ಮಾಡರ್ನ್ ಲುಕ್‌ನಲ್ಲಿ ಮಿಂಚಿದ ನಟಿ ಅದ್ವಿತಿ ಶೆಟ್ಟಿ! Adhvithi Shetty

ವಿಜಯವಾಣಿ ಸುದ್ದಿ ಜಾಲ

ಭರವಸೆ ನಟಿ

ಕನ್ನಡ ಚಿತ್ರರಂಗದ ಭರವಸೆಯ ನಟಿ ಅದ್ವಿತಿ ಶೆಟ್ಟಿ ತಮ್ಮ ಸೌಂದರ್ಯ ಮತ್ತು ವಿಭಿನ್ನ ಫೋಟೋಶೂಟ್‌ಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಅವಳಿ ಸಹೋದರಿ ಅಶ್ವಿತಿ ಶೆಟ್ಟಿ ಜತೆಗೂಡಿ ಮನರಂಜನಾ ಲೋಕದಲ್ಲಿ ಗುರುತಿಸಿಕೊಂಡಿರುವ ಇವರು, ಕರಾವಳಿಯ ಪ್ರತಿಭೆಯಾಗಿ ಸ್ಯಾಂಡಲ್‌ವುಡ್‌ನಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ.

ಕಪ್ಪು ಉಡುಗೆಯಲ್ಲಿ ಕಂಗೊಳಿಸಿದ ಅದ್ವಿತಿ

ಅದ್ವಿತಿ ಶೆಟ್ಟಿ ಹಂಚಿಕೊಂಡಿರುವ ಫೋಟೋದಲ್ಲಿ ಕಪ್ಪು ಬಣ್ಣದ ಮಾಡರ್ನ್ ಲುಕ್‌ನಲ್ಲಿ ಮಿಂಚುತ್ತಿದ್ದಾರೆ. ಸ್ಟ್ರಾಪ್‌ಲೆಸ್ ನೆಕ್‍ಲೈನ್ ಹೊಂದಿರುವ ಸ್ಟೈಲಿಶ್ ಕಪ್ಪು ಬಣ್ಣದ ಕ್ರಾಪ್ ಟಾಪ್ ಧರಿಸಿದ್ದು, ಕಪ್ಪು ಬಣ್ಣದ ಲೆದರ್ ಮಿನಿ ಸ್ಕರ್ಟ್ ಅನ್ನು ಮ್ಯಾಚ್ ಮಾಡಿದ್ದಾರೆ.

ಕರಾವಳಿ ಬೆಡಗಿ

ಅದ್ವಿತಿ ಶೆಟ್ಟಿ ಅವರು ಕರ್ನಾಟಕದ ಕರಾವಳಿ ಭಾಗದ ಮಂಗಳೂರಿನವರಾಗಿದ್ದು, ಸಿನಿಮಾರಂಗದಲ್ಲಿ ತಮ್ಮದೇಯಾದ ಗುರುತು ಮೂಡಿಸಿದ್ದು, ಒಂದೊಳ್ಳೆ ಯಶಸ್ಸಿಗಾಗಿ ಕಾಯುತ್ತಿದ್ದಾರೆ.

ಸಿನಿಮಾಗಳು

ಅದ್ವಿತಿ ಅವರು ಧೀರ ಸಾಮ್ರಾಟ್​, ಐರಾವನ್​, ಫ್ಯಾನ್​ ಹಾಗೂ ಗಿರ್​ಗಿಟ್ಲೆ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಯಶ್​ ಅಭಿನಯದ ಮಿಸ್ಟರ್​ ಅಂಡ್​ ಮಿಸಸ್​ ರಾಮಾಚಾರಿ ಸಿನಿಮಾ ಅದ್ವಿತಿ ತಮ್ಮ ಸಹೋದರಿ ಜತೆ ತೆರೆಹಂಚಿಕೊಂಡಿದ್ದರು.

ಯೂಟ್ಯೂಬ್ ಮತ್ತು ವ್ಲಾಗ್ಸ್

ನಟನೆಯ ಜತೆಗೆ ತಮ್ಮ ದಿನಚರಿ, ಪ್ರಯಾಣ ಮತ್ತು ಫ್ಯಾಷನ್ ಕುರಿತು ವ್ಲಾಗ್‌ಗಳನ್ನು ಮಾಡುವ ಮೂಲಕ ಯೂಟ್ಯೂಬ್‌ನಲ್ಲೂ ಅದ್ವಿತಿ ಸಕ್ರಿಯರಾಗಿದ್ದಾರೆ.

ಮಾಡೆಲಿಂಗ್ ಮತ್ತು ಫ್ಯಾಷನ್

ಸಿನಿರಂಗಕ್ಕೆ ಬರುವ ಮುನ್ನ ಪ್ರಮುಖ ಬ್ರ್ಯಾಂಡ್‌ಗಳಿಗೆ ಮಾಡೆಲಿಂಗ್ ಮಾಡಿರುವ ಅನುಭವ ಹೊಂದಿದ್ದು, ಫ್ಯಾಷನ್ ಲೋಕದಲ್ಲಿ ಚಿರಪರಿಚಿತ ಮುಖವಾಗಿದ್ದಾರೆ.

ಸಾಮಾಜಿಕ ಜಾಲತಾಣದ ಸೆನ್ಮೇಷನ್

ಇನ್‌ಸ್ಟಾಗ್ರಾಮ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿದ್ದು, ಆಗಾಗ್ಗೆ ತಮ್ಮ ಗ್ಲಾಮರಸ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಫಿಟ್‌ನೆಸ್ ಪ್ರೇಮಿ

ಆರೋಗ್ಯ ಹಾಗೂ ಫಿಟ್‌ನೆಸ್ ಬಗ್ಗೆ ವಿಶೇಷ ಕಾಳಜಿ ವಹಿಸುವ ಅದ್ವಿತಿ, ಕಟ್ಟುನಿಟ್ಟಾದ ವ್ಯಾಯಾಮ ಮತ್ತು ಯೋಗದ ಮೂಲಕ ತಮ್ಮ ಮೈಕಟ್ಟು ಕಾಪಾಡಿಕೊಂಡಿದ್ದಾರೆ.