ಒಂದೇ ಲೋಟ ಅಜವಾನದ ನೀರು ಇಷ್ಟೆಲ್ಲಾ ಮ್ಯಾಜಿಕ್ ಮಾಡುತ್ತಾ..?

ಮಣಿಕಂಠ ಪಾ ಹಿರೇಮಠ

ಒಂದೇ ಲೋಟ ಅಜವಾನದ ನೀರು ಇಷ್ಟೆಲ್ಲಾ ಮ್ಯಾಜಿಕ್ ಮಾಡುತ್ತಾ..?

ಅಜವಾನ ಪ್ರಾಚೀನ ಕಾಲದಿಂದಲೂ ಭಾರತೀಯ ಮನೆಮದ್ದುಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವ ಅತ್ಯುತ್ತಮ ನೈಸರ್ಗಿಕ ಪದಾರ್ಥ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಜವಾನದ ನೀರನ್ನು ಸೇವಿಸುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು ಇಲ್ಲವೆ.

ದೇಹದ ನೈಸರ್ಗಿಕ ಡಿಟಾಕ್ಸ್

ಇದು ನೈಸರ್ಗಿಕ ಡಿಟಾಕ್ಸ್ ಪಾನೀಯವಾಗಿ ಕೆಲಸ ಮಾಡುತ್ತದೆ. ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಮತ್ತು ಕಿಡ್ನಿ ಹಾಗೂ ಲಿವರ್​ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ನೆರವಾಗುತ್ತದೆ.

ಜೀರ್ಣಕ್ರಿಯೆ ವೃದ್ಧಿ ಹಾಗೂ ಗ್ಯಾಸ್ಟ್ರಿಕ್ ಶಮನ

ಅಜವಾನದಲ್ಲಿರುವ ಥೈಮೋಲ್ ಎಂಬ ಪೋಷಕಾಂಶವು ಜಠರದಲ್ಲಿ ಜೀರ್ಣರಸಗಳನ್ನು ಹೆಚ್ಚು ಉತ್ಪತ್ತಿ ಮಾಡುತ್ತದೆ. ದಿನವೂ ಖಾಲಿ ಹೊಟ್ಟೆಯಲ್ಲಿ ಅಜವಾನ ನೀರು ಕುಡಿಯುವುದರಿಂದ ಅಜೀರ್ಣ, ಉಬ್ಬರ, ಗ್ಯಾಸ್ಟ್ರಿಕ್ ಹಾಗೂ ಆಸಿಡಿಟಿ ತಕ್ಷಣವೇ ಶಮನಗೊಳ್ಳುತ್ತದೆ.

ವೇಗವಾಗಿ ತೂಕ ಇಳಿಕೆ

ದೇಹದ ಚಯಾಪಚಯ ಕ್ರಿಯೆಯನ್ನು ಉತ್ತೇಜಿಸಲು ಈ ನೀರು ರಾಮಬಾಣ. ಬೆಳಿಗ್ಗೆ ಇದನ್ನು ಸೇವಿಸುವುದರಿಂದ ದೇಹದಲ್ಲಿ ಅನಗತ್ಯವಾಗಿ ಕೊಬ್ಬು ಶೇಖರಣೆಯಾಗುವುದು ತಪ್ಪುತ್ತದೆ ಹಾಗೂ ತೂಕ ಇಳಿಕೆಗೆ ಸಹಾಯ ಮಾಡುತ್ತದೆ.

ಮುಟ್ಟಿನ ನೋವು ನಿವಾರಣೆ

ಮಹಿಳೆಯರಲ್ಲಿ ಋತುಚಕ್ರದ ಸಮಯದಲ್ಲಿ ಉಂಟಾಗುವ ತೀವ್ರವಾದ ಹೊಟ್ಟೆನೋವು ಮತ್ತು ನರಗಳ ಸೆಳೆತವನ್ನು ಕಡಿಮೆ ಮಾಡಲು ಅಜವಾನದ ನೀರು ಅದ್ಭುತ ಮನೆಮದ್ದಾಗಿದೆ. ಇದು ಗರ್ಭಕೋಶದ ಸ್ನಾಯುಗಳನ್ನು ಸಡಿಲಗೊಳಿಸಿ ನೋವಿನಿಂದ ಮುಕ್ತಿ ನೀಡುತ್ತದೆ.

ಶೀತ-ಕೆಮ್ಮಿನಿಂದ ಉಪಶಮನ

ಅಜವಾನದಲ್ಲಿ ಉರಿಯೂತ ವಿರೋಧಿ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಕಫ, ಶೀತ, ಕೆಮ್ಮು ಮತ್ತು ಎದೆ ಗೂಡಿನಲ್ಲಿ ಶೇಖರವಾಗುವ ಲೋಳೆಯನ್ನು ಕರಗಿಸಿ ಶ್ವಾಸಕೋಶದ ಆರೋಗ್ಯವನ್ನು ಕಾಯುತ್ತದೆ.