ಹಸಿರು ಸೀರೆಯಲ್ಲಿ ಐಶ್ವರ್ಯ ಶಿಂದೋಗಿ!

ವಿಜಯವಾಣಿ ಸುದ್ದಿ ಜಾಲ

ಐಶ್ವರ್ಯ ಹಿನ್ನಲೆ

ಬೆಂಗಳೂರಿನಲ್ಲಿ ಜನಿಸಿ ಬೆಳೆದ ಇವರು ತಮ್ಮ ಶಾಲಾ ಮತ್ತು ಕಾಲೇಜು ವಿದ್ಯಾಭ್ಯಾಸವನ್ನು ರಾಜಧಾನಿಯಲ್ಲೇ ಪೂರೈಸಿ, ಕಲೆಯ ಮೇಲಿನ ಅಪಾರ ಆಸಕ್ತಿಯಿಂದ ಚಿಕ್ಕ ವಯಸ್ಸಿನಲ್ಲೇ ಬಣ್ಣದ ಲೋಕದತ್ತ ಹೆಜ್ಜೆ ಇಟ್ಟು ಗಮನ ಸೆಳೆದರು.

ಸೀರಿಯಲ್ ನಟಿ

ಜನಪ್ರಿಯ ಧಾರಾವಾಹಿ ಮಂಗಳ ಗೌರಿ ಮದುವೆ ಮತ್ತು ಶಾಂಭವಿ ಸೀರಿಯಲ್​ಗಳಲ್ಲಿ ಕಾಣಿಸಿಕೊಂಡು ಕಿರುತೆರೆ ವೀಕ್ಷಕರಲ್ಲಿ ಮನೆಮಾತಾಗಿ ಅಪಾರ ಜನಪ್ರಿಯತೆ ಪಡೆದರು.

ರಿಯಾಲಿಟಿ ಶೋ ನಲ್ಲಿ ಭಾಗಿ

ಕೇವಲ ನಟನೆಯಷ್ಟೇ ಅಲ್ಲದೆ ಉತ್ತಮ ನೃತ್ಯಗಾರ್ತಿಯಾಗಿರುವ ಐಶ್ವರ್ಯಾ, 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ರಿಯಾಲಿಟಿ ಶೋನಲ್ಲಿ ಅದ್ಭುತ ಪ್ರದರ್ಶನಗಳನ್ನು ನೀಡಿ ಕಲಾಭಿಮಾನಿಗಳಿಂದ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.

ಪ್ರಮುಖ ಸಿನಿಮಾಗಳು

ಕೇವಲ ಧಾರಾವಾಹಿಗಳಿಗೆ ಸೀಮಿತವಾಗಿರದ ಐಶ್ವರ್ಯ, ಮಟಾಶ್​, ಸಂಯುಕ್ತ 2, ಗಧಾಯುದ್ಧ, ಜಾಕ್ಸನ್​ ಮೊದಲಾದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಬಿಗ್​ಬಾಸ್​ ಖ್ಯಾತಿ

ಸಿನಿಮಾ ಹಾಗೂ ಸಿರಿಯಲ್​ ಮಾಡಿಕೊಂಡಿದ್ದ ಐಶ್ವರ್ಯ, ಕನ್ನಡ ಬಿಗ್​ಬಾಸ್​ ಸೀಸನ್​ 11 ರಲ್ಲಿ ಸ್ಪರ್ದಿಯಾಗಿ ಪ್ರವೇಶಿಸಿದ್ದರು. ಬಿಗ್​ಬಾಸ್​ ಮನೆಯಲ್ಲಿ ಇವರು 90 ಕ್ಕೂ ಅಧಿಕ ದಿನಗಳವರೆಗೆ ಇದ್ದು 10 ನೇ ಸ್ಥಾನವನ್ನು ಪಡೆದುಕೊಂಡಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯ

ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿರುವ ನಟಿ, ತಮ್ಮ ಹೊಸ ಫೋಟೋಶೂಟ್‌ಗಳು, ಬ್ಯೂಟಿ ಟಿಪ್ಸ್ ಹಾಗೂ ವೈಯಕ್ತಿಕ ಜೀವನದ ಅಪ್‌ಡೇಟ್‌ಗಳನ್ನು ಹಂಚಿಕೊಳ್ಳುವ ಮೂಲಕ ಲಕ್ಷಾಂತರ ಇನ್‌ಸ್ಟಾಗ್ರಾಮ್ ಫಾಲೋವರ್ಸ್‌ಗಳೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ.