ಮಂಡ್ಯ: ಶಿವಶರಣೆ ಅಮ್ಮಯ್ಯಮ್ಮ ದುರ್ಗೇಗೌಡ ಪ್ರತಿಷ್ಠಾನದ ವತಿಯಿಂದ ತಾಲೂಕಿನ ಹಲ್ಲೇಗೆರೆ ಗ್ರಾಮದ ದಂಡಿನಮ್ಮ ಲಕ್ಷ್ಮಿದೇವಿ ದೇವಸ್ಥಾನದ ಆವರಣದಲ್ಲಿ ನ.11ರಂದು ನಾಲ್ಕನೇ ವರ್ಷದ ಶಿವಾರಾಧಾನ ಶರಣ ಸಮ್ಮೇಳನ, ಜಿಲ್ಲಾಮಟ್ಟದ ತತ್ವಪದ ಸ್ಪರ್ಧೆ, ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ಶಂಕರ್ ತಿಳಿಸಿದರು.
ಅಂದು ಬೆಳಗ್ಗೆ 10ಗಂಟೆಗೆ ಆದಿಚುಂಚನಗಿರಿ ಕೊಮ್ಮೇರಹಳ್ಳಿ ಶಾಖಾಮಠದ ಮುಖ್ಯಸ್ಥ ಪುರುಷೋತ್ತಮಾನಂದನಾಥ ಸ್ವಾಮೀಜಿ ಸಾನಿಧ್ಯದಲ್ಲಿ ಮೈಸೂರು ಬಸವಜ್ಞಾನ ಮಂದಿರದ ಅಧ್ಯಕ್ಷೆ ಡಾ.ಮಾತೆ ಬಸವಾಂಜಲಿದೇವಿ ಕಾರ್ಯಕ್ರಮ ಉದ್ಘಾಟಿಸುವರು. ಸಾಹಿತಿ ಪ್ರದೀಪ್‌ಕುಮಾರ್ ಹೆಬ್ರಿ ಅಧ್ಯಕ್ಷತೆ ವಹಿಸುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶಿವಶರಣೆ ಅಮ್ಮಯ್ಯಮ್ಮ ದುರ್ಗೇಗೌಡ ಅಧ್ಯಾತ್ಮ ರತ್ನ ಪ್ರಶಸ್ತಿ-2024 ಅನ್ನು ಲೇಖಕ ತ.ನಾ.ಶಿವಕುಮಾರ್ ಅವರಿಗೆ ಹಾಸನ ವೀರಭದ್ರೇಶ್ವರ ಮಠದ ನಂದೀಶ್ವರಸ್ವಾಮಿ ಅವರು 10 ಸಾವಿರ ರೂ ನಗದಿನ ಪ್ರದಾನ ಮಾಡುವರು. ಡಾ.ಶಂಕರ್ ವಿರಚಿತ ತತ್ವಪದಗಳ ದೇಹವೆಂಬೋ ಡಂಬ ಸಿ.ಡಿ ಯನ್ನು ಹಾಸನ ಜವನಹಳ್ಳಿ ಮಠದ ಸಂಗಮೇಶ್ವರ ಸ್ವಾಮೀಜಿ ಹಾಗೂ ತತ್ವಪದಗಳು ಭಾಗ-4 ಪುಸ್ತಕವನ್ನು ಕೊಡಗಿನ ಎಡೆಮೂಡ್ನಳ್ಳಿಯ ವಿರಕ್ತ ಮಠದ ಮಲ್ಲೇಶ್ವರ ಸ್ವಾಮೀಜಿ, ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ಅವರ ಸುಜ್ಞಾನ ಚಿಂತನೆ ಪುಸ್ತಕವನ್ನು ಧನಗೂರು ವೀರಸಿಂಹಾಸನ ಮಠದ ಮುಮ್ಮಡಿ ಷಡಕ್ಷರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಬಿಡುಗಡೆ ಮಾಡುವರು. ಮಧ್ಯಾಹ್ನ 3 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಭೈರಮಂಗಲ ರಾಮೇಗೌಡ ಅವರನ್ನು ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಅಭಿನಂದಿಸುವರು ಎಂದು ವಿವರಿಸಿದರು.
ಪ್ರತಿಷ್ಠಾನದ ಉಪಾಧ್ಯಕ್ಷ ಸಂಗೀತಾ, ಹಿರಿಯ ಕಲಾವಿದ ಸಿ.ಪಿ.ವಿದ್ಯಾಶಂಕರ್ ಇದ್ದರು.
ನ.11ರಂದು ಹಲ್ಲೇಗೆರೆಯಲ್ಲಿ ಶರಣ ಸಮ್ಮೇಳನ: ಪ್ರತಿಷ್ಠಾನದ ಅಧ್ಯಕ್ಷ ಡಾ.ಶಂಕರ್ ಮಾಹಿತಿ
You Might Also Like
Alcohol In Winter: ಚಳಿಯಲ್ಲಿ ಮದ್ಯ ಸೇವನೆ ಎಷ್ಟು ಅಪಾಯಕಾರಿ ಗೊತ್ತಾ?
Alcohol In Winter: ಚಳಿಗಾಲ ಆರಂಭವಾಗಿದೆ ಮತ್ತು ತಾಪಮಾನವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಲ್ಲದೆ, ಜ್ವರ…
ಚಳಿಗಾಲದಲ್ಲಿ ಸೀಬೆಹಣ್ಣನ್ನು ಹೇಗೆ ತಿಂದರೆ ಆರೋಗ್ಯಕ್ಕೆ ಪ್ರಯೋಜನಕಾರಿ; ಇಲ್ಲಿದೆ ಉಪಯುಕ್ತ ಮಾಹಿತಿ | Health Tips
ಸೀಬೆಹಣ್ಣು ತಿನ್ನುವುದರಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು. ತಲೆಯಿಂದ ಕಾಲ್ಬೆರಳು ಉಗುರುಗಳವರೆಗೆ ಆರೋಗ್ಯಕರವಾಗಿರಲು ಇದು ಕಿತ್ತಳೆಗಿಂತ ಹೆಚ್ಚು…
ಕಾಂತಿಯುತ ತ್ವಚೆ ನಿಮ್ಮದಾಗಬೇಕೇ?; ಮಲಗುವ ಮುನ್ನ ಈ ಟಿಪ್ಸ್ ಫಾಲೋ ಮಾಡಿ | Health Tips
ಸುಂದರ, ಆಕರ್ಷಣಿಯ ಮತ್ತು ಹೊಳೆಯುವ ಚರ್ಮವನ್ನು ಪಡೆಯಲು ಹಗಲಿನಲ್ಲಿ ಮಾತ್ರವಲ್ಲ ರಾತ್ರಿ ವೇಳೆಯು ಚರ್ಮದ ಕಾಳಜಿ…