"ಮಿಲನ" ಸುಂದರಿ ಪಾರ್ವತಿ!

ವಿಜಯವಾಣಿ ಸುದ್ದಿ ಜಾಲ

ನಟಿ ಹಿನ್ನಲೆ

ಪಾರ್ವತಿ ತಿರುವೋತು 7 ಏಪ್ರಿಲ್ 1988 ರಂದು ಕೇರಳದ ಕೋಳಿಕೋಡ್ ನಲ್ಲಿ ಜನಿಸಿದರು. ಅವರ ತಂದೆ ಪಿ. ವಿನೋದ್ ಕುಮಾರ್ ಮತ್ತು ತಾಯಿ ಟಿ.ಕೆ. ಉಷಾ ಕುಮಾರಿ ಇಬ್ಬರೂ ವಕೀಲರಾಗಿದ್ದಾರೆ.

ನಟನೆ ಮೊದಲು ನಿರೂಪಕಿ

ಪಾರ್ವತಿ ತಿರುವನಂತಪುರಂನ ಕೇಂದ್ರೀಯ ವಿದ್ಯಾಲಯದಲ್ಲಿ ಶಾಲಾ ಶಿಕ್ಷಣ ಮುಗಿಸಿ, ಆಲ್ ಸೇಂಟ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಬಿ.ಎ ಪದವಿ ಪಡೆದಿದ್ದಾರೆ. ಚಿತ್ರರಂಗಕ್ಕೆ ಬರುವ ಮುನ್ನ ಅವರು ಕಿರಣ್ ಟಿವಿ ಎಂಬ ಸಂಗೀತ ಚಾನೆಲ್ ನಲ್ಲಿ ಟಿವಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದರು.

ಚಿತ್ರರಂಗಕ್ಕೆ ಪಾದಾರ್ಪಣೆ

ಪಾರ್ವತಿ 2006 ರಲ್ಲಿ ‘ಔಟ್ ಆಫ್ ಸಿಲಬಸ್’ ಎಂಬ ಮಲಯಾಳಂ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಆದರೆ 2008 ರ ತಮಿಳು ಚಿತ್ರ ‘ಪೂ’ ನಲ್ಲಿ ಮಾರಿ ಪಾತ್ರದಲ್ಲಿ ನಟಿಸಿ ವಿಮರ್ಶಕರ ಮೆಚ್ಚುಗೆ ಪಡೆದು, ತಮಿಳಿನ ಅತ್ಯುತ್ತಮ ನಟಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದರು.

ಪುನೀತ್​ ಜೊತೆ ನಟನೆ

2007 ರಲ್ಲಿ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್ ಜೊತೆಗೆ ಪಾರ್ವತಿ ಮಿಲನ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡದ ಪ್ರೇಕ್ಷಕರಿಗೆ ಹತ್ತಿರವಾದರು. ಈ ಸಿನಿಮಾ ಆ ಸಮಯದಲ್ಲಿ ತೆರೆಕಂಡು ಭರ್ಜರಿ ಯಶಸ್ಸು ದಾಖಲಿಸಿದ ಸಿನಿಮಾವಾಗಿತ್ತು. ಮಿಲನ ನಂತರ ಪಾರ್ವತಿ ಪುನೀತ್​ ರಾಜ್​ಕುಮಾರ್​ ನಟನೆಯ ಇನ್ನೊಂದು ಯಶಸ್ವಿ ಸಿನಿಮಾ ಪೃಥ್ವಿಯನ್ನು ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದರು.

ಸಾಮಾಜಿಕ ಹೋರಾಟಗಾರ್ತಿ

ನಟನೆಯ ಹೊರತಾಗಿ ಪಾರ್ವತಿ ಮಹಿಳಾ ಹಕ್ಕುಗಳ ಪರವಾಗಿ ದಿಟ್ಟ ಧ್ವನಿಯಾಗಿದ್ದಾರೆ. ಅವರು ‘ವುಮೆನ್ ಇನ್ ಸಿನಿಮಾ ಕಲೆಕ್ಟಿವ್ (WCC)’ ಸಂಸ್ಥೆಯನ್ನು ಸ್ಥಾಪಸಿದ್ದಾರೆ. ಚಾನೆಲ್ 4 ನ ‘ಅನ್‌ರಿಪೋರ್ಟೆಡ್ ವರ್ಲ್ಡ್’ ಸಾಕ್ಷ್ಯಚಿತ್ರದಲ್ಲಿ ಮೀ ಟೂ ಚಳವಳಿಯ ಬಗ್ಗೆ ಮಾತನಾಡಿ ಸಾಮಾಜಿಕ ಕಾಳಜಿ ಮೆರೆದಿದ್ದಾರೆ.