"ಬೇಬಿ ಜಾನ್​" ಬೆಡಗಿ ಕೀರ್ತಿ ಸುರೇಶ್​!

ವಿಜಯವಾಣಿ ಸುದ್ದಿ ಜಾಲ

ಕೀರ್ತಿ ಹಿನ್ನಲೆ

ಕೀರ್ತಿ ಸುರೇಶ್ 17 ಅಕ್ಟೋಬರ್ 1992 ರಂದು ಚೆನ್ನೈನಲ್ಲಿ ಜನಿಸಿದರು. ತಂದೆ ಮಲಯಾಳಂ ನಿರ್ಮಾಪಕ ಜಿ. ಸುರೇಶ್ ಕುಮಾರ್ ಖ್ಯಾತ ನಟಿ ಮೆನಕಾ ಇವರ ತಾಯಿಯಾಗಿದ್ದಾರೆ. ಕೀರ್ತಿಗೆ ರೇವತಿ ಸುರೇಶ್ ಎಂಬ ಅಕ್ಕ ಇದ್ದಾರೆ.

ಫ್ಯಾಷನ್ ಡಿಸೈನಿಂಗ್ ಪದವಿಧರೆ

ಕೀರ್ತಿ ಚೆನ್ನೈನಲ್ಲಿ ಶಾಲಾ ಶಿಕ್ಷಣ ಮುಗಿಸಿ, ಕೊಚ್ಚಿಯ ಪರ್ಲ್ ಅಕಾಡೆಮಿಯಿಂದ ಫ್ಯಾಷನ್ ಡಿಸೈನಿಂಗ್ ಪದವಿ ಪಡೆದಿದ್ದಾರೆ. ಬಾಲ್ಯದಿಂದಲೂ ನಟನೆಯಲ್ಲಿ ಆಸಕ್ತಿ ಇದ್ದರೂ, ಮೊದಲು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.

ಬಾಲನಟಿಯಾಗಿ ಪಾದಾರ್ಪಣೆ

ಕೀರ್ತಿ 2000 ರಲ್ಲಿ 'ಪೈಲಟ್ಸ್' ಚಿತ್ರದ ಮೂಲಕ ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಕುಬೇರನ್, ವೆಟ್ಟಂ ಸೇರಿದಂತೆ ಕೆಲವು ಮಲಯಾಳಂ ಚಿತ್ರಗಳಲ್ಲಿ ಬಾಲ ಪಾತ್ರಗಳಲ್ಲಿ ಕಾಣಿಸಿಕೊಂಡು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.

ನಾಯಕಿಯಾಗಿ ಚೊಚ್ಚಲ ಚಿತ್ರ

ಕೀರ್ತಿ 2013 ರಲ್ಲಿ ಮಲಯಾಳಂ ಚಿತ್ರ 'ಗೀತಾಂಜಲಿ' ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಆದರೆ 2015ರಲ್ಲಿ ವಿಕ್ರಮ್ ಪ್ರಭು ಜೊತೆಗಿನ ತಮಿಳು ಚಿತ್ರ 'ಇದು ಎನ್ನ ಮಾಯಂ' ಮತ್ತು ರಜಿನಿ ಮುರುಗನ್ ಚಿತ್ರಗಳಿಂದ ದೊಡ್ಡ ಬ್ರೇಕ್ ಪಡೆದರು.

ರಾಷ್ಟ್ರಪ್ರಶಸ್ತಿ ವಿಜೇತೆ

2018ರಲ್ಲಿ ನಟಿ ಸಾವಿತ್ರಿ ಜೀವನಾಧಾರಿತ ತೆಲುಗು ಚಿತ್ರ 'ಮಹಾನಟಿ' ಯಲ್ಲಿ ಅದ್ಭುತ ಅಭಿನಯಕ್ಕಾಗಿ ಕೀರ್ತಿ ರಾಷ್ಟ್ರೀಯ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ಈ ಚಿತ್ರ ಅವರ ವೃತ್ತಿ ಜೀವನದ ಮಹತ್ವದ ತಿರುವಾಗಿ ಪರಿಣಮಿಸಿತು ಮತ್ತು ಸ್ಟಾರ್ ಪಟ್ಟ ತಂದುಕೊಟ್ಟಿತು.

ಬಹುಭಾಷಾ ನಟಿ

ಕೀರ್ತಿ ಕೇವಲ ಮಳಿಯಾಳಂ ಮಾತ್ರವಲ್ಲದೆ, ಅನೇಕ ತಮಿಳು, ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ರೆಮೊ, ನೇನು ಲೋಕಲ್, ಸರ್ಕಾರ್, ಪೆಂಗ್ವಿನ್, ದಸರಾ, ಭೋಲಾ ಶಂಕರ್ ನಂತಹ ಹಿಟ್ ಚಿತ್ರಗಳಲ್ಲಿ ನಟಿಸಿ ದಕ್ಷಿಣ ಭಾರತದ ಟಾಪ್ ನಟಿಯರಲ್ಲಿ ಒಬ್ಬರಾಗಿ ಬೆಳೆದಿದ್ದಾರೆ

ವೈಯಕ್ತಿಕ ಜೀವನ

ಕೀರ್ತಿ ತಮ್ಮ ದೀರ್ಘಕಾಲದ ಗೆಳೆಯ ಆಂಟನಿ ತಟ್ಟಿಲ್ ಅವರನ್ನು ಡಿಸೆಂಬರ್ 2024 ರಲ್ಲಿ ಗೋವಾದಲ್ಲಿ ವಿವಾಹವಾದರು. ಸದ್ಯ ಅವರು ತಮಿಳು, ತೆಲುಗು ಜೊತೆಗೆ ಹಿಂದಿ ಭಾಷೆಯ ಬೇಬಿ ಜಾನ್ ಚಿತ್ರದ ಮೂಲಕ ಬಾಲಿವುಡ್​ಗೂ ಪ್ರವೇಶ ಪಡೆದಿದ್ದಾರೆ.