ಪದೇ ಪದೇ ತಲೆ ಸುತ್ತುತ್ತಿದೆಯೇ? ಈ ಆಹಾರ ಸೇವಿಸಿ!

ಭಾನುಪ್ರಿಯ ಡಿ.ಕೆ

ಪದೇ ಪದೇ ತಲೆ ಸುತ್ತುತ್ತಿದೆಯೇ? ಈ ಆಹಾರ ಸೇವಿಸಿ!

ದೈನಂದಿನ ಜೀವನದಲ್ಲಿ ನಿರ್ಜಲೀಕರಣ, ಪಿತ್ತ ಅಥವಾ ನಿಶ್ಯಕ್ತಿಯಿಂದ ಹಠಾತ್ತನೆ ಕಾಣಿಸಿಕೊಳ್ಳುವ ತಲೆ ತಿರುಗುವಿಕೆ ಸಮಸ್ಯೆಯನ್ನು ಮಾತ್ರೆಗಳಿಲ್ಲದೆ ನೈಸರ್ಗಿಕವಾಗಿ ಶಮನಗೊಳಿಸಲು, ನಮ್ಮ ಕಿಚನ್‌ನಲ್ಲಿಯೇ ಲಭ್ಯವಿರುವ ಈ 6 ಪ್ರಮುಖ ಆಹಾರಗಳನ್ನು ದಿನನಿತ್ಯದ ಸೇವನೆಗೆ ಬಳಸಿ.

ಶುಂಠಿ

ಶುಂಠಿಯು ಮೆದುಳಿಗೆ ರಕ್ತಸಂಚಾರವನ್ನು ಹೆಚ್ಚಿಸುತ್ತದೆ ಮತ್ತು ತಲೆಸುತ್ತಿನೊಂದಿಗೆ ಬರುವ ವಾಕರಿಕೆ ಹಾಗೂ ವಾಂತಿಯ ಭಾವನೆಯನ್ನು ಶಮನಗೊಳಿಸುತ್ತದೆ. ದಿನಕ್ಕೆ 1-2 ಬಾರಿ ಶುಂಠಿ ಚಹಾ ಅಥವಾ ಶುಂಠಿ ನೀರು ಕುಡಿಯುವುದು ಒಳ್ಳೆಯದು.

ನೀರು ಮತ್ತು ನೀರಿನಂಶವಿರುವ ಹಣ್ಣುಗಳು

ದೇಹದಲ್ಲಿ ನಿರ್ಜಲೀಕರಣ ಉಂಟಾಗುವುದು ತಲೆಸುತ್ತಿಗೆ ಪ್ರಮುಖ ಕಾರಣವಾಗಿದೆ. ಕನಿಷ್ಠ 8-10 ಲೋಟ ನೀರು ಕುಡಿಯಿರಿ. ಇದರ ಜೊತೆಗೆ ಕಲ್ಲಂಗಡಿ, ಕಿತ್ತಳೆ, ಸೌತೆಕಾಯಿಯಂತಹ ನೀರಿನಂಶ ಹೆಚ್ಚಿರುವ ಹಣ್ಣುಗಳನ್ನು ಸೇವಿಸಿ.

ಧನಿಯಾ/ಕೊತ್ತಂಬರಿ ಬೀಜ

ಒಂದು ಚಮಚ ಧನಿಯಾ ಬೀಜಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು, ಬೆಳಿಗ್ಗೆ ಆ ನೀರನ್ನು ಸೋಸಿ ಕುಡಿಯುವುದರಿಂದ ಪಿತ್ತ ಶಮನವಾಗಿ ತಲೆ ತಿರುಗುವುದು ಕಡಿಮೆಯಾಗುತ್ತದೆ

ನೆಲ್ಲಿಕಾಯಿ

ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಮತ್ತು ಆಂಟಿ-ಆಕ್ಸಿಡೆಂಟ್‌ಗಳು ಹೇರಳವಾಗಿವೆ. ಇದು ರಕ್ತಹೀನತೆ ಮತ್ತು ದೇಹದ ದೌರ್ಬಲ್ಯದಿಂದ ಬರುವ ತಲೆಸುತ್ತನ್ನು ತಡೆಯಲು ಸಹಾಯ ಮಾಡುತ್ತದೆ.

ಓಟ್ಸ್

ರಕ್ತದಲ್ಲಿ ಗ್ಲೂಕೋಸ್ ಮಟ್ಟ (Blood Sugar) ಸಡನ್ ಆಗಿ ಕಡಿಮೆಯಾದಾಗ ತಲೆ ತಿರುಗುತ್ತದೆ. ಧಾನ್ಯಗಳು, ಬ್ರೌನ್ ರೈಸ್ ಮತ್ತು ಓಟ್ಸ್ ಸೇವಿಸುವುದರಿಂದ ದೇಹಕ್ಕೆ ನಿರಂತರ ಶಕ್ತಿ ಸಿಗುತ್ತದೆ ಮತ್ತು ಸಕ್ಕರೆ ಮಟ್ಟ ಸ್ಥಿರವಾಗಿರುತ್ತದೆ.

ಬಾದಾಮಿ ಮತ್ತು ವಾಲ್‌ನಟ್ಸ್

ಬಾದಾಮಿಯಲ್ಲಿ ವಿಟಮಿನ್ ಇ, ಬಿ-ವಿಟಮಿನ್‌ಗಳು ಹಾಗೂ ಅಗತ್ಯ ಕೊಬ್ಬಿನಾಮ್ಲಗಳಿವೆ. ಇವು ನರಮಂಡಲದ ಆರೋಗ್ಯವನ್ನು ಸುಧಾರಿಸಿ, ವರ್ಟಿಗೋ ಹಾಗೂ ತಲೆಸುತ್ತಿನ ಸಮಸ್ಯೆಯನ್ನು ಶಮನಗೊಳಿಸಲು ನೆರವಾಗುತ್ತವೆ.