ವಿಜಯವಾಣಿ ಸುದ್ದಿ ಜಾಲ
ಹಿನ್ನೆಲೆ ಮತ್ತು ಆರಂಭಿಕ ಜೀವನ
ಬೆಂಗಳೂರಿನಲ್ಲಿ ಬೆಳೆದ ರುಕ್ಮಿಣಿ ವಸಂತ್, ಭಾರತೀಯ ಸೇನೆಯ ಹುತಾತ್ಮ ಕರ್ನಲ್ ವಸಂತ್ ವೇಣುಗೋಪಾಲ್ ಹಾಗೂ ಶಾಸ್ತ್ರೀಯ ನೃತ್ಯಗಾರ್ತಿ ಸುಭಾಷಿಣಿ ವಸಂತ್ ಪುತ್ರಿಯಾಗಿದ್ದಾರೆ.
ಅಭಿನಯ ಕಲೆ ಮತ್ತು ಶಿಕ್ಷಣ
ಲಂಡನ್‌ನ ಪ್ರತಿಷ್ಠಿತ 'ರಾಯಲ್ ಅಕಾಡೆಮಿ ಆಫ್ ಡ್ರಮ್ಯಾಟಿಕ್ ಆರ್ಟ್' (RADA) ಸಂಸ್ಥೆಯಲ್ಲಿ ನಟನೆಯ ಉನ್ನತ ತರಬೇತಿ ಪಡೆದಿರುವ ರುಕ್ಮಿಣಿ, ಭರತನಾಟ್ಯ ನೃತ್ಯ ಕಲಾವಿದೆಯಾಗಿಯೂ ಗುರುತಿಸಿಕೊಂಡಿದ್ದಾರೆ.
ಖ್ಯಾತಿ ತಂದ 'ಸಪ್ತ ಸಾಗರದಾಚೆ ಎಲ್ಲೋ'
ಹೇಮಂತ್ ರಾವ್ ನಿರ್ದೇಶನದ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಪ್ರಿಯಾ ಪಾತ್ರದಲ್ಲಿ ರಕ್ಷಿತ್ ಶೆಟ್ಟಿ ಜೊತೆ ಅದ್ಭುತವಾಗಿ ನಟಿಸಿ, ಕನ್ನಡಿಗರ ಮನೆಮಾತಾಗಿ ಅಪಾರ ಜನಪ್ರಿಯತೆ ಹಾಗೂ ಪ್ರಶಸ್ತಿಗಳನ್ನು ಗಳಿಸಿದರು.
ಬೇಡಿಕೆಯ ನಟಿ
ಕನ್ನಡದ 'ಬೀರ್‌ಬಲ್' ಚಿತ್ರದ ಮೂಲಕ ನಟನೆ ಆರಂಭಿಸಿದ ರುಕ್ಮಿಣಿ, ಬಳಿಕ 'ಬಘೀರ', ತಮಿಳಿನಲ್ಲಿ ವಿಜಯ್ ಸೇತುಪತಿ ಜೊತೆ 'ಏಸ್', ರಿಷಬ್ ಶೆಟ್ಟಿ ಜೊತೆ 'ಕಾಂತಾರಾ' ಹಾಗೂ ರಾಕಿಂಗ್ ಸ್ಟಾರ್ ಯಶ್ ಜತೆ 'ಟಾಕ್ಸಿಕ್' ಸಿನಿಮಾಗಳಲ್ಲಿ ನಟಿಸಿ ಬೇಡಿಕೆಯ ನಟಿಯಾಗಿ ಬೆಳೆದಿದ್ದಾರೆ.