ಐಸಿಸಿ ಟ್ರೋಫಿ ಗೆದ್ದಾಗ ಬಿಸಿಸಿಐ ನೀಡಿದ ಬಹುಮಾನವೆಷ್ಟು? ಇಲ್ಲಿದೆ ಟಾಪ್ 5 ಪಟ್ಟಿ!

ಮಣಿಕಂಠ ಪಾ ಹಿರೇಮಠ

ಐಸಿಸಿ ಟ್ರೋಫಿ ಗೆದ್ದಾಗ ಬಿಸಿಸಿಐ ನೀಡಿದ ಬಹುಮಾನವೆಷ್ಟು? ಇಲ್ಲಿದೆ ಟಾಪ್ 5 ಪಟ್ಟಿ!

ಭಾರತೀಯ ಕ್ರಿಕೆಟ್ ತಂಡದ ಐತಿಹಾಸಿಕ ಐಸಿಸಿ ಟ್ರೋಪಿ ಗೆಲುವುಗಳನ್ನು ಸಂಭ್ರಮಿಸಲು ಬಿಸಿಸಿಐ ಕೋಟ್ಯಂತರ ರೂಪಾಯಿಗಳ ಬೃಹತ್ ಬಹುಮಾನದ ಮೊತ್ತವನ್ನು ಘೋಷಿಸುತ್ತಾ ಬಂದಿದೆ. ಕಳೆದ ಐದು ಪ್ರಮುಖ ಐಸಿಸಿ ಟೈಟಲ್ ಗೆಲುವಿನ ಸಂದರ್ಭದಲ್ಲಿ ಆಟಗಾರರಿಗೆ ನೀಡಲಾದ ಹಣದ ವಿವರಗಳು ಇಲ್ಲಿವೆ.

2011 ಏಕದಿನ ವಿಶ್ವಕಪ್ 39 ಕೋಟಿ

ಮಹೇಂದ್ರ ಸಿಂಗ್​ ಧೋನಿ ಪಡೆಯ ಆಟಗಾರರಿಗೆ ಆರಂಭದಲ್ಲಿ 1 ಕೋಟಿ ಘೋಷಿಸಿ ನಂತರ ತಲಾ 2 ಕೋಟಿಗೆ ಏರಿಸಲಾಗಿತ್ತು.

2013 ಚಾಂಪಿಯನ್ಸ್ ಟ್ರೋಫಿ: 15 ಕೋಟಿ+

ಪ್ರತಿ ಆಟಗಾರನಿಗೆ 1 ಕೋಟಿ ಹಾಗೂ ಸಪೋರ್ಟಿಂಗ್ ಸ್ಟಾಫ್‌ಗೆ 30 ಲಕ್ಷ ನೀಡಲಾಗಿತ್ತು.

2024 T20 ವಿಶ್ವಕಪ್

11 ವರ್ಷಗಳ ಐಸಿಸಿ ಟ್ರೋಫಿ ಬರ ನೀಗಿಸಿದ ರೋಹಿತ್ ಪಡೆಗೆ ನೀಡಿದ ಮೊತ್ತ 125 ಕೋಟಿ.

2025 ಚಾಂಪಿಯನ್ಸ್ ಟ್ರೋಫಿ : 58 ಕೋಟಿ

ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಚಾಂಪಿಯನ್ ಆದ ಭಾರತಕ್ಕೆ ಸಿಕ್ಕ ಬಹುಮಾನ 58 ಕೋಟಿ.

2026 T20 ವಿಶ್ವಕಪ್ : 131 ಕೋಟಿ

ಇತ್ತೀಚೆಗೆ ಅಹಮದಾಬಾದ್‌ನಲ್ಲಿ ಟಿ20 ವಿಶ್ವಕಪ್​ ಗೆದ್ದ ಸೂರ್ಯಕುಮಾರ್ ತಂಡಕ್ಕೆ ಬಿಸಿಸಿಐ ನೀಡಿದ ಅತಿ ದೊಡ್ಡ ಮೊತ್ತ 131 ಕೋಟಿ.