'ಸೀನ್​'ನಲ್ಲಿ ನಜ್ರಿಯಾ ನಜೀಮ್

ವಿಜಯವಾಣಿ ಸುದ್ದಿ ಜಾಲ

ಕಾಲಿವುಡ್​ಗೆ ಕಂಬ್ಯಾಕ್

12 ವರ್ಷಗಳ ನಂತರ ತಮಿಳು ಚಿತ್ರರಂಗಕ್ಕೆ ಮಾಲಿವುಡ್​ ನಟಿ ನಜ್ರಿಯಾ ನಜೀಮ್​ ಕಂಬ್ಯಾಕ್​ ಆಗಿದ್ದಾರೆ. ಸದ್ಯ ಸೂರ್ಯ ನಟನೆಯ 'ಸೀನ್'​ ಸಿನಿಮಾದಲ್ಲಿ ನಟಿಸಿದ್ದು, ನವೆಂಬರ್​ 6ರಂದು ರಿಲೀಸ್​ ಆಗಲಿದೆ.

ಅವಕಾಶ ಕೊಟ್ಟಿದ್ದಕ್ಕೆ ಥ್ಯಾಂಕ್ಯೂ

ಜಿತು ಮಾಧವನ್​ ನಿರ್ದೇಶನದ ಸೀನ್​ ಸಿನಿಮಾದಲ್ಲಿ ನಟಿಸುವುದು ನನಗೆ ತುಂಬಾ ಸಂತೋಷದ ವಿಚಾರ. ನನ್ನ ಮೇಲೆ ನಂಬಿಕೆ ಇಟ್ಟು ಅವಕಾಶ ನೀಡಿದ್ದಕ್ಕೆ ಥ್ಯಾಂಕ್ಯೂ ಎಂದು ಸೀನ್​ ಸಿನಿಮಾ ಪ್ರಚಾರದ ನಜ್ರಿಯಾ ವೇಳೆ ಹೇಳಿದರು.

ಸೂರ್ಯ ಸರ್ ಅದ್ಭುತ ನಟ

ಸೂರ್ಯ ಸರ್ ಅವರನ್ನು ನಾನು ಚಿಕ್ಕಂದಿನಿಂದ ನೋಡುತ್ತಾ ಬೆಳೆದಿದ್ದು. ಅವರು ಎಂತಹ ನಟ ಎನ್ನುವುದು ಗೊತ್ತು. ಸಿನಿಮಾ ಒಪ್ಪಿಕೊಳ್ಳಲು ಇದು ಒಂದು ಕಾರಣ ಎಂದರು ನಜ್ರಿಯಾ. ಥಿಯೇಟರ್​​ನಲ್ಲೇ ಸಿನಿಮಾ ನೋಡಿ ಎಂದು ಮನವಿ ಮಾಡಿಕೊಂಡರು.

ಸೂಕ್ಷ್ಮ ದರ್ಶಿನಿ ನಂತ್ರ ನಜ್ರಿಯಾ ನಾಪತ್ತೆ

ಸೂಕ್ಷ್ಮ ದರ್ಶಿನಿ ಸೂಪರ್​​ ಹಿಟ್​​ ಆದ ನಂತರ ನಟಿ ನಜ್ರಿಯಾ ಅವರು ಅಷ್ಟಾಗಿ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಅಷ್ಟೇ ಅಲ್ಲದೇ ಅವರು ಸೋಶಿಯಲ್​ ಮೀಡಿಯಾದಿಂದಲೂ ದೂರವಿದ್ದರು.

ಮುಂಬರುವ ಸಿನಿಮಾ

ನಜ್ರಿಯಾ ಸದ್ಯ ಸೀನ್ ಸಿನಿಮಾ ಮೂಲಕ ಚಿನಿಮಾ ರಂಗಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ. ಟೊವಿನೋ ಥಾಮಸ್ ಜೊತೆಗೆ ದಿ ಮದ್ರಾಸ್ ಮಿಸ್ಟರಿ - ಫಾಲ್ ಆಫ್ ಎ ಸೂಪರ್‌ಸ್ಟಾರ್, ಗ್ರಾಸಿಯಾಸ್ ಎಲ್ ಕ್ಲಾಸಿಕೊದಲ್ಲಿ ನಟಿಸುತ್ತಿದ್ದಾರೆ.

ರೆಡ್​ ಫ್ಲ್ಯಾಗ್​ ರೂಮರ್ಸ್

ಹಿಂದೆ ರೆಡ್ ಫ್ಲ್ಯಾಗ್​ ಬಗ್ಗೆ ನಟಿ ಹಂಚಿಕೊಂಡಿದ್ದ ಪೋಸ್ಟ್​ವೊಂದು ವೈರಲ್ ಆಗಿತ್ತು. ಅಲ್ಲದೇ ಇದು ಫಹಾದ್ ಹಾಗೂ ನಜ್ರಿಯಾ ನಡುವಿನ ಸಂಬಂಧದ ಬಗ್ಗೆ ಹಲವಾರು ಚರ್ಚೆಯನ್ನು ಹುಟ್ಟುಹಾಕಿತ್ತು.

ಪ್ರೀತಿ..ಮದುವೆ

ನಜ್ರಿಯಾ ಮತ್ತು ಫಹಾದ್​​ 2014ರಲ್ಲಿ ರಿಲೀಸ್ ಆದ ಬೆಂಗಳೂರು ಡೇಸ್ ಸಿನಿಮಾ ಮೂಲಕ ಪರಿಚಯವಾದರು. ಚಿತ್ರೀಕರಣದ ಸಮಯದಲ್ಲಿ ಇಬ್ಬರಿಗೂ ಪ್ರೀತಿಯಾಗಿತ್ತು. ಆಗಸ್ಟ್​21ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.