ರೇವತಗಾವ: ಛಟ್ಟಿ ಅಮಾವಾಸ್ಯೆ ದಿನ ಭಾನುವಾರ ವಿಜಯಪುರ ತಾಲೂಕಿನ ಅರಕೇರಿ- ಜಾಲಗೇರಿ ಭಾಗದ ಮುಮ್ಮಟ್ಟಿಗುಡ್ಡದ ಅಮೋಘಸಿದ್ಧೇಶ್ವರ ಜಾತ್ರೆ ವಿಜೃಂಭಣೆಯಿಂದ ಜರುಗಿತು.
ಉತ್ತರ ಕರ್ನಾಟಕ, ಮಹಾರಾಷ್ಟ್ರ ಸೇರಿ ವಿವಿಧೆಡೆಯಿಂದ ನೂರಾರು ಪಲ್ಲಕ್ಕಿಗಳ ಭೇಟಿ ಸಂಭ್ರಮ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯಿತು.
ಭಕ್ತರು ಭಂಡಾರವನ್ನು ಪಲ್ಲಕ್ಕಿಗಳ ಮೇಲೆ ಎರಚಿ ನಮಿಸಿದರು. ಇಡೀ ಅಮೋಘ ಸಿದ್ಧೇಶ್ವರ ದೇವಸ್ಥಾನದ 100 ಎಕರೆ ಪ್ರಾಂಗಣ ಭಂಡಾರಮಯವಾಗಿತ್ತು.
ಮಧ್ಯಾಹ್ನ 2.30ಕ್ಕೆ ಆರಂಭವಾಗುವ ಪಲ್ಲಕ್ಕಿಗಳ ಭೇಟಿ ಸಂಜೆ 7ರವರೆಗೆ ನಡೆಯಿತು. ಭಕ್ತರು ಭಂಡಾರ, ಖಾರೀಕ್, ಕುರಿ ಉಣ್ಣೆಯನ್ನು ಪಲ್ಲಕ್ಕಿಗಳ ಮೇಲೆ ಹಾರಿಸಿ ನಮಿಸಿದರು.