ವಿಜಯವಾಣಿ ಸುದ್ದಿ ಜಾಲ
ಕೀರ್ತಿ ಸುರೇಶ್ ಅವರ ತಂದೆ ಜಿ. ಸುರೇಶ್ ಕುಮಾರ್ ಮಲಯಾಳಂ ಚಿತ್ರರಂಗದ ಪ್ರಸಿದ್ಧ ನಿರ್ಮಾಪಕರಾಗಿದ್ದು, ತಾಯಿ ಮೇನಕಾ ಖ್ಯಾತ ಹಿರಿಯ ನಟಿಯಾಗಿದ್ದಾರೆ.
ಬಾಲನಟಿಯಾಗಿ ಪಾದಾರ್ಪಣೆ
ತಮ್ಮ ವೃತ್ತಿಜೀವನವನ್ನು ಆರಂಭದಲ್ಲಿ ಬಾಲನಟಿಯಾಗಿಯೇ ಆರಂಭಿಸಿದ ಕೀರ್ತಿ, 2000ರ ದಶಕದ ಆರಂಭದಲ್ಲಿ ‘ಪೈಲಟ್ಸ್’, ‘ಕುಬೇರನ್’ ಮುಂತಾದ ಮಲಯಾಳಂ ಚಿತ್ರಗಳಲ್ಲಿ ಹಾಗೂ ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದರು.
ರಾಷ್ಟ್ರ ಪ್ರಶಸ್ತಿ ಗೌರವ
ಮಹಾನಟಿ ಸಾವಿತ್ರಿ ಅವರ ಜೀವನಾಧಾರಿತ ‘ಮಹಾನಟಿ’ (2018) ಚಿತ್ರದಲ್ಲಿನ ಅದ್ಭುತ ನಟನೆಗಾಗಿ ಕೀರ್ತಿಗೆ ಅತ್ಯುತ್ತಮ ನಟಿ ವಿಭಾಗದಲ್ಲಿ ‘ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ’ ಲಭಿಸಿತು.
ಬಹುಭಾಷಾ ತಾರೆ
ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗಗಳಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿರುವ ಕೀರ್ತಿ ‘ರೆಮೋ’, ‘ಸರ್ಕಾರ್’, ‘ದಸರಾ’ ಸೇರಿದಂತೆ ಹಲವು ಯಶಸ್ವಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಅಕ್ಕನಾಗಿ ಕೀರ್ತಿ!
ಅಕ್ಕ ಇದೊಂದು ವೆಬ್ ಸೀರಿಸ್ ಆಗಿದ್ದು, ಇದರಲ್ಲಿ ಕೀರ್ತಿ ಸುರೇಶ್ ಅತ್ಯಂತ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸರಣಿಯು ಅಕ್ಟೋಬರ್ 30 ರಂದು ನೆಟ್ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗುತ್ತಿದೆ.