ವಿಜಯವಾಣಿ ಸುದ್ದಿ ಜಾಲ
ನಟಿ ಮೀನಾಕ್ಷಿ ಚೌಧರಿಗೆ ಪ್ರಯಾಣದ ಮೇಲಿರುವ ಒಲವು ಮತ್ತೆ ಸಾಬೀತಾಗಿದೆ. ಜಪಾನ್ ಪ್ರವಾಸದ ಬೆನ್ನಲ್ಲೇ ವಿಯೆಟ್ನಾಮ್‌ನಲ್ಲಿ ಬೀಡುಬಿಟ್ಟಿರುವ ಅವರು, ಅಲ್ಲಿನ ಫೋಟೋಗಳನ್ನು ಹಂಚಿಕೊಂಡಿದ್ದು ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.
ವಿಯೆಟ್ನಾಂನಲ್ಲಿರುವ ಆಕರ್ಷಕ ದೇವಾಲಯಗಳು ಹಾಗೂ ಹಸಿರು ಹೊದಿಕೆಯ ಬೆಟ್ಟಗಳ ಹಿನ್ನೆಲೆಯಲ್ಲಿ ತೆಗೆಸಿರುವ ಮೀನಾಕ್ಷಿ ಅವರ ಚಿತ್ರಗಳು ಪ್ರವಾಸಿಗರ ಗಮನ ಸೆಳೆಯುತ್ತಿವೆ.
ವಿಯೆಟ್ನಾಂ ಪ್ರವಾಸದ ವೇಳೆ ಅವರು ಹೈ ಕಾಲರ್, ಕ್ಯಾಪ್ ಸ್ಲೀವ್ಸ್ ಮತ್ತು ಸೈಡ್ ಸ್ಲಿಟ್ ಹೊಂದಿರುವ ನೀಲಿ ಬಣ್ಣದ ಸುಂದರ ಫ್ಲೋರಲ್ ಚಿಯೊಂಗ್‌ಸ್ಯಾಮ್ ಶೈಲಿಯ ಉಡುಗೆಯನ್ನು ಧರಿಸಿದ್ದಾರೆ.
ಅವರು ಹಂಚಿಕೊಂಡಿರುವ ಪ್ರತಿಯೊಂದು ಫ್ರೇಮ್‌ನಲ್ಲಿಯೂ ವಿಯೆಟ್ನಾಂನ ಸಾಂಪ್ರದಾಯಿಕ ಶಂಕರಾಕಾರದ ಟೊಪ್ಪಿಯನ್ನು (ಕಾನಿಕಲ್ ಹ್ಯಾಟ್) ಹಿಡಿದು ಪೋಸ್ ನೀಡಿದ್ದಾರೆ.
ತಮ್ಮ ಲುಕ್ ಅನ್ನು ಇನ್ನಷ್ಟು ಆಕರ್ಷಕವಾಗಿಸಲು ಅವರು ಕೂದಲನ್ನು ಪೋನಿಟೇಲ್ ಶೈಲಿಯಲ್ಲಿ ಬಾಚಿಕೊಂಡಿದ್ದು, ಕೈಗೆ ಚಿನ್ನದ ಬಳೆಗಳು ಮತ್ತು ವಾಚ್ ಧರಿಸಿ ಸಿಂಪಲ್ ಆಗಿ ಕಾಣಿಸಿಕೊಂಡಿದ್ದಾರೆ.
ವಿಯೆಟ್ನಾಂನ ಪ್ರಾಚೀನ ದೇವಾಲಯಗಳು ಹಾಗೂ ಹಸಿರಿನಿಂದ ಕೂಡಿರುವ ಸುಂದರ ಬೆಟ್ಟಗಳ ಸಾಲುಗಳು ಈ ಫೋಟೋಗಳಂದಿಗೆ ವಿಶೇಷ ಕಳೆ ತಂದುಕೊಟ್ಟಿವೆ.
ಸಿನಿಮಾಗಳ ವಿಚಾರಕ್ಕೆ ಬರುವುದಾದರೆ, ಮೀನಾಕ್ಷಿ ಚೌಧರಿ ಅವರು ಮುಂದಿನ ದಿನಗಳಲ್ಲಿ ನಾಗ ಚೈತನ್ಯ ಅವರೊಂದಿಗೆ 'ವೃಷಕರ್ಮ' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
'ವೃಷಕರ್ಮ' ಮಾತ್ರವಲ್ಲದೆ, ಮೀನಾಕ್ಷಿ ಅವರು ಬಾಲಿವುಡ್ ನಟ ಜಾನ್ ಅಬ್ರಾಹಂ ಜೊತೆ 'ಫೋರ್ಸ್ 3' (Force 3) ಹಿಂದಿ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ ಎಂದು ವರದಿಯಾಗಿದೆ.