ವಿಜಯವಾಣಿ ಸುದ್ದಿ ಜಾಲ
ಐಶಾನಿ ಶೆಟ್ಟಿ ಮಂಗಳೂರಿನ ತುಳು ಕುಟುಂಬದಲ್ಲಿ ಜನಿಸಿದರು. ಬೆಂಗಳೂರಿನಲ್ಲಿ ಬೆಳೆದ ಅವರು ಬಾಲ್ಯದಿಂದಲೂ ನೃತ್ಯ ಮತ್ತು ನಟನೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದರು.
ಐಶಾನಿ ಬೆಂಗಳೂರಿನಲ್ಲಿ ಮಾಸ್ ಕಮ್ಯುನಿಕೇಷನ್ ವ್ಯಾಸಂಗ ಮಾಡಿದ್ದಾರೆ. ಮೊದಲು ಕಿರುಚಿತ್ರಗಳಲ್ಲಿ ನಟಿಸಿ ನಂತರ ಕನ್ನಡ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಆರಂಭಿಸಿದರು.
2014ರಲ್ಲಿ ಜ್ಯೋತಿ ಅಲಿಯಾಸ್ ಕೋತಿ ರಾಜಾ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ನಂತರ 2015 ರಲ್ಲಿ ತೆರೆಕಂಡ ಯೋಗರಾಜ್ ಭಟ್ ನಿರ್ದೇಶನದ ವಾಸ್ತುಪ್ರಕಾರ ಸಿನಿಮಾ ಇವರಿಗೆ ಬ್ರೇಕ್ ನೀಡಿತು.
ಐಶಾನಿ ಕೇವಲ ನಟಿಯಷ್ಟೇ ಅಲ್ಲದೆ ನಿರ್ದೇಶಕಿ, ಬರಹಗಾರ್ತಿ ಮತ್ತು ನಿರ್ಮಾಪಕಿಯೂ ಹೌದು. ತಾವೇ ನಿರ್ದೇಶಿಸಿದ ಕಾಜಿ ಕಿರುಚಿತ್ರವು ಹಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಶಂಸೆ ಪಡೆದಿದೆ.
ಐಶಾನಿ ತಮ್ಮ ದೀರ್ಘಕಾಲದ ಗೆಳೆಯ, ನಟ ದೀಕ್ಷಿತ್ ಶೆಟ್ಟಿ ಅವರನ್ನು ವಿವಾಹವಾಗಲು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸದ್ಯ ಕನ್ನಡ ಮತ್ತು ತುಳು ಚಿತ್ರಗಳಲ್ಲಿ ಸಕ್ರಿಯರಾಗಿದ್ದಾರೆ.