ವಿಜಯವಾಣಿ ಸುದ್ದಿ ಜಾಲ
ನಟಿ ಸಾಯಿ ಕಾಮಾಕ್ಷಿ ಭಾಸ್ಕರ್ಲಾ ಅವರು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಹೊಸ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿದ್ದು, ಹಾಟ್ ಫೋಟೋಗಳು ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.
ಸದ್ಯ ವೈರಲ್ ಆಗುತ್ತಿರುವ ಫೋಟೋಗಳಲ್ಲಿ ನಟಿ ಕಾಮಾಕ್ಷಿ ಅವರು ಬಿಗಿಯಾದ ನೀಲಿ ಬಣ್ಣದ ಉಡುಪನ್ನು ಧರಿಸಿ ಅತ್ಯಂತ ಆಕರ್ಷಕವಾಗಿ ಹಾಗೂ ಮಾದಕವಾಗಿ ಕಾಣಿಸಿಕೊಂಡಿದ್ದಾರೆ.
ನೀಲಿ ಬಣ್ಣದ ಈ ಮಾಡರ್ನ್ ಉಡುಪಿನಲ್ಲಿ ನಟಿಯ ಮೈಕಟ್ಟು ಮತ್ತು ಸೌಂದರ್ಯ ಮತ್ತಷ್ಟು ಎದ್ದು ಕಾಣುತ್ತಿದ್ದು, ಪಡ್ಡೆಹುಡುಗರ ಹೃದಯಕ್ಕೆ ಕಾಮಾಕ್ಷಿ ಅವರು ಲಗ್ಗೆ ಇಟ್ಟಿದ್ದಾರೆ.
ಕ್ಯಾಮೆರಾ ಕಣ್ಣಿಗೆ ವಿಭಿನ್ನ ಹಾಗೂ ಆಕರ್ಷಕ ಭಂಗಿಗಳಲ್ಲಿ ಪೋಸ್ ನೀಡಿರುವ ಕಾಮಾಕ್ಷಿ ಭಾಸ್ಕರ್ಲಾ ಅವರ ಗ್ಲಾಮರಸ್ ಲುಕ್‌ಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಗಳು ಪೋಸ್ಟ್ ಆದ ಕೆಲವೇ ಕ್ಷಣಗಳಲ್ಲಿ ಸಾವಿರಾರು ಲೈಕ್ಸ್ ಮತ್ತು ಕಾಮೆಂಟ್‌ಗಳನ್ನು ಪಡೆದುಕೊಂಡು ಭರ್ಜರಿಯಾಗಿ ವೈರಲ್ ಆಗುತ್ತಿವೆ. ಕಾಮೆಂಟ್ಗಳಲ್ಲಿ ಅಭಿಮಾನಿಗಳು ನಟಿಯ ಮೈಮಾಟವನ್ನು ಕೊಂಡಾಡುತ್ತಿದ್ದಾರೆ.
ಸಿನಿಮಾಗಳ ಜತೆಗೆ ಸಾಮಾಜಿಕ ಜಾಲತಾಣಗಳಲ್ಲೂ ಸದಾ ಸಕ್ರಿಯವಾಗಿರುವ ಈ ನಟಿ, ತಮ್ಮ ಹೊಸ ಫೋಟೋಶೂಟ್ ಮೂಲಕ ಮತ್ತೊಮ್ಮೆ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದ್ದಾರೆ.
ಕಾಮಾಕ್ಷಿ ಅವರು ತುಂಬಾ ಗ್ಲಾಮರಸ್ ಬೆಡಗಿ. ಅವರ ಇನ್ಸ್ಟಾಗ್ರಾಂ ಪೇಜ್ ತೆಗೆದು ನೋಡಿದರೆ ಬಿಕಿನಿ ಮತ್ತು ಅರೆಬೆತ್ತಲೆ ಫೋಟೋಗಳೇ ತುಂಬಿವೆ. ಇನ್ಸ್ಟಾದಲ್ಲಿ ಅವರ ಫೋಟೋಗಳನ್ನು ನೋಡಿ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.
ಕೊನೆಯದಾಗಿ ಈ ಬೆಡಗಿ 'ಅಗಧ' ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವೂ ಒಂದು ಹಾರರ್, ಥ್ರಿಲ್ಲರ್ ಸಿನಿಮಾ ಆಗಿದ್ದು, ಬಾಕ್ಸ್ಆಫೀಸ್ನಲ್ಲಿ ಸದ್ದು ಮಾಡಿತು. ಕಾಮಾಕ್ಷಿ ನಟಿಯಷ್ಟೇ ಅಲ್ಲದೆ ಅವರು ವೃತ್ತಿಯಲ್ಲಿ ವೈದ್ಯೆಯೂ ಹೌದು.