ನೈಸರ್ಗಿಕ ಎರೆಹುಳು ಗೊಬ್ಬರ ಬಳಸಿ

ಕೊಡೇಕಲ್: ಜಮೀನಿನಲ್ಲಿ ನೈಸರ್ಗಿಕ ಎರೆಹುಳು ಹಾಗೂ ಹಸಿರೆಲೆ ಗೊಬ್ಬರವನ್ನು ಯಥೇಚ್ಛವಾಗಿ ಬಳಕೆ ಮಾಡಿಕೊಂಡು ದುಡಿದರೆ ವಿವಿಧ ಮಾದರಿ ಬೆಳೆಗಳನ್ನು ಸುಲಭವಾಗಿ ಬೆಳೆಯಲು ಸಾಧ್ಯ ಎಂದು ಬೆಂಗಳೂರಿನ ಅಪೋಫ್ ಯೋಜನಾ ನಿರ್ದೇಶಕ ಶರತಕುಮಾರ ಹೇಳಿದರು.

ಅಮ್ಮಾಪುರ (ಎಸ್.ಕೆ) ಗ್ರಾಮದಲ್ಲಿ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರದ ಪರಂಪರಾಗತ ಕೃಷಿ ವಿಕಾಸ ಯೋಜನೆಯಡಿ ರೈತರಿಗಾಗಿ ಹಮ್ಮಿಕೊಂಡ ಸಾವಯವ ಕೃಷಿ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕೃಷಿ ಇಲಾಖೆ ಮಳೆಯಾಶ್ರೀತ ರೈತರ ಜೀವನ ಮಟ್ಟವನ್ನು ಉತ್ತಮಗೊಳಿಸಲು ಕೃಷಿ ಅಭಿಯಾನ, ಬೀಜೋಪಚಾರ, ಸಂವಾದ, ತರಬೇತಿ ಜತೆಗೆ ಕಾರ್ಯಾಗಾರ ಹಮ್ಮಿಕೊಳ್ಳುತ್ತಿದೆ, ರೈತರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕೊಡೇಕಲ್ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಚನ್ನಪ್ಪಗೌಡ ರಾಯನಗೋಳ ಮಾತನಾಡಿ, ಉತ್ತಮ ಇಳುವರಿಗೆ ಉತ್ತಮ ಗೊಬ್ಬರವನ್ನೇ ಬಳಸಬೇಕು, ಬೀಜದಲ್ಲಿ ಬದಲಾವಣೆ ಮಾಡದೆ ಹೋದರೂ ತಳಿಯಲ್ಲಾದರೂ ಬದಲಾವಣೆ ಮುಖ್ಯ, ಹಳೆಯ ಕಾಲದ ಪದ್ಧತಿ ಬದಿಗಿಟ್ಟು ಸುಧಾರಿತ ಕೃಷಿಯಲ್ಲಿ ತೊಡಗಿಕೊಳ್ಳುವುದು ಸರಿ, ಕಾಲ ಕಾಲಕ್ಕೆ ಮಣ್ಣಿನ ಸತ್ವ ಪರೀಕ್ಷಿಸಬೇಕು, ಕೃಷಿಕರು ವಿವಿಧ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

ಜೋಗುಂಡಬಾವಿ ಗ್ರಾಪಂ ಅಧ್ಯಕ್ಷ ಬಾಲನಗೌಡ ಮಾಲಿಪಾಟೀಲ್, ಆಪೋಫ್ ಪ್ರೋಜೇಕ್ಟ್ ಕೋ-ಆರ್ಡಿನೇಟರ್ ಗದ್ದೆಪ್ಪಗೌಡ, ಭೀಮನಗೌಡ, ರಾಮನಗೌಡ ಮಾಲಿಪಾಟೀಲ್, ರಾಜಶೇಖರ, ಇಮಾಮಸಾಬ ಹಗರಟಗಿ, ಕಾಶೀರಾಮ ರಾಠೋಡ, ರಫೀಕ್, ಮುಸ್ತಫಾ ಸೇರಿದಂತೆ ಗ್ರಾಮದ ರೈತರು ಹಾಗೂ ಗ್ರಾಮಸ್ಥರು, ರೈತ ಅನುಗಾರರು ಇತರರಿದ್ದರು

Leave a Reply

Your email address will not be published. Required fields are marked *