ಆವಂತಿಕಾ ಜಾಲಿ ಮೂಡ್​

ರಮೇಶ್​ ಕುಮಾರ್​​ ಬಿ ಎಡಮೋಳೆ

ಆವಂತಿಕಾ ಜಾಲಿ ಮೂಡ್​

ಒಂದು ಕಾಲದಲ್ಲಿ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಬಾಲ ನಟಿಯಾಗಿ ಎಲ್ಲರ ಮನಸ್ಸು ಗೆದ್ದಿದ್ದ ಆವಂತಿಕಾ ವಂದನಪು, ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಅವರ ಹುಟ್ಟುಹಬ್ಬದ ಆಚರಣೆಯ ಫೋಟೋಗಳು ಸಖತ್​ ವೈರಲ್​ ಆಗುತ್ತಿವೆ.

ಈ ಸಿನಿಮಾಗಳನ್ನು ಮರೆಯುವಂತಿಲ್ಲ

ಬಾಲನಟಿಯಾಗಿದ್ದ ಸಮಯಕ್ಕೂ ಈಗ ಅವರು ಬದಲಾಗಿರುವ ರೀತಿಯನ್ನು ನೋಡಿ ಸಿನಿರಸಿಕರು ದಂಗಾಗಿದ್ದಾರೆ. ಬ್ರಹ್ಮೋತ್ಸವಂ, ಕೃಷ್ಣಗಾಡಿ ವೀರ ಪ್ರೇಮಕತಾ ಮತ್ತು ಪ್ರೇಮಂ ಸಿನಿಮಾಗಳಲ್ಲಿ ಆವಂತಿಕಾ ನಟನೆ ಮರೆಯುವಂತಿಲ್ಲ.

ನಟನೆಯೇ ವೃತ್ತಿ

ಬಾಲನಟಿಯಾಗಿ ಒಳ್ಳೆಯ ಹೆಸರು ಮಾಡಿದ್ದರು. ಸಿನಿಮಾದಲ್ಲಿ ಬಿಜಿಯಾಗಿದ್ದಾಗಲೇ ಆವಂತಿಕಾ ಕುಟಂಬ ಅಮೆರಿಕಕ್ಕೆ ಹೋಗಿ ನೆಲೆಸಿತು. ಆದರೂ ತಮ್ಮ ನಟನೆ ನಿಲ್ಲಿಸಿದ ಆವಂತಿಕಾ, ಅದನ್ನೇ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡರು.

ಹಾಲಿವುಡ್​ನಲ್ಲಿ ಬಿಜಿ

ಆರಂಭದಲ್ಲಿ ಅನೇಕ ಹಾಲಿವುಡ್​ ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದರು. ಇದರ ನಡುವೆ ಸ್ಪಿನ್​ ಹೆಸರಿನ ಹಾಲಿವುಡ್​ ಸಿನಿಮಾದಲ್ಲಿ ಲೀಡ್​ ರೋಲ್​ನಲ್ಲಿ ಆವಂತಿಕಾ ನಟಿಸಿದರು. ಮೀನ್​ ಗರ್ಲ್​ ಸಿನಿಮಾದಲ್ಲಿ ಬೋಲ್ಡ್​ ಆಗಿ ನಟಿಸಿದ್ದಾರೆ.

ಬರ್ತಡೇ ಪಾರ್ಟಿ

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್​ ಆಗಿರುವ ಆವಂತಿಕಾ, ಇದೀಗ ತಮ್ಮ ಸ್ನೇಹಿತರಿಗೆ ಬರ್ತಡೇ ಪಾರ್ಟಿ ನೀಡಿರುವ ಫೋಟೋಗಳನ್ನು ಹಂಚಿಕೊಂಡಿದ್ದು, ಸಖತ್​ ವೈರಲ್​ ಆಗುತ್ತಿವೆ.

ತೆಲುಗು ಮಂದಿಗೆ ಖುಷಿ

ತೆಲುಗು ಹುಡುಗಿ ಹಾಲಿವುಡ್​ನಲ್ಲಿ ಪ್ರಮುಖ ನಾಯಕಿಯಾಗಿರುವುದು ತೆಲುಗು ಮಂದಿಗೆ ತುಂಬಾ ಖುಷಿಯಾಗಿದೆ. ಬಾಲ್ಯದ ಫೋಟೋಗಳು ಮತ್ತು ಈಗಿನ ಫೋಟೋಗಳನ್ನು ನೋಡಿ ಹೇಗೆ ಬದಲಾಗಿದ್ದಾರೆ ನೋಡಿ ಎಂದು ಕಮೆಂಟ್ ಮಾಡುತ್ತಿದ್ದಾರೆ.