ಮಿಸಸ್ 'IPS ಮರಿಯಾ' ಅವತಾರದಲ್ಲಿ ತಮನ್ನಾ

ವಿಜಯವಾಣಿ ಸುದ್ದಿ ಜಾಲ

ಪ್ರೀತಿ ಮರಿಯಾ ಆಗಿ ತಮನ್ನಾ ನಟನೆ

ಮುಂಬೈನ ಮಾಜಿ ಪೊಲೀಸ್ ಕಮಿಷನರ್​ ರಾಕೇಶ್​ ಮರಿಯಾ ಅವರ ಜೀವನ ಕತೆಯಾಧರಿಸಿ ನಿರ್ಮಿಸುತ್ತಿರುವ ಐಪಿಎಸ್​​ ಮರಿಯಾ ಸಿನಿಮಾದಲ್ಲಿ ತಮನ್ನಾ ಅವರ ಪತ್ನಿ ಪ್ರೀತಿ ಮರಿಯಾ ಆಗಿ ಮಿಂಚಲು ಸಜ್ಜಾಗಿದ್ದಾರೆ.

ಮಿಲ್ಕಿ ಬ್ಯೂಟಿ ತಮನ್ನಾ ಅವರು Myntra x Underneat ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಸಮಾರಂಭಕ್ಕೆ ಕಪ್ಪು ಲಾಂಗ್​ ಡ್ರೆಸ್​ಗೆ, ಕಸೂತಿಯಿಂದ ಕೂಡಿದ ಕೋಟ್​ ಧರಿಸಿದ್ದು ಆಕರ್ಷಕವಾಗಿ ಕಂಡಿತ್ತು.

ಸದ್ಯ ತಮನ್ನಾ ನಟನೆಯ ಸಿನಿಮಾಗಳು ಈ ವರ್ಷ ರಿಲೀಸ್ ಆಗಲಿವೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ಸಿಕಿಲ್ಲ. ಆದರೆ 2027ರಲ್ಲಿ ಅವರ ಸಾಲು ಸಾಲು ಸಿನಿಮಾಗಳು ತೆರೆಗೆ ಬರಲು ಸಜ್ಜಾಗುತ್ತಿದೆ.

ದಿ ವ್ಯಾನ್​​, ಪುರುಷನ್, ರೇಂಜರ್ಸ್, ರಾಗಿಣಿ 3, ಐಪಿಎಸ್​ ಮರಿಯಾ, ವಿ ಶಾಂತರಾಮ್​ ಬಯೋಪಿಕ್​ ಸಿನಿಮಾಗಳಲ್ಲಿ ಕೆಲವು 2027ರಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.

ಕೆಲವೊಂದಕ್ಕೆ ತಲೆ ಕೆಡಿಸಿಕೊಳ್ಳಲ್ಲ

ಎಲ್ಲವನ್ನು ಕೇಳಿಸಿಕೊಳ್ಳುವ ಗುಣವಿರಬೇಕು..ಕೆಲವೊಂದು ಫಿಲ್ಟರ್ ಮಾಡಿಕೊಳ್ಳಬೇಕು. ಎಲ್ಲ ವಿಚಾರ ತಲೆಗೆ ಹಾಕಿಕೊಂಡು ಭವಿಷ್ಯ ಹಾಳು ಮಾಡಿಕೊಳ್ಳಬಾರದು ಎಂದು ತಮನ್ನಾ ಮಹಿಳೆಯರಿಗೆ ಸಲಹೆ ಕೊಟ್ಟಿದ್ದರು.

ತಮನ್ನಾ ಟಾಲಿವುಡ್ ಹಾಗೂ ಕಾಲಿವುಡ್​, ಬಾಲಿವುಡ್​ ಸಿನಿಮಾದಲ್ಲಿ ಮಿಂಚಿದ್ದಾರೆ. ಇಂದಿಗೂ ಬೇಡಿಕೆಯ ನಟಿಯಾಗಿ ಅವರು ಗುರುತಿಸಿಕೊಂಡಿದ್ದಾರೆ.