ವಿಜಯವಾಣಿ ಸುದ್ದಿ ಜಾಲ
ಒಂದೇ ಒಂದು ಕಣ್ಸನ್ನೆ ಮೂಲಕ ಯುವಕರ ನಿದ್ದೆಗೆಡಿಸಿ ರಾತ್ರೋರಾತ್ರಿ 'ನ್ಯಾಷನಲ್ ಕ್ರಶ್' ಆಗಿ ಹೊರಹೊಮ್ಮಿದ್ದ ಮಲಯಾಳಿ ಸುಂದರಿ ಪ್ರಿಯಾ ಪ್ರಕಾಶ್ ವಾರಿಯರ್, ಇದೀಗ ತಮ್ಮ ಹೊಸ ಗ್ಲಾಮರಸ್ ಲುಕ್‌ನಿಂದ ಸುದ್ದಿಯಾಗಿದ್ದಾರೆ.
ತಮ್ಮ 27ನೇ ಜನ್ಮದಿನದ ಸಂಭ್ರಮದಲ್ಲಿ ರೆಡ್ ಸ್ಯಾಟಿನ್ ಸ್ಲಿಪ್ ಡ್ರೆಸ್ ಧರಿಸಿ ಕಂಗೊಳಿಸಿರುವ ಪ್ರಿಯಾ, ತಮ್ಮ ಸೌಂದರ್ಯದಿಂದ ನೆಟ್ಟಿಗರ ಎದೆಯಲ್ಲಿ ಕಾವು ಹೆಚ್ಚಿಸಿದ್ದು, ಫೋಟೋಗಳು ವೈರಲ್ ಆಗಿವೆ.
ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಉದ್ಯಾನವನದಲ್ಲಿ ಕ್ಯಾಂಡಲ್‌ಲೈಟ್ ಡಿನ್ನರ್ ಮಾಡುವ ಮೂಲಕ ಬಹಳ ಪ್ರಿಯಾ ಅವರು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.
ಜನ್ಮದಿನದ ಸುಂದರ ಫೋಟೋಗಳನ್ನು ಹಂಚಿಕೊಂಡಿರುವ ಪ್ರಿಯಾ, "ಗುಡ್ ಬೈ 26, ಹೆಲೋ 27" ಎಂದು ಬರೆದುಕೊಳ್ಳುವ ಮೂಲಕ ತಮ್ಮ 27ನೇ ವರ್ಷಕ್ಕೆ ಹೆಜ್ಜೆ ಇಟ್ಟಿರುವುದನ್ನು ತಿಳಿಸಿದ್ದಾರೆ.
ಕೌಲ್ ನೆಕ್‌ಲೈನ್ ಹಾಗೂ ತೆಳುವಾದ ಸ್ಟ್ರಾಪ್ ಹೊಂದಿದ್ದ ಕೆಂಪು ಬಣ್ಣದ ಸ್ಯಾಟಿನ್ ಸ್ಲಿಪ್ ಡ್ರೆಸ್ ಧರಿಸಿದ್ದ ಅವರು, ಅಗಲವಾದ ಗೋಲ್ಡ್ ಕಫ್, ಡ್ರಾಪ್ ಈಯರ್‌ರಿಂಗ್ಸ್, ಶಿಮರಿ ಐ ಮೇಕಪ್ ಹಾಗೂ ಕೆಂಪು ಲಿಪ್‌ಸ್ಟಿಕ್‌ನೊಂದಿಗೆ ಅತ್ಯಂತ ಗ್ಲಾಮರಸ್ ಆಗಿ ಮಿಂಚಿದ್ದಾರೆ.
ಹಾಟ್ ಫೋಟೋಶೂಟ್ನಲ್ಲಿ ಪ್ರಿಯಾ ಅವರ ಮೈಮಾಟವನ್ನು ಕಂಡು ಫಿದಾ ಆಗಿರುವ ಅಭಿಮಾನಿಗಳು ಕಾಮೆಂಟ್ಗಳ ಮಹಾಪೂರವನ್ನೇ ಹರಿಸಿದ್ದು, ನೆಚ್ಚಿನ ನಟಿಯ ಸೌಂದರ್ಯವನ್ನು ಕೊಂಡಾಡುತ್ತಿದ್ದಾರೆ.
'ಒರು ಅಡಾರ್ ಲವ್' ಚಿತ್ರದ ಒಂದೇ ಒಂದು ಕಣ್ಸನ್ನೆ ದೃಶ್ಯದ ಮೂಲಕ ಪ್ರಿಯಾ ವಾರಿಯರ್ ಇಡೀ ಭಾರತದ ನೆಚ್ಚಿನ 'ನ್ಯಾಷನಲ್ ಕ್ರಶ್' ಆಗಿ ಬದಲಾದರು.
ಅಂದಿನಿಂದ ಇಂದಿನವರೆಗೂ ಸದಾ ಸುದ್ದಿಯಲ್ಲಿರುವ ಇವರು, ವಿವಿಧ ಭಾಷೆಗಳ ಚಿತ್ರರಂಗಗಳಲ್ಲಿ ನಟಿಸುತ್ತಾ, ಗಾಯಕಿಯಾಗಿಯೂ ತಮ್ಮ ಬಹುಮುಖ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.
ಇತ್ತೀಚೆಗೆ ತೆರೆಕಂಡು ಸೂಪರ್ ಹಿಟ್ ಎನಿಸಿಕೊಂಡ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾದಲ್ಲಿ ಪ್ರಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಗಮನ ಸೆಳೆದಿದ್ದಾರೆ.
ಪ್ರಿಯಾ ವಾರಿಯರ್ ಮುಂದಿನ ಬಾರಿಗೆ '3 ಮಂಕೀಸ್' ಎಂಬ ಹೈಸ್ಟ್ ಥ್ರಿಲ್ಲರ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು, ಅವರ ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.