ವಿಜಯವಾಣಿ ಸುದ್ದಿ ಜಾಲ
ದಕ್ಷಿಣ ಭಾರತೀಯ ಚಿತ್ರರಂಗದ ಮೋಹಕ ನಟಿ ಹಾಗೂ ತಮ್ಮ ಸೌಂದರ್ಯದಿಂದಲೇ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿರುವ ಮಾಳವಿಕಾ ಮೋಹನನ್, ಪ್ರಸ್ತುತ ಸಿನಿಮಾ ಹಾಗೂ ಫ್ಯಾಷನ್ ಜಗತ್ತಿನಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ.
ಇತ್ತೀಚೆಗೆ ಮಾಳವಿಕಾ ಅವರು ಕೆಂಪು ಬಣ್ಣದ ಲೆಹೆಂಗಾ ಉಡುಪಿನಲ್ಲಿ ಫೋಟೋಶೂಟ್ ಮಾಡಿಸಿದ್ದು, ಒಂದೇ ಸಮಯದಲ್ಲಿ ಕಂಟ್ರಾಸ್ಟ್ ಆಗಿ ಅತ್ಯಂತ ಬೋಲ್ಡ್ ಹಾಗೂ ಕ್ಲಾಸಿಕ್ ಲುಕ್‌ನಲ್ಲಿ ಕಂಗೊಳಿಸಿದ್ದಾರೆ.
ಮಾಳವಿಕಾ ಧರಿಸಿದ್ದ ಈ ಕೆಂಪು ಲೆಹೆಂಗಾದ ಫಿಟೆಡ್ ಬ್ಲೌಸ್ ಆಳವಾದ ನೆಕ್‌ಲೈನ್ ಹಾಗೂ ಚಿನ್ನದ ದಾರದ ಎಂಬ್ರಾಯ್ಡರಿ ವಿನ್ಯಾಸವನ್ನು ಹೊಂದಿದ್ದು, ಗೋಲ್ಡನ್ ಬಾರ್ಡರ್ ಇರುವ ಟ್ರಾನ್ಸ್‌ಪರೆಂಟ್ ದುಪಟ್ಟಾ ಅವರ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ನೀಡಿದೆ.
ಈ ಲುಕ್‌ಗೆ ತಕ್ಕಂತೆ ಮಾಳವಿಕಾ ಅವರು ಕಿವಿಗೆ ಜುಮುಕಿ, ಕೈತುಂಬ ಬಳೆಗಳು, ಕನ್ನಡಿ ಕೆಲಸದ ಪೋಟ್ಲಿ ಬ್ಯಾಗ್, ನೀಟಾಗಿ ಬಾಚಿದ ಜುಟ್ಟು ಮತ್ತು ಹಣೆಯ ಮೇಲೊಂದು ಸಣ್ಣ ಬಿಂದಿಯಿಟ್ಟು ಕಂಪ್ಲೀಟ್ ದೇಶಿ ಲುಕ್ ನೀಡಿದ್ದಾರೆ.
ದೇಸಿ ಲುಕ್ನಲ್ಲೂ ಮಾಳವಿಕಾ ಅವರ ಮಾದಕತೆಯನ್ನು ನೋಡಿ ಫಿದಾ ಆಗಿರುವ ಅಭಿಮಾನಿಗಳು ಕಾಮೆಂಟ್ಗಳ ಸುರಿಮಳೆಯೊಂದಿಗೆ ನಟಿಯ ಮೈಮಾಟವನ್ನು ಕೊಂಡಾಡುತ್ತಿದ್ದಾರೆ.
ಮಾಳವಿಕಾ ಮೋಹನನ್ ಅವರು ಮಲಯಾಳಂ ಚಿತ್ರರಂಗಕ್ಕೆ ಸೀಮಿತವಾಗದೇ ತಮಿಳು, ಹಿಂದಿ ಹಾಗೂ ತೆಲುಗು ಹೀಗೆ ನಾಲ್ಕೂ ಪ್ರಮುಖ ಚಿತ್ರರಂಗಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಪ್ರತಿಯೊಂದು ಚಿತ್ರರಂಗದಲ್ಲೂ ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದರೂ, ಅವರನ್ನು ಚಿತ್ರರಂಗದ ಅತ್ಯುನ್ನತ ಸ್ಥಾನಕ್ಕೇರಿಸುವ ಒಂದು ಬೃಹತ್ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ.
ಅವರ ಅಭಿನಯದಲ್ಲಿ ಇತ್ತೀಚೆಗಷ್ಟೇ ತೆರೆಕಂಡ 'ಸರ್ದಾರ್ 2' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಕಾಣದೆ ಹಿನ್ನಡೆ ಅನುಭವಿಸಿದೆ.
ಸದ್ಯ ಮಾಳವಿಕಾ ಮೋಹನನ್ ಅವರು 'ಪಾಕೆಟ್ ನಾವೆಲ್' ಎಂಬ ಸಿನಿಮಾದಲ್ಲಿ ಬಿಜಿಯಾಗಿದ್ದು, ಗೆಲುವಿಗಾಗಿ ಎದುರು ನೋಡುತ್ತಿದ್ದಾರೆ.