ವಿಜಯವಾಣಿ ಸುದ್ದಿ ಜಾಲ
ಟ್ರೈನ್ನಲ್ಲಿ ಶ್ರುತಿ ಹಾಸನ್ ಜರ್ನಿ
ಶ್ರುತಿ ಹಾಸನ್, ದುಲ್ಕರ್ ಸಲ್ಮಾನ್ ಕಾಂಬಿನೇಷನ್ನ ಆಕಾಶಂ ಲೋ ಒಕ ತಾರಾ ಸಿನಿಮಾಕ್ಕೆ ಈಗಾಗಲೇ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆ ಬೆನ್ನಲ್ಲೇ, ಶ್ರುತಿ ಹಾಸನ್ರ ಮತ್ತೊಂದು ಸಿನಿಮಾ ರಿಲೀಸ್ಗೆ ರೆಡಿಯಾಗಿದೆ.
ವಿಜಯ್ ಸೇತುಪತಿ ಮುಖ್ಯ ಭೂಮಿಕೆಯ ಮಿಸ್ಕಿನ್ ನಿರ್ದೇಶನದ ಟ್ರೈನ್ ಸಿನಿಮಾವು ಡಿಸೆಂಬರ್ 4ರಂದು ಬೆಳ್ಳಿ ತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದೆ. ಈಗಾಗಲೇ ಸಿನಮಾ ಪ್ರಚಾರ ಕಾರ್ಯ ಸಮಾರೋಪದಿ ನಡೆಯುತ್ತಿದೆ.
ಜೀವನದಲ್ಲಿ ಭರವಸೆ ಕಳೆದುಕೊಂಡ ನಾಯಕ..ಹೀಗೊಮ್ಮೆ ರೈಲಿನಲ್ಲಿ ಪ್ರಯಾಣಿಸುವಾಗ ಎದುರಿಸುವ ಅನಿರೀಕ್ಷಿತ ಅಪಾಯಕಾರಿ ಘಟನೆಗಳನ್ನು ಎದುರಿಸಿ, ತನ್ನ ಪತ್ನಿಗಾಗಿ ನಿರ್ಧರಿಸಿದ್ದ ಕಾರ್ಯ ಪೂರೈಸುತ್ತಾನಾ ಎನ್ನುವುದೇ ಕಥಾ ಹಂದರ.
ಆಕಾಶಂ ಲೋ ಒಕ ತಾರಾ ಸದ್ಯ ಸಕ್ಸಸ್ ಕಾಣುತ್ತಿದೆ. ಇದೊಂದು ಫೀಲ್ ಗುಡ್ ಸಿನಿಮಾ ಎಂದು ಸಿನಿ ಪ್ರೇಮಿಗಳು ನೆಚ್ಚಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ದುಲ್ಕರ್ ಸಲ್ಮಾನ್ ಹಾಗೂ ಶ್ರುತಿ ನಟನೆಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.
ಆಕಾಶಂ ಲೋ ಒಕ ತಾರಾ ಸಿನಿಮಾವು ಭಾರತದಲ್ಲಿ 25.05 ಕೋಟಿ ಮತ್ತು ವಿಶ್ವಾದ್ಯಂತ 41.31 ಕೋಟಿ ಬಾಚಿಕೊಂಡಿದೆ.
ಎಒಟಿ ಸಿನಿಮಾ ಸಕ್ಸಸ್ ನಂತರ ಶ್ರುತಿ ಹಾಸನ್ ಫೋಟೋ ಶೂಟ್ನಲ್ಲಿ ಮಿಂಚುತ್ತಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಮರೂನ್ ಡ್ರೆಸ್ನಲ್ಲಿ ಸ್ಟನಿಂಗ್ ಆಗಿ ಕಾಣಿಸಿಕೊಂಡಿದ್ದಾರೆ.
ಶ್ರುತಿ ಹಾಸನ್ ಅವರು ಬಾಲ ನಟಿಯಾಗಿ ತಮ್ಮ ವೃತ್ತಿಯನ್ನು ಆರಂಭಿಸಿದರು. ಅವರು ನಟಿ ಮಾತ್ರವಲ್ಲ ಉತ್ತಮ ಗಾಯಕಿಯೂ ಹೌದು.
ಜಯಮು ನಿಯಶ್ಚಯಮು ರಾದಲ್ಲಿ ಜಗಪತಿ ಬಾಬು ಅವರ ಸಂದರ್ಶನದಲ್ಲಿ ಭಾಗಿಯಾಗಿದ್ದ ಅವರು, ತಮ್ಮ ತಂದೆ ಹೆಸರಿನಿಂದ ತಮ್ಮನ್ನು ಯಾರು ಗುರುತಿಸಬಾರದು ಎಂದು ಹೆಸರು ಬದಲಾಯಿಸಿಕೊಂಡಿದ್ದ ಬಗ್ಗೆ ಪ್ರಸ್ತಾಪಿಸಿದರು.
ಶ್ರುತಿ ಹಾಸನ್ ತಂದೆ ಕಮಲ್ ಹಾಸನ್ ಅವರಿಗೆ ಮಗಳು ಸ್ಕ್ರಿಪ್ಟ್ ರೈಟರ್ ಆಗಬೇಕು ಎನ್ನುವ ಆಸೆಯಿತ್ತಂತೆ ಹೀಗಾಗಿ ಶ್ರುತಿ ಅವರು ಸಣ್ಣವರಿದ್ದಾಗಲೇ, ಕೆಲವೊಂದು ಕ್ಲಾಸಸ್ಗೆ ತೆರಳುತ್ತಿದ್ದರು ಎನ್ನುವ ವಿಚಾರವನ್ನು ಬಿಚ್ಚಿಟ್ಟರು.
ಸುಹಾಸಿನಿ ಅವರೊಂದಿಗಿನ ಪಾಡ್ಕಾಸ್ಟ್ನಲ್ಲಿ ಭಾಗಿಯಾಗಿದ್ದ ಶ್ರುತಿ ಹಾಸನ್ ಅವರಿಗೆ ರ‍್ಯಾಪಿಡ್ ಫೈರ್ ಏರ್ಪಡಿಸಲಾಗಿತ್ತು. ಮದುವೆ ಯಾವಾಗ ಎಂದು ಕೇಳುವವರಿಗೆ ಏನು ಹೇಳುತ್ತೀರಿ ಎಂದಿದ್ದಕ್ಕೆ ನಿಮ್ಮ ಡಿವೋರ್ಸ್ ಯಾವಾಗ ಎನ್ನುತ್ತೇನೆ ಎಂದು ಶ್ರುತಿ ಟಾಂಗ್ ಕೊಟ್ಟಿದ್ದರು. ಈ ವಿಡಿಯೋ ವೈರಲ್ ಆಗಿತ್ತು.