ಬಣ್ಣದ ಹಬ್ಬದಲ್ಲಿ ಮಿಂದೆದ್ದ ಐವರು ರಾಜಕೀಯ ನಾಯಕರು; ಯಾರ ಆಚರಣೆ ಹೇಗಿತ್ತು ನೀವೆ ನೋಡಿ!

ಮಣಿಕಂಠ ಪಾ ಹಿರೇಮಠ

ಬಣ್ಣದ ಹಬ್ಬದಲ್ಲಿ ಮಿಂದೆದ್ದ ಐವರು ರಾಜಕೀಯ ನಾಯಕರು; ಯಾರ ಆಚರಣೆ ಹೇಗಿತ್ತು ನೀವೆ ನೋಡಿ!

ದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾರ್ಯಕರ್ತರೊಂದಿಗೆ ಹೋಳಿ ಆಡಿದರು. ಎಲ್ಲರಿಗೂ ಗುಲಾಲ್ ಹಚ್ಚಿ ಶುಭಕೋರಿದ ಅವರು, ಈ ಹಬ್ಬವು ದ್ವೇಷವನ್ನು ಅಳಿಸಿ ಪ್ರೀತಿ ಮತ್ತು ಏಕತೆಯನ್ನು ಹರಡಲಿ ಎಂದು ಸಂದೇಶ ನೀಡಿದರು.

ರಾಜನಾಥ್ ಸಿಂಗ್

ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಮ್ಮ ನಿವಾಸದಲ್ಲಿ ಹೋಳಿ ಆಚರಿಸಿದರು. ಜನರೊಂದಿಗೆ ಬೆರೆತು ಡೋಲು ಬಾರಿಸುವ ಮೂಲಕ ಸಂಭ್ರಮಿಸಿದ ಅವರು, ವಿಶ್ವದಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸಲಿ ಎಂದು ಹಾರೈಸಿ ಬಣ್ಣಗಳ ಹಬ್ಬಕ್ಕೆ ಮೆರುಗು ನೀಡಿದರು.

ಜೆ.ಪಿ. ನಡ್ಡಾ

ಕೇಂದ್ರ ಸಚಿವ ಜೆ.ಪಿ. ನಡ್ಡಾ ತಮ್ಮ ನಿವಾಸದಲ್ಲಿ ಬೆಂಬಲಿಗರೊಂದಿಗೆ ಹೋಳಿ ಸಂಭ್ರಮಿಸಿದರು. ವಿಕಸಿತ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ ಬಣ್ಣ ಹಚ್ಚಿದ ಅವರು, ಸಮಾಜದಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಿ ಹಬ್ಬ ಆಚರಿಸಿದರು.

ಹಿಮಂತ್ ಬಿಸ್ವಾ ಶರ್ಮಾ

ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಪವಿತ್ರ ಬಟದ್ರವಾ ಥಾನ್‌ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಹೋಳಿ ಆರಂಭಿಸಿದರು. ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಅವರು, ಅಸ್ಸಾಂ ಜನರ ಕಲ್ಯಾಣಕ್ಕಾಗಿ ಮತ್ತು ಸೌಹಾರ್ದಯುತ ಆಚರಣೆಗಾಗಿ ಕರೆ ನೀಡಿದರು.

ಸಚಿನ್ ಪೈಲಟ್

ಯುವ ನಾಯಕ ಸಚಿನ್ ಪೈಲಟ್ ದೆಹಲಿಯ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರ ಜೊತೆಗೂಡಿ ಹೋಳಿ ಆಡಿದರು. ಪರಸ್ಪರ ಬಣ್ಣ ಹಚ್ಚುತ್ತಾ ಸಂಭ್ರಮಿಸಿದ ಅವರು, ಹೋಳಿ ಹಬ್ಬವು ಸೋದರತ್ವ ಮತ್ತು ಪ್ರೀತಿಯ ಸಂಕೇತವಾಗಿದೆ ಎಂದು ಅಭಿಮಾನಿಗಳೊಂದಿಗೆ ಸಂತೋಷ ಹಂಚಿಕೊಂಡರು.