ದೇವಸ್ಥಾನಕ್ಕೆ ಹಣ ನೀಡುವ ಬದಲು ಈ ಪವಿತ್ರ ವಸ್ತು ನೀಡಿ

ಮಮತಾ

ದೇವಸ್ಥಾನಕ್ಕೆ ಹಣ ನೀಡುವ ಬದಲು ಈ ಪವಿತ್ರ ವಸ್ತು ನೀಡಿ

ಸನಾತನ ಧರ್ಮದ ಪ್ರಕಾರ ಈಗಲೂ ಸಹ ದೇವಾಲಯಕ್ಕೆ ಭೇಟಿ ನೀಡಿದಾಗ ಹರಕೆ ಹೊತ್ತವರು ದೇವರಿಗೆ ದೇಣಿಗೆ ಅಥವಾ ಧಾನ್ಯ ಹೀಗೆ ಕೆಲವೊಂದು ಪದಾರ್ಥವನ್ನು ದಾನ ಮಾಡಿ ಪುಣ್ಯ ಕಟ್ಟಿಕೊಳ್ಳಲು ಬಯಸುತ್ತಾರೆ, ಇದು ಮನಸ್ಸನ್ನು ಶುದ್ಧೀಕರಿಸುವುದಕ್ಕದೆ ಜೀವನದಲ್ಲಿ ಸಂತೋಷ, ಸಂಪತ್ತು ಸಮೃದ್ಧಿ ಹೆಚ್ಚಾಗುವಂತೆ ಮಾಡುತ್ತದೆ. ಪ್ರತ್ಯೇಕವಾಗಿ ಯಾವ ವಸ್ತುಗಳನ್ನು ದೇಗುಲಕ್ಕೆ ಕೊಟ್ಟರೆ ಒಳಿತು ಎನ್ನುವುದನ್ನು ಇಂದು ತಿಳಿದುಕೊಳ್ಳೋಣ.

ಎಣ್ಣೆ ಅಥವಾ ತುಪ್ಪ

ದೇವರ ದೀಪಕ್ಕೆ ಎಣ್ಣೆ ಅಥವಾ ತುಪ್ಪ ನೀಡುವುದು ಪುಣ್ಯ. ಎಣ್ಣೆ ಮತ್ತು ತುಪ್ಪ ಜ್ಞಾನ ಹಾಗೂ ಶುದ್ಧತೆ ಹಾಗೂ ಕತ್ತಲೆಯ ಮೇಲೆ ಬೆಳಕಿನ ಸಂಕೇತವನ್ನು ಸೂಚಿಸುತ್ತದೆ. ದೇಗುಲಕ್ಕೆ ಎಳ್ಳೆಣ್ಣೆ, ಶುದ್ಧ ತುಪ್ಪ ನೀಡುವುದು ನಿಮ್ಮ ಜೀವನದಲ್ಲಿ ಆವರಿಸಿಕೊಂಡಿರುವ ನಕರಾತ್ಮಕ ಶಕ್ತಿಯು ದೂರವಾಗುವಂತೆ ಮಾಡುತ್ತದೆ.

ಬಟ್ಟೆ

ದೇವಾಲಯ ಆಯೋಜಿಸುವ ಸೇವಾ ಕಾರ್ಯಕ್ರಮದಲ್ಲಿ ಸ್ವಚ್ಛ ಹಾಗೂ ಇನ್ನೊಬ್ಬರು ಬಳಕೆ ಮಾಡಬಹುದಾಗ ಬಟ್ಟೆ ನೀಡುವುದು ಶುಭ ಎಂದು ಪರಿಗಣಿಸಲಾಗಿದೆ.

ಗೋ ಸೇವೆಗೆ ಸಹಾಯ

ದೇಗುಲಗಳು ಹಸುವನ್ನು ಸಾಕುವ ಮಹತ್ ಕಾರ್ಯವನ್ನು ಮಾಡುತ್ತಾರೆ. ಕಾಮಧೇನು ದೇಹದಲ್ಲಿ ಮುನ್ನೂರು ಕೋಟಿ ದೇವಾನು ದೇವತೆ ಇದ್ದಾರೆ ಎನ್ನುವ ನಂಬಿಕೆ ಹಿಂದೂ ಧರ್ಮದಲ್ಲಿದೆ. ಹೀಗಾಗಿ ಆ ಕಾಮಧೇನುವಿನ ಆಹಾರವಾದ ಹುಲ್ಲು, ಧಾನ್ಯಕ್ಕೆ ದೇಣಿಗೆ ನೀಡುವುದು ಗೋಸೇವೆಗೆ ಸಮ ಎಂದು ಪರಿಗಣಿಸಲಾಗುತ್ತದೆ.

ಧಾನ್ಯ

ದೇವಾಲಯಕ್ಕೆ ಧಾನ್ಯ ನೀಡುವುದು ಒಳಿತು. ಈ ಮೂಲಕ ನೀವು ಕೊಟ್ಟ ಅನ್ನ ಹಸಿದವರಿಗೆ ಒಂದೊತ್ತಿನ ಆಹಾರವಾಗಿ ಪುಣ್ಯಕಟ್ಟಿಕೊಳ್ಳುತ್ತೀರಿ. ಅಕ್ಕಿ, ದ್ವಿದಳ ಧಾನ್ಯ ನೀಡುವುದು ಪುಣ್ಯ.