ಪ್ಯಾರಿಸ್​ನಲ್ಲಿ ಪ್ರಪೋಸ್​ ಪಡೆದ ಸ್ಪಂದನಾ ಸೋಮಣ್ಣ!

ವಿಜಯವಾಣಿ ಸುದ್ದಿ ಜಾಲ

ಸೀರಿಯಲ್​ ನಟಿ

ಕನ್ನಡದ ಜನಪ್ರೀಯ ಧಾರಾವಾಹಿಗಳಾದ ಕರಿಮಣಿ, ಗೃಹ ಪ್ರವೇಶ ದೀಪ ದರ್ಶನ ಎಂದ ಸೀರಿಯಲ್​ಗಳಲ್ಲಿ ನಟಿಸುವ ಮೂಲಕ ಸ್ಪಂದನಾ ಸೋಮಣ್ಣ ಕನ್ನಡ ಪ್ರೇಕ್ಷಕರನ್ನು ತಲುಪಿದ್ದರು.

ಬಿಗ್​ ಬಾಸ್​ ಸ್ಪರ್ಧಿ

ಇನ್ನು ಧಾರಾವಾಹಿ ನಂತರ ಕನ್ನಡ ಬಿಗ್​ಬಾಸ್ ಸೀಸನ್​ 12 ರಲ್ಲಿ ಕಾಣಿಸಿಕೊಂಡಿದ್ದ ಸ್ಪಂದನಾ ಸೋಮಣ್ಣ, 99 ದಿನಗಳವರೆಗೆ ಮನೆಯಲ್ಲಿ ವಾಸವಿದ್ದು 9ನೇ ಸ್ಥಾನ ಪಡೆದಿದ್ದರು.

ವದಂತಿಗೆ ತೆರೆ ಎಳೆದಿದ್ದ ನಟಿ

ಬಿಗ್​ಬಾಸ್​ನಲ್ಲಿ ಸಹ ಸ್ಪರ್ಧಿ ಸೂರಜ್​ ಜೊತೆ ಆತ್ಮೀಯವಾಗಿದ್ದ ಹಿನ್ನಲೆ ಸ್ಪಂದನಾ, ಸೂರಜ್​ ಜೊತೆ ಮದುವೆಯಾಗಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ ನಟಿ ಇದಕ್ಕೆ ಸ್ಪಷ್ಟನೆ ನೀಡಿದ್ದರು.

ಮೊದಲು ಮುಖ ತೋರಿಸಿರಲಿಲ್ಲ!

ಆಗಸ್ಟ್​ ತಿಂಗಳಲ್ಲೇ ವರುಣ್​ ಮುನಿರಾಜು, ಸ್ಪಂದನಾಗೆ ಪ್ರಪೋಸ್ ಮಾಡಿದ್ದರು. ಆದರೆ ನಟಿ ಆ ಸಮಯದಲ್ಲಿ ತಾವು ಮದುವೆಯಾಗಲಿರುವುದು ವರುಣ್​ ಅವರನ್ನೇ ಎನ್ನುವ ವಿಷಯವನ್ನು ಬಿಟ್ಟುಕೊಟ್ಟಿರಲಿಲ್ಲ.

ನನ್ನ ಜೀವನ ಸಂಗಾತಿ!

ಆದರೆ, ಇಂದು ಪ್ಯಾರಿಸ್​ನ ಐಫೆಲ್​ ಟವರ್ ಬಳಿ ಪ್ರಪೋಸ್ ಮಾಡಿರುವ ಫೋಟೊ ಹಂಚಿಕೊಂಡಿರುವ ಸ್ಪಂದನಾ ಸೋಮಣ್ಣ, ವರುಣ್​ ಮುನಿರಾಜು, ಇವರೇ ನನ್ನ ಜೀವನ ಸಂಗಾತಿ ಎಂದು ಘೋಷಿಸಿದ್ದಾರೆ.