯಾಕ್ ಟು ಬ್ಯಾಕ್ ಹಿಟ್
ವಿಶ್ವನಾಥ್ ಅಂಡ್ ಸನ್ಸ್, ಜನನನಾಯಗನ್, ಬೆಥ್ಲಹೆಮ್ ಕುಟುಂಬಂ ಯೂನಿಟ್, ಕರ, ಡ್ಯೂಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಎಲ್ಲ ಸಿನಿಮಾವು ಅವರಿಗೆ ಯಶಸ್ಸು ತಂದುಕೊಟ್ಟಿದೆ. ಅಲ್ಲದೇ ಸದ್ಯ ಅವರು ಬಹುಬೇಡಿಕೆಯ ನಟಿಯಾಗಿ ಮಾರ್ಪಟ್ಟಿದ್ದಾರೆ.
ಮಮಿತಾ ಕ್ರೇಜ್
ಸಿನಿಮಾ ಕ್ರಿಟಿಕ್ ಸಂತೋಷ್ ವರ್ಕಿ ನಾನು ಮಮಿತಾ ಅವರನ್ನೇ ಮದುವೆಯಾಗುತ್ತೇನೆ ಎಂದು ಹೇಳಿ ವ್ಯಾಪಕ ವೈರಲ್ ಆಗಿದ್ದರು. ಇನ್ನೂ ಐಮ್ಡಿಬಿ ಟ್ರೆಂಡಿಂಗ್ ಇಂಡಿಯನ್ ಪೀಪಲ್ ಪಟ್ಟಿಯಲ್ಲಿ ಮಮಿತಾ ಅವರು ಒಂದನೇ ಪಟ್ಟಿಗೆ ಏರಿದ್ದಾರೆ.
ಮಮಿತಾ ನಟನೆಯ ಸಿನಿಮಾವಿದು
ಸರ್ವೋಪರಿ ಪಾಲಕ್ಕರನ್ ಮೂಲಕ ಬೆಳ್ಳಿತೆರೆಗೆ ಮಮಿತಾ ಕಾಲಿಟ್ಟರು ನಂತರ ಖೋಖೋ, ಸೂಪರ್ ಶರಣ್ಯದಲ್ಲಿ ನಟಿಸಿದರು. ಪ್ರೇಮುಲು ಅವರಿಗೆ ಹಿಟ್ ಕೊಟ್ಟ ಸಿನಿಮಾ ನಂತರ, ಜನನನಾಯಗನ್, ಕರ, ಬೆಥ್ಲಹೆಮ್ ಕುಟುಂಬಂ, ವಿಶ್ವನಾಥ್ ಅಂಡ್ ಸನ್ಸ್ನಲ್ಲಿ ಮಿಂಚಿದರು.
ಮುಂದಿನ ಸಿನಿಮಾ
ಹೆಲೋ ಡಿಯರ್, ಇರಂಡು ವಾನಮ್, ಪಿಆರ್ಎಸ್01, ಪ್ರೇಮುಲು 2 ಮುಂಬರುವ ಸಿನಿಮಾಗಳು ಎನ್ನಲಾಗಿದೆ.